ಹುಡುಗಿ ನಿಮ್ಮ ಮೆಸೇಜ್ಗೆ ಲೇಟ್ ಆಗಿ ರಿಪ್ಲೇ ಮಾಡುತ್ತಿದ್ದಾರೆ ಅಥವಾ ರಿಪ್ಲೇ ಮಾಡುತ್ತಿಲ್ಲ ಎಂದರೆ ಅದಕ್ಕೆ ಕಾರಣಗಳೇನು ಗೊತ್ತೇ??

170

ನಮಸ್ಕಾರ ಸ್ನೇಹಿತರೇ ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರು ಕೂಡ ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಎಲ್ಲರೂ ಅದರಲ್ಲೂ ಹೆಚ್ಚಾಗಿ ಯುವಜನತೆ ಸೋಷಿಯಲ್ ಮೀಡಿಯಾದ ಮೂಲಕವೇ ಸಂಪರ್ಕದಲ್ಲಿರುತ್ತಾರೆ. ಅದು ಇನ್ಸ್ಟಾಗ್ರಾಮ್ ಫೇಸ್ಬುಕ್ ಅಥವಾ ವಾಟ್ಸಾಪ್ ಕೂಡ ಆಗಿರಬಹುದು. ಇನ್ನು ಈ ಸಂದರ್ಭದಲ್ಲಿ ಮೆಸೇಜ್ ಮಾಡಿದಾಗ ಹುಡುಗಿ ಆಗಲಿ ಅಥವಾ ಹುಡುಗನೇ ಆಗಲಿ ಕೂಡಲೇ ರಿಪ್ಲೈ ಮಾಡದಿದ್ದರೆ ಖಂಡಿತವಾಗಿ ಎದುರುಗಡೆ ಇರುವ ವ್ಯಕ್ತಿಯ ಕುರಿತಂತೆ ಕೋಪ ಬರುವುದು ಖಂಡಿತ.

ಅದರಲ್ಲೂ ಪ್ರಮುಖವಾಗಿ ಹುಡುಗರ ಮೆಸೇಜ್ಗೆ ಹುಡುಗಿಯರು ಕೂಡಲೇ ರಿಪ್ಲೈ ಮಾಡುವುದಿಲ್ಲ. ಇದರ ಕುರಿತಂತೆ ಎಲ್ಲರಿಗೂ ಗೊತ್ತಿದೆ ಆದರೆ ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ಕೂಡ ತಿಳಿದುಕೊಂಡಿಲ್ಲ. ಯಾವುದೇ ಹುಡುಗ ಇರಲಿ ಹುಡುಗಿಯರಿಗೆ ಮೆಸೇಜ್ ಮಾಡಿದರೆ ಅವರು ಕೂಡಲೇ ಖಂಡಿತವಾಗಿ ರಿಪ್ಲೈ ಮಾಡುವುದಿಲ್ಲ ಹಲವಾರು ಸಮಯಗಳ ಕಾಯಿಸಿ ನಂತರ ರಿಪ್ಲೈ ನೀಡಬಹುದಾಗಿದೆ ಇನ್ನು ಕೆಲವೊಮ್ಮೆ ರಿಪ್ಲೈ ನೀಡುವುದಿಲ್ಲ. ಇದು ಹುಡುಗರ ಕೋಪಕ್ಕೆ ಕಾರಣವಾಗಿರುವ ಅಂಶ ಕೂಡ ಆಗಿದೆ. ಹಾಗಿದ್ದರೆ ಇದಕ್ಕೆ ಕಾರಣಗಳೇನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳೋಣ.

ಮೊದಲಿಗೆ ಆಗಂತುಕ; ಒಂದುವೇಳೆ ನಿಮಗೆ ಆ ಹುಡುಗಿಯ ಪರಿಚಯ ಇಲ್ಲದೆ ಇದ್ದರೂ ಕೂಡ ನೀವು ಅವಳಿಗೆ ಮೆಸೇಜ್ ಮಾಡಿ ರಿಪ್ಲೈ ಗಾಗಿ ಕಾಯುತ್ತಿದ್ದೀರಾ ಎಂದರೆ ಅದು ಖಂಡಿತವಾಗಿಯೂ ಕೆಲಸಕ್ಕೆ ಬಾರದಿರುವಂತಹ ಕೆಲಸ. ಒಬ್ಬ ಆಗಂತುಕ ವ್ಯಕ್ತಿಗೆ ಯಾಕೆ ತಾನೇ ಹುಡುಗಿ ರಿಪ್ಲೈ ಮಾಡಬೇಕು ನೀವೇ ಹೇಳಿ.

ಎರಡನೇ ದಾಗಿ ಕಮಿಟೆಡ್; ಒಂದು ವೇಳೆ ಆ ಹುಡುಗಿ ಈಗಾಗಲೇ ಬೇರೆ ಹುಡುಗನ ಜೊತೆಗೆ ಕಮಿಟೆಡ್ ಆಗಿದ್ದಾಳೆ ಅಥವಾ ರಿಲೇಷನ್ಶಿಪ್ ನಲ್ಲಿ ಇದ್ದಾಳೆ ಎಂದರೆ ಅವಳು ನಿಮಗೆ ರಿಪ್ಲೈ ಮಾಡುವುದು ಅನುಮಾನ ಅಥವಾ ತಡವಾಗಿ ಮಾಡಬಹುದಾಗಿದೆ. ಹೆಚ್ಚಿನ ಬಾರಿ ಹುಡುಗಿಯರು ಬೇರೆ ಹುಡುಗರ ಜೊತೆಗೆ ಈ ಸಂದರ್ಭದಲ್ಲಿ ಮಾತನಾಡಲು ಇಷ್ಟಪಡುವುದಿಲ್ಲ.

ಮೂರನೇದಾಗಿ ಮನಸ್ಸಿಲ್ಲದಿರುವುದು; ಒಂದು ವೇಳೆ ನಿಮ್ಮ ಕುರಿತಂತೆ ಆ ಹುಡುಗಿಯರಿಗೆ ಆಸಕ್ತಿ ಇಲ್ಲದಿದ್ದರೆ ಖಂಡಿತವಾಗಿ ಅವರು ಒಂದು ತಡವಾಗಿ ರಿಪ್ಲೇ ಮಾಡುತ್ತಾರೆ ಇಲ್ಲವೆ ರಿಪ್ಲೇ ಮಾಡುವುದಕ್ಕೆ ಹೋಗುವುದೇ ಇಲ್ಲ. ನಾಲ್ಕನೇದಾಗಿ ಕೋಪ; ಹಲವಾರು ಬಾರಿ ಹುಡುಗಿಯರು ತಮ್ಮ ಬಾಯ್ಫ್ರೆಂಡ್ ಹಾಗೂ ಗೆಳೆಯನ ಜೊತೆಗೆ ಕೋಪ ಮಾಡಿಕೊಂಡಾಗ ಕೂಡ ನಿಮ್ಮ ಮೆಸೇಜ್ ಗೆ ರಿಪ್ಲೈ ಮಾಡುವುದಿರಲಿ ನೋಡುವುದಕ್ಕೆ ಕೂಡ ಹೋಗುವುದಿಲ್ಲ. ನಿಮ್ಮ ಮೇಲಿರುವ ಕೋಪವೇ ಇದಕ್ಕೆ ಕಾರಣ ಎಂದು ಹೇಳಬಹುದಾಗಿದೆ. ಹೀಗಾಗಿ ಈ ನಾಲ್ಕು ಕಾರಣಗಳು ಹುಡುಗಿಯರು ನಿಮ್ಮ ಮೆಸೇಜ್ ಗೆ ತಡವಾಗಿ ರಿಪ್ಲೇ ಮಾಡುವುದು ಅಥವಾ ಮಾಡದೇ ಇರುವಂತಹ ಕೆಲಸವನ್ನು ಮಾಡಲು ಇರುವಂತಹ ಕಾರಣಗಳಾಗಿವೆ.