ನಾಗ ಚೈತನ್ಯ ರವರ ಫ್ಯಾಮಿಲಿ ಕುರಿತಂತೆ ಮತ್ತೆ ಪರೋಕ್ಷ ಒಲವು ತೋರಿಸುತ್ತಿದ್ದೀರಾ ನಟಿ ಸಮಂತಾ?? ಅಭಿಮಾನಿಗಳಿಗೆ ಗರಿಗೆದರಿದ ಉತ್ಸಾಹ.

51

ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವಂತಹ ವಿಚಾರವೆಂದರೆ ಅದು ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ. ಹೌದು ಗೆಳೆಯರೇ ಹಲವಾರು ವರ್ಷಗಳ ಕಾಲ ಪ್ರೀತಿಸಿ ನಂತರ 2017 ರಲ್ಲಿ ವಿವಾಹವಾಗಿದ್ದರು. ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ ಇಬ್ಬರು ಯಾವ ಕಾರಣಕ್ಕಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡರು ಎಂಬುದಾಗಿ ಇಂದಿಗೂ ಕೊಡು ತಿಳಿದುಬಂದಿಲ್ಲ.

ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರ ಬೇರೆ ಆಗುವಿಕೆ ಯನ್ನು ನೋಡಿ ದುಃಖಿಸಿದ್ದಾರೆ. ಕೆಲವರ ಪ್ರಕಾರ ಸಮಂತಾ ರವರು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರೀತಿ ಅಕ್ಕಿನೇನಿ ಫ್ಯಾಮಿಲಿ ಅವರಿಗೆ ಸರಿ ಬಂದಿಲ್ಲ ಎಂದು ಕಾಣಿಸುತ್ತದೆ. ಅದಕ್ಕಾಗಿ ಇಂತಹ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸುವುದಾಗಿ ಸಂಬಂಧ ರವರಿಗೆ ಒತ್ತಡ ಹೇಳಿರಬಹುದು ಇದೇ ಕಾರಣಕ್ಕಾಗಿ ಅವರು ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದೇನೇ ಇರಲಿ ವಿವಾಹ ವಿಚ್ಛೇದನ ಆದನಂತರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೆಸರಿನಿಂದ ಅಕ್ಕಿನೇನಿ ಎನ್ನುವ ನಾಗಚೈತನ್ಯ ರವರ ಮನೆತನದ ಹೆಸರನ್ನು ಕೂಡ ತೆಗೆದುಹಾಕಿದ್ದರು.

ಒಂದು ಲೆಕ್ಕದಲ್ಲಿ ಹೇಳುವುದಾದರೆ ನಾಗಚೈತನ್ಯ ರವರ ಅಕ್ಕಿನೇನಿ ಫ್ಯಾಮಿಲಿಯಿಂದ ಸಂಪೂರ್ಣವಾಗಿ ಹೊರಬಂದು ತಮ್ಮದೇ ಆದ ಲೋಕದಲ್ಲಿ ಜೀವನ ಮಾಡುತ್ತಿದ್ದರು. ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಾಂತರ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಆಫರ್ ಹುಡುಕಿಕೊಂಡು ಬಂದವು. ಮದುವೆಯಾದ ನಂತರ ಇದ್ದ ಸಮಂತಾ ಗಿಂತ ಇಂದಿನ ದಿನಗಳಲ್ಲಿ ಸಮಂತ ಅವರು ವಿವಾಹ ವಿಚ್ಛೇದನ ಆದನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಭರ್ಜರಿಯಾಗಿ ಪಡೆದುಕೊಳ್ಳುತ್ತಿದ್ದಾರೆ. ಅವರ ಬೇಡಿಕೆ ಎಷ್ಟರಮಟ್ಟಿಗೆ ಜಾಸ್ತಿಯಾಗಿದೆ ಎಂದರೆ ಪುಷ್ಪಾ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡುವುದಕ್ಕಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಒಂದಾದಮೇಲೊಂದರಂತೆ ಸಿನಿಮಾದಲ್ಲಿ ಕೂಡ ಸಮಂತಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಖಂಡಿತವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವ ಭರವಸೆಯನ್ನು ಮೂಡಿಸಿದ್ದಾರೆ. ಈಗಾಗಲೇ ಶಾಕುಂತಲಂ ಯಶೋಧ ಹಾಗೂ ಅರೇಂಜ್ಮೆಂಟ್ಸ್ ಆಫ್ ಲವ್ ನಿಮ್ಮ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅತಿಶೀಘ್ರದಲ್ಲೇ ಎಲ್ಲಾ ಸಿನಿಮಾಗಳು ಕೂಡ ಬಿಡುಗಡೆಯನ್ನು ಕಾಣಲಿವೆ. ಒಟ್ಟಾರೆಯಾಗಿ ಕೆಲವು ಸಮಯಗಳ ಕಾಲ ಚಿತ್ರರಂಗದಿಂದ ವಿರಾಮವನ್ನು ಪಡೆದುಕೊಂಡಿದ್ದ ಸಮಂತ ಅದ್ದೂರಿ ಕಂಬ್ಯಾಕ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಮಂತ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ನಂತರ ನಾಗಚೈತನ್ಯ ರವರ ಕುಟುಂಬದಿಂದ ತುಂಬಾನೆ ದೂರವಿದ್ದರು. ಕೇವಲ ದೈಹಿಕವಾಗಿ ಮಾತ್ರವಲ್ಲದೆ ವರ್ಚುವಲ್ ಲೋಕದಲ್ಲಿ ಕೂಡ ಅವರಿಂದ ದೂರವಿದ್ದರು. ಆದರೆ ಈಗ ಮತ್ತೊಮ್ಮೆ ಅಕ್ಕಿನೇನಿ ಫ್ಯಾಮಿಲಿ ಕುರಿತಂತೆ ಒಲವು ತೋರಿಸಿದ್ದಾರೆ ಎಂದು ಹೇಳಬಹುದಾಗಿದೆ. ಇದು ನಂಬುವುದು ಕಷ್ಟವಾದರೂ ಕೂಡ ಎಲ್ಲರೂ ನಂಬಲೇ ಬೇಕಾದಂತಹ ನಿಜವಾದ ವಿಚಾರ. ಹೀಗೆ ಹೇಳಲು ನಡೆದಿದ್ದಾದರೂ ಏನು ಎನ್ನುವುದಾಗಿ ನೀವು ಕೇಳಬಹುದು. ಬನ್ನಿ ಈ ಕುರಿತಂತೆ ನಾವು ನಿಮಗೆ ಸರಿಯಾದ ವಿವರವನ್ನು ನೀಡುತ್ತೇವೆ.

ಹೌದು ನಟಿ ಸಮಂತಾ ರವರು ನಾಗಾರ್ಜುನ ರವರ ಎರಡನೇ ಹೆಂಡತಿಯ ಮಗನಾಗಿರುವ ಹಾಗೂ ನಾಗಚೈತನ್ಯ ರವರ ಸಹೋದರ ನಾಗಿರುವ ಅಖಿಲ್ ಅಕ್ಕಿನೇನಿ ರವರಿಗೆ ನಿನ್ನೆಯಷ್ಟೇ ಜನ್ಮದಿನದ ವಿಶೇಷವಾಗಿ ಶುಭಾಶಯಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಕೋರಿದ್ದಾರೆ. ಈ ಮೂಲಕ ಹಲವಾರು ಸಮಯಗಳ ನಂತರ ಅಕ್ಕಿನೇನಿ ಕುಟುಂಬದ ಸದಸ್ಯರ ಕುರಿತಂತೆ ಸಮಂತ ಮತ್ತೊಮ್ಮೆ ಒಲವು ತೋರಿದ್ದಾರೆ ಎಂದು ಹೇಳಬಹುದಾಗಿದೆ.

ಈ ಹಿಂದೆಯಷ್ಟೇ ಸಮಂತ ಮಜಿಲಿ ಸಿನಿಮಾ ಮೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಪೋಸ್ಟರನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟರಿನಲ್ಲಿ ನಾಗಚೈತನ್ಯ ರವರು ಕೂಡ ಇದ್ದರು. ಇದು ಅವರಿಬ್ಬರು ಒಟ್ಟಿಗೆ ನಟಿಸಿದ ನಾಲ್ಕನೆ ಸಿನಿಮಾವಾಗಿತ್ತು. ಇಂತಹ ಚಿಕ್ಕ ಚಿಕ್ಕ ವಿಚಾರಗಳು ಮತ್ತೆ ಮರುಕಳಿಸಿ ಇವರಿಬ್ಬರು ಒಂದಾಗಲಿ ಎನ್ನುವುದಾಗಿ ಅಭಿಮಾನಿಗಳು ಕೂಡ ಹಾರೈಸುತ್ತಿದ್ದಾರೆ. ಅಭಿಮಾನಿಗಳ ಆಲೋಚನೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ತಿಳಿಸಿ.