ಕೋಟಿ ಕೋಟಿ ಖರ್ಚು ಮಾಡಿ ಮದುವೆಯಾಗುತ್ತಿರುವ ರಣಬೀರ್, ಆಲಿಯಾ ಮದುವೆ ಎಷ್ಟು ದಿನ ಹಾಗೂ ಯಾವ್ಯಾವ ದಿನ ಏನು ನಡೆಯಲಿದೆ ಗೊತ್ತಾ??

34

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪ್ರೇಮ ಪಕ್ಷಿಗಳು ಇತ್ತೀಚಿನ ವರ್ಷಗಳಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರು ಕೂಡ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ನಿಮಗೆಲ್ಲಾ ಗೊತ್ತಿದೆ. ಇನ್ನು ಹಲವಾರು ವರ್ಷಗಳಿಂದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೋಡಿ ಮದುವೆ ಆಗುತ್ತದೆ ಎಂಬುದಾಗಿ ಹಲವಾರು ಬಾರಿ ಸುದ್ದಿ ಬಂದಿತ್ತು ಆದರೆ ಅವರು ಮದುವೆಯಾಗಿರಲಿಲ್ಲ. ಸಂದರ್ಶನಗಳಲ್ಲಿ ಕೂಡ ಮದುವೆಯಾಗಲು ಇನ್ನು ಹಲವಾರು ವರ್ಷಗಳಿಗೆ ಎಂಬುದಾಗಿ ಸಮಯವನ್ನು ದೂಡುತ್ತಲೇ ಬಂದಿದ್ದರು.

ಇನ್ನು ಇತ್ತೀಚೆಗಷ್ಟೇ ಇಬ್ಬರು ಬ್ರಹ್ಮಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ನಂತರ ಇವರಿಬ್ಬರೂ ಅತಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ದಟ್ಟವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಆರಂಭವಾಗಿದ್ದವು. ಆದರೆ ಈಗ ಬಾಲಿವುಡ್ ಮೂಲಗಳಿಂದ ಇವರಿಬ್ಬರು ಅತಿಶೀಘ್ರದಲ್ಲಿ ಮದುವೆಯಾಗುತ್ತಾರೆ ಎಂಬುದಾಗಿ ಕನ್ಫರ್ಮ್ ಆಗಿದೆ. ಹಾಗಿದ್ದರೆ ಯಾವಾಗ ಹಾಗೂ ಎಷ್ಟು ದಿನ ಈ ಮದುವೆ ಸಮಾರಂಭ ನಡೆಯಲಿದೆ ಎನ್ನುವುದರ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ.

ಹೌದು ಸ್ನೇಹಿತರೆ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಮದುವೆ ಒಟ್ಟು ಐದು ದಿನಗಳ ಕಾಲ ಅದ್ದೂರಿಯಾಗಿ 80ರಿಂದ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ. ಏಪ್ರಿಲ್ 13ರಿಂದ ಪ್ರಾರಂಭವಾಗಿ ಮೊದಲ ದಿನ ಮೆಹಂದಿ ಕಾರ್ಯಕ್ರಮ ಇರುತ್ತದೆ ಎರಡನೇ ದಿನ ಅಂದರೆ ಏಪ್ರಿಲ್ 14ರಂದು ಸಂಗೀತ ಕಾರ್ಯಕ್ರಮ ಇರುತ್ತದೆ. ಇನ್ನುಳಿದ ದಿನಗಳಲ್ಲಿ ಅಂದರೆ ಏಪ್ರಿಲ್ 15ರಂದು ಇಬ್ಬರು ಕೂಡ ಶಾಸ್ತ್ರೋಕ್ತವಾಗಿ ಮದುವೆಯಾಗಲಿದ್ದಾರೆ. ಇನ್ನು ಏಪ್ರಿಲ್ 17ರವರೆಗೆ ಉಳಿದ ದಿನಗಳಲ್ಲಿ ರಿಸೆಪ್ಶನ್ ಹಾಗೂ ಸಂತೋಷ ಕೂಟಗಳು ಇರಲಿವೆ ಎಂಬುದಾಗಿ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಬಾಲಿವುಡ್ ಚಿತ್ರರಂಗ ಮತ್ತೊಂದು ದೊಡ್ಡ ಮಟ್ಟದ ಮದುವೆಗೆ ಅತಿಶೀಘ್ರದಲ್ಲಿ ಸಾಕ್ಷಿಯಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಇವರಿಬ್ಬರ ಮದುವೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.