ಕೈಕೇಯಿ ಸರಿಯಾಗಿ 14 ವರ್ಷಗಳೇ ರಾಮನಿಗೆ ವನವಾಸ ಎಂದು ಹೇಳಿದ್ದು ಯಾಕೆ ಗೊತ್ತೇ? ಇನ್ನು ಹೆಚ್ಚು ಅಥವಾ ಜೀವ ಪೂರ್ತಿ ಕೇಳಲಿಲ್ಲ ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಶ್ರೀ ರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಹೋಗಲು ಕಾರಣರಾದ ಕೈಕೆಯ ಉದ್ದೇಶವೇನಿತ್ತು ಎಂದು ತಿಳಿದರೆ ಅವರ ರಾಜಕೀಯ ಕುತಂತ್ರ ಬುದ್ದಿ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನ ತಿಳಿಯಬಹುದು. ಹಿಂದೂಗಳ ಪ್ರಮುಖ ಗ್ರಂಥಗಳಲ್ಲಿ ರಾಮಾಯಣ ಕೂಡ ಒಂದಾಗಿದೆ. ವಾಲ್ಮಿಕಿ ಬರದ ಈ ರಾಮಾಯಣವನ್ನು ಓದಿದರೆ ಮಾಡಿದ ಪಾಪಗಳಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಕೂಡ ನಮ್ಮಲ್ಲಿ ಉಂಟು. ಅಂದರೆ ಅಷ್ಟರ ಮಟ್ಟಿಗೆ ಈ ರಾಮಾಯಣ ಗ್ರಂಥಕ್ಕೆ ಪ್ರಾಶಸ್ತ್ಯ ಮಹತ್ವವನ್ನು ನೀಡಲಾಗುತ್ತದೆ.
ರಾಮಾಯಣ ಅಂದರೆ ರಾಮನ ಕಥೆ ಎಂದು ಅರ್ಥ ಎಂದು ತಿಳಿದು ಬರುತ್ತದೆ. ಶ್ರೀ ರಾಮನ ಜೀವನದಲ್ಲಿ ನಡೆದಂತಹ ಘಟನೆಗಳನ್ನ ಆಧರಿಸಿ ಬರೆದ ಕಥೆಯೇ ಈ ರಾಮಾಯಣ ಎಂದು ತಿಳಿಸಿದ್ದಾರೆ. ಆದರೆ ಇಂದಿಗೂ ಕೂಡ ಈ ರಾಮಾಯಾಣ ಮತ್ತು ಮಹಾಭಾರತಗಳು ಪುರಾಣವೋ ಅಥವಾ ನಡೆದಿರುವಂತಹ ಇತಿಹಾಸವೋ ಎಂಬುದು ಚರ್ಚೆಯಲ್ಲಿದೆ. ಇದಕ್ಕೆ ಇಂದಿಗೂ ಸಹ ಸ್ಪಷ್ಟವಾದ ಉತ್ತರ ಸಿಕ್ಕದಿದ್ದರು ಅವರವರ ನಂಬಿಕೆಗಳ ಆಧಾರದ ಮೇಲೆ ಈ ಗ್ರಂಥಗಳನ್ನ ಅಧ್ಯಾಯನ ಮಾಡಲಾಗುತ್ತದೆ.

ರಾಮಾಯಣ ಕಥೆಯು ಪ್ರಮುಖವಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ಮಹಾರಾಜನ ಪುತ್ರನಾದ ಶ್ರೀರಾಮ ಪಟ್ಟಾಭಿಷೇಕ ಪ್ರಕ್ರಿಯೆದಿಂದ ಆರಂಭವಾಗಿ ಅಂತಿಮವಾಗಿ ರಾಮನು ಪಟ್ಟಾಭಿಷೇಕ ಪಡೆದು ರಾಜ್ಯಧಿಕಾರ ಪಡೆಯುವ ಮೂಲಕ ಅಂತ್ಯಗೊಳ್ಳುತ್ತದೆ. ಇದರ ನಡುವೆ ನಡೆಯುವಂತಹ ಸಂಗತಿಗಳು ರಾಮಾಯಣದ ಮೂಲಾಂಶವಾಗಿರುತ್ತದೆ. ದಶರಥ ಮಹರಾಜನು ಅಸುರರು ಮತ್ತು ದೇವತೆಗಳ ನಡುವೆ ಯುದ್ದವಾಗುತ್ತಿದ್ದಾಗ ತಮ್ಮ ದೈವಿಕ ರಥವನ್ನು ಏರಿ ದೇವತೆಗಳ ಪರವಾಗಿ ಯುದ್ದ ಮಾಡುವಾಗ ರಣರಂಗದಲ್ಲಿ ಹೋರಾಡುತ್ತಿರುತ್ತಾರೆ.
ದಶರಥ ಮಹರಾಜರಿಗೆ ಸಾರಥಿಯಾಗಿ ಕೈಕೆ ಜೊತೆಯಲ್ಲಿರುತ್ತಾರೆ. ಯುದ್ದ ನಡೆಯುತ್ತಿರುವ ಸಂಧರ್ಭದಲ್ಲಿ ದೈವಿಕ ರಥದ ಚಕ್ರ ಮುರಿಯುವಂತಹ ಸನ್ನಿವೇಶ ಏರ್ಪಡುತ್ತದೆ. ಆಗ ಕೈಕೆಯು ತನ್ನ ಮಾಯಾಜಾಲ ವಿದ್ಯೆಯಿಂದ ಚಕ್ರ ಮುರಿಯದಂತೆ ರಕ್ಷಣೆ ಮಾಡುತ್ತಾರೆ. ಕೈಕೆಯು ತನ್ನ ಪ್ರಾಣ ಉಳಿಸಿದ ಸಾಹಸಿ ವೈಖರಿ ಕಂಡು ಮೆಚ್ಚಿ ಸಂತಸ ಪಟ್ಟು ಕೈಕೆಗೆ ನಿನಗೆ ಇಷ್ಟ ಬಂದಂತಹ ವರವನ್ನು ಕೇಳು ಎಂದು ವಚನ ನೀಡುತ್ತಾರೆ.
ಇದೇ ಸಂಧರ್ಭವನ್ನು ಸದುಪಯೋಗ ಪಡಿಸಿಕೊಂಡು ಶ್ರೀ ರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿ ಎಂದು ಬೇಡಿಕೆ ಇಡುತ್ತಾರೆ. ಆಗ ದಶರಥ ಮಹರಾಜರು ಪುತ್ರ ವ್ಯಾಮೋಹ ಇದ್ದರು ಕೂಡ ಕೊಟ್ಟ ವಚನಕ್ಕೆ ಕಟ್ಟು ಬಿದ್ದು, ಶ್ರೀರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸ ಕಳುಹಿಸುತ್ತಾರೆ. ದಶರಥ ನ ಪ್ರಿಯವಾಗಿದ್ದ ಶ್ರೀರಾಮನ ಮುಂದಿನ ಚಕ್ರವರ್ತಿ ಎಂದು ರಾಜ್ಯದ ಜನರು ನಂಬಿರುತ್ತಾರೆ. ಆದರೆ ಕೈಕೆಯ ಸ್ವಂತ ಮಗನ ವ್ಯಾಮೋಹದ ಪರಿಣಾಮ ಶ್ರೀ ರಾಮನಿಗೆ ವನವಾಸದ ಶಿಕ್ಷೆ ಎದುರಾಗುತ್ತದೆ.
ಕೈಕೆಯು ಶ್ರೀ ರಾಮ ವನವಾಸಕ್ಕೆ ಹೋದ ನಂತರ ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಲು ಮುಂದಾಗುತ್ತಾರೆ. ಆದರೆ ಭರತನು ತನ್ನ ಅಣ್ಣ ಶ್ರೀ ರಾಮನೇ ಆ ಸಿಂಹಾಸನಕ್ಕೆ ಸೂಕ್ತ ಸಮರ್ಥನಾದ ವ್ಯಕ್ತಿ ನಾನು ಯಾವುದೇ ಕಾರಣಕ್ಕೂ ಆ ಚಕ್ರವರ್ತಿ ಸ್ಥಾನವನ್ನು ತುಂಬಲಾರೆ ಎಂದು ತನ್ನ ಅಣ್ಣ ಶ್ರೀ ರಾಮನ ಪಾದರಕ್ಷೆಯನ್ನು ಸಿಂಹಾಸನದ ಮೇಲೆ ಇಡುತ್ತಾರೆ. ಕೈಕೆಯು ರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಲು ಬೇಡಿಕೆ ಇಡಲು ಪ್ರಮುಖ ಕಾರಣ ಅಂದರೆ,

ಅಂದಿನ ದಿನದ ರಾಜನೀತಿಯ ಪ್ರಕಾರ ಯಾವ ರಾಜ ಹದಿನಾಲ್ಕು ವರ್ಷಗಳ ತನ್ನ ರಾಜ್ಯಧಿಕಾರದಿಂದ ದೂರ ಇರುತ್ತಾನೋ ಅವರು ಚಕ್ರವರ್ತಿಯಾಗಲು ಅನರ್ಹ ಅಸಾಧ್ಯ ಎಂಬ ನಿಯಮ ಇರುತ್ತದೆ. ಇದೇ ರಾಜನೀತಿ ಅರಿತ ಕೈಕೆಯು ಈ ಹದಿನಾಲ್ಕು ವರ್ಷಗಳಿಂದ ಶ್ರೀ ರಾಮನನ್ನು ದೂರ ಇಟ್ಟರೆ ತನ್ನ ಮಗ ರಾಜ್ಯದ ಚಕ್ರವರ್ತಿ ಆಗುತ್ತಾನೆ ಎಂದು ಆಸೆ ಇಟ್ಟಿರುತ್ತಾರೆ. ಇತ್ತ ಭರತ ನು ಸಿಂಹಾಸನದ ಮೇಲೆ ಶ್ರೀ ರಾಮನ ಪಾದರಕ್ಷೆ ಇಟ್ಟಿದ್ದ ಕಾರಣ ಹದಿನಾಲ್ಕು ವರ್ಷಗಳ ಕಾಲ ವನವಾಸ ಮುಗಿಸಿ ಬಂದ ನಂತರವೂ ಶ್ರೀ ರಾಮನಿಗೆ ಪಟ್ಟಾಭಿಷೇಕ ಪಡೆದು ಅಯೋಧ್ಯೆಯ ರಾಜ್ಯವನ್ನು ಆಳುತ್ತಾರೆ.