ಎಲ್ಲಾ ರೀತಿಯ ವಾಮಾಚಾರಗಳಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಈ ಸುಲಭ ಪ್ರತಿತಂತ್ರಗಳನ್ನು ಮಾಡಿ, ಹತ್ತಿರ ಕೂಡ ಸುಳಿಯುವುದಿಲ್ಲ. ಯಾವ್ಯಾವು ಗೊತ್ತೇ??

88

ನಮಸ್ಕಾರ ಸ್ನೇಹಿತರೇ ಇಂದಿನ ಕಲಿಯುಗದಲ್ಲಿ ಬಹುತೇಕ ಎಲ್ಲಾ ಮಂದಿಯೂ ಕೂಡ ತಾನೇ ಗೆಲ್ಲಬೇಕು ತನ್ನ ನಿಯಂತ್ರಣದಲ್ಲಿ ಎಲ್ಲಾ ಕಾರ್ಯಗಳು ಇರಬೇಕು ಎಂಬುದಾಗಿ ಅಂದುಕೊಳ್ಳುತ್ತಾರೆ. ಬೇರೆಯವರ ಪ್ರಗತಿಯನ್ನು ನೋಡಲು ಹೊಟ್ಟೆಕಿಚ್ಚು ಪಡುವವರು ಹೆಚ್ಚಿದ್ದಾರೆ. ಈ ಕಾರಣದಿಂದಾಗಿಯೇ ವಾಮಮಾರ್ಗದಲ್ಲಿ ಗೆಲುವನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಅದೇನೆಂದರೆ ತಮ್ಮ ಎದುರಾಳಿ ವ್ಯಕ್ತಿಗೆ ಮಾಟ-ಮಂತ್ರ ವಾಮಾಚಾರವನ್ನು ಮಾಡುವುದು. ಒಂದು ವೇಳೆ ನಿಮ್ಮ ಮನೆಗೆ ಅಥವಾ ನಿಮ್ಮ ಮೇಲೆ ವಾಮಾಚಾರ ವಾಗಿದೆ ಎಂಬ ಸುಳಿವು ನಿಮಗೆ ಸಿಕ್ಕಿದ್ದರೆ ಅದರಿಂದ ಹೇಗೆ ಹೊರಬರಬಹುದು ಎಂಬ ಕುರಿತಂತೆ ಎಂದು ಹೇಳಲು ಹೊರಟಿದ್ದೇವೆ. ಈಗ ನಾವು ಹೇಳಲು ಹೊರಟಿರುವ ಅಂಶಗಳಿಂದ ನೀವು ಮನೆಯಲ್ಲೇ ಕೂತು ವಾಮಾಚಾರ ಗಳಿಂದ ಹೊರ ಬರಬಹುದಾಗಿದೆ. ಹಾಗಿದ್ದರೆ ಈ ವಿಚಾರದ ಕುರಿತಂತೆ ಸಮಗ್ರ ವಿವರವಾಗಿ ತಿಳಿಯೋಣ ಬನ್ನಿ.

ಒಂದು ವೇಳೆ ಪ್ರತಿದಿನ ರಾತ್ರಿ ನಿಮಗೆ ಯಾವುದು ನೆರಳಿನ ಕಾರಣದಿಂದಾಗಿ ಅಥವಾ ಕಾಣದ ಭಯದ ಕಾರಣಕ್ಕಾಗಿ ನಿದ್ದೆ ಬರುತ್ತಿಲ್ಲ ಎಂದು ಅನಿಸಿದರೆ ಗಾಳಿಯಂತ್ರವನ್ನು ನಿಮ್ಮ ತಲೆದಿಂಬಿನ ಅಡಿಯಲ್ಲಿ ಇಟ್ಟುಕೊಂಡರೆ, ನಿಮ್ಮನ್ನು ಕಾಡುತ್ತಿರುವ ನಕಾರಾತ್ಮಕ ಶಕ್ತಿ ನಿಮ್ಮಿಂದ ದೂರ ಹೋಗುತ್ತದೆ.

ಒಂದು ವೇಳೆ ರಾತ್ರಿಹೊತ್ತಿನಲ್ಲಿ ನಿಮ್ಮನ್ನು ದುಷ್ಟಶಕ್ತಿಗಳು ಕಾಡುತ್ತಿವೆ ಎಂಬುದಾಗಿ ನೀವು ಅಂದುಕೊಂಡರೆ ಅಥವಾ ಕಳವಳ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದರೆ, ನೀವು ಮಲಗುವ ಹಾಸಿಗೆಯ ಸುತ್ತ ಹಸಿ ಉಪ್ಪನ್ನು ಹಾಕಬೇಕು. ಇದರಿಂದಾಗಿ ನಿಮ್ಮ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಪ್ರತಿದಿನ ನಿಮಗೆ ಕಾಣದ ನಕಾರಾತ್ಮಕ ಶಕ್ತಿಯಿಂದ ತೊಂದರೆ ಆಗುತ್ತಿದೆ ಎಂಬುದಾಗಿ ನೀವು ಮನಸ್ಸಿನಲ್ಲಿ ಭಾವಿಸುತ್ತಿದ್ದರೆ ಪ್ರತಿದಿನ ಹನುಮಂತನ ದೇವಾಲಯದಿಂದ ತಂದಿರುವ ಕುಂಕುಮವನ್ನು ನಿಮ್ಮ ಹಣೆಯ ಮೇಲೆ ಇಟ್ಟುಕೊಳ್ಳಬೇಕು. ಇದಕ್ಕಿರುವ ಶಕ್ತಿ ಅಪರಿಮಿತ ಎಂದು ಈಗಾಗಲೇ ಸಾಬೀತಾಗಿದೆ.

ಒಂದು ವೇಳೆ ನಿಮಗೆ ನಿಮ್ಮ ಮೇಲೆ ವಾಮಾಚಾರ ಆಗಿದೆ ಅಥವಾ ಕೆಟ್ಟ ಕಣ್ಣು ಬಿದ್ದಿದೆ ಎಂಬುದಾಗಿ ಭಾವನೆಗೆ ಬಂದಾಕ್ಷಣವೇ ಅದೇ ದಿನ ಸಂಜೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಕಾಲಿನಿಂದ ತಲೆಯವರೆಗೂ 21 ಬಾರಿ ಸುತ್ತು ಬರಿಸಬೇಕು ಹಾಗೂ ನಾಲ್ಕು ಭಾಗಗಳನ್ನಾಗಿ ಮಾಡಿ ನಾಲ್ಕು ದಿಕ್ಕುಗಳಿಗೆ ಎಸೆಯಬೇಕು. ಹೀಗೆ ಮಾಡುವುದು ಶಕ್ತಿಯನ್ನು ದೂರಮಾಡಲು ಪರಿಣಾಮಕಾರಿಯಾಗುತ್ತದೆ.

ಒಂದು ವೇಳೆ ನಿಮ್ಮ ಇಡೀ ಕುಟುಂಬಕ್ಕೆ ವಾಮಾಚಾರ ಮಾಡಿಸಿ ನಕಾರಾತ್ಮಕ ಶಕ್ತಿ ಕಾಡುವಂತೆ ಮಾಡಿದ್ದರೆ ಅಮಾವಾಸ್ಯೆಯಿಂದ ಹುಣ್ಣಿಮೆಯ ವರೆಗೂ ಪ್ರತಿದಿನ ಗಂಗಾಜಲ ಹಾಗೂ ಗೋಮೂತ್ರವನ್ನು ಮನೆಯ ಪ್ರತಿಯೊಂದು ಮೂಲೆಯಲ್ಲೂ ಹಾಗೂ ಮನೆಯ ಪ್ರತಿಯೊಬ್ಬರಿಗೂ ಸಿಂಪಡಿಸಬೇಕು ಹಾಗೂ ಲೋಭಾನದ ಹೊಗೆಯನ್ನು ಕೂಡ ಹಾಕಬೇಕು.

ಮನೆಯಲ್ಲಿ ಒಂದು ವೇಳೆ ಯಾರಾದರೂ ಕೆಲಸ ಅಥವಾ ಬೇರೆ ಯಾವುದೇ ಜವಾಬ್ದಾರಿಯನ್ನು ಕಳೆದುಕೊಂಡು ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದರೆ ನಿಮ್ಮ ಮನೆಯಲ್ಲಿ ಯಾವುದಾದರೂ ವಿಚಿತ್ರವಾದ ವಸ್ತು ಸಿಗುತ್ತದೆಯೇ ಎಂಬುದನ್ನು ಮೊದಲು ಹುಡುಕಬೇಕು. ಅವುಗಳನ್ನು ಸುಟ್ಟು ಹಾಕಬೇಕು. ಇದಾದ ನಂತರ ಸ್ವಲ್ಪ ಗಂಗಾಜಲ ಪ್ರೋಕ್ಷಣೆ ಮಾಡಿ ಧೂಪವನ್ನು ಹಚ್ಚಿದರೆ ಎಲ್ಲಾ ಸರಿ ಹೋಗುತ್ತದೆ.

ಒಂದು ವೇಳೆ ನಿಮಗೆ ನಿಮ್ಮ ಮೇಲೆ ವಾಮಾಚಾರ ಆಗಿರುವುದು ಗೊತ್ತಾದ ಮೇಲೂ ಕೂಡ ನಿಮ್ಮ ಬಳಿ ಅದಕ್ಕೆ ಮಾಡಿಸಬೇಕಾದ ಪೂಜೆಗೆ ಅಥವಾ ಕಂಡುಕೊಳ್ಳಬೇಕಾದ ಯಂತ್ರಕ್ಕೆ ಹಣವಿಲ್ಲದಿದ್ದರೆ ನಿಮ್ಮಷ್ಟೇ ಉದ್ದದ ಹಳದಿ ಹಾಗೂ ಕೆಂಪು ಬಣ್ಣದ ದಾರವನ್ನು ನಾಲ್ಕು ಸುತ್ತು ಮಡಚಿ ಮಹಾಕಾಳಿ ಹಾಗು ದುರ್ಗ ಮಂತ್ರವನ್ನು ಜಪಿಸುತ್ತಾ 7 ಗಂಟುಗಳನ್ನು ಹಾಕಿ ಮಹಾಕಾಳಿಯನ್ನು ಬೇಡಿಕೊಂಡು ಕೈಗೆತ್ತಿಕೊಳ್ಳಿ ಇದು ನಿಮ್ಮನ್ನು ನಕರಾತ್ಮಕ ಶಕ್ತಿ ಹಾಗು ವಾಮಾಚಾರ ಗಳಿಂದ ರಕ್ಷಿಸುತ್ತದೆ. ಈ ವಿಚಾರಗಳನ್ನು ತಪ್ಪದೆ ವಾಮಾಚಾರ ಗಳಿಂದ ತಪ್ಪಿಸಿಕೊಳ್ಳಲು ಪಾಲಿಸಬೇಕಾಗುತ್ತದೆ.