RRR ಚಿತ್ರದಲ್ಲಿ ಬುಡಕಟ್ಟು ಜನಾಂಗದ ಹುಡುಗಿಯ ತಾಯಿಯ ಪಾತ್ರ ನಿರ್ವಹಿಸಿರುವ ನಟಿ, ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ??

30

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಅಂತಹ ಚಿತ್ರಗಳಲ್ಲಿ ಅತ್ಯಂತ ಹೆಚ್ಚು ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವೆಂದರೆ ಅದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ. ಖಂಡಿತವಾಗಿ ಇದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಂತಹ ಪರಿಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದು ನಿಜವಾಗಲೂ ದೊಡ್ಡ ವಿಚಾರವೇ. ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ ನಾಯಕತ್ವದಲ್ಲಿ ಮೂಡಿ ಬಂದಿರುವಂತಹ ಆರ್ ಆರ್ ಆರ್ ಚಿತ್ರ ನಿಜಕ್ಕೂ ಕೂಡ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿರುವ ಚಿತ್ರಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಕೂಡ ದಾಖಲಿಸಲಿದೆ. ರಾಜಮೌಳಿಯವರ ಸಿನಿಮಾ ಎಂದರೆ ಕೇಳಬೇಕೆ ಕಲೆಕ್ಷನ್ ವಿಚಾರದಲ್ಲಿ ದಾಖಲೆಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅವರ ಚಿತ್ರದಲ್ಲಿ ಯಾವುದೇ ನಟ ಇರಲಿ ಅದು ಮುಖ್ಯವಾಗಿರುವುದಿಲ್ಲ ಬದಲಾಗಿ ರಾಜಮೌಳಿಯವರ ಸಿನಿಮಾ ಎಂದರೆ ಜನರಲ್ಲಿ ಒಂಥರಾ ವಿಶೇಷವಾದ ಕ್ರೇಜ್ ಇದೆ. ರಾಜಮೌಳಿ ಅವರ ಸಿನಿಮಾಗೆ ಯಾವ ಸ್ಟಾರ್ ನಟ ಕೊಡಬೇಕಾಗಿಲ್ಲ ಅವರೊಬ್ಬರಿದ್ದರೆ ಸಾಕು ಸಿನಿಮಾಗೆ ಭಾರತ ದೇಶದಾದ್ಯಂತ ಪ್ರಚಾರ ತನ್ನಿಂತಾನಾಗಿ ಬರುತ್ತದೆ. ಇನ್ನು ನೀವು ಚಿತ್ರವನ್ನು ನೋಡಿರಬಹುದು ಅದರಲ್ಲಿ ಬುಡಕಟ್ಟು ಜನಾಂಗದ ಹುಡುಗಿಯೊಬ್ಬಳ ಪಾತ್ರ ಬರುತ್ತದೆ. ಆ ಪಾತ್ರದ ತಾಯಿಯ ಹೆಸರು ಲೋಕಿ ಎನ್ನುವುದಾಗಿ. ಈ ಪಾತ್ರವು ಕೂಡ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಒಳಗಾಗಿದೆ.

ಈ ಪಾತ್ರವನ್ನು ನಿರ್ವಹಿಸಿರುವ ಹುಡುಗಿಯಾರು ಎನ್ನುವುದಾಗಿ ಎಲ್ಲರಲ್ಲೂ ಕೂಡ ಕುತೂಹಲ ಇತ್ತು. ಇಂದಿನ ಲೇಖನದಲ್ಲಿ ನಾವು ನಿಮ್ಮ ಕುತೂಹಲವನ್ನು ಪರಿಹರಿಸಲು ಬಂದಿದ್ದೇವೆ. ಹಾಗಿದ್ದರೆ ಲೋಕಿ ಪಾತ್ರವನ್ನು ನಿರ್ವಹಿಸಿರುವ ನಟಿ ಯಾರು ಎನ್ನುವುದನ್ನು ತಿಳಿಯುವ ಮನ. ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ನಿಜವಾದ ಹೆಸರು ಅಹ್ಮರೀನ್ ಅಂಜುಮ್ ಎನ್ನುವುದಾಗಿತ್ತು ಇವರು ಮೂಲತಃ ಕೊಲ್ಕತ್ತದವರಾಗಿದ್ದಾರೆ. ಇವರು ಈ ಪಾತ್ರಕ್ಕಾಗಿ ಆಡಿಷನ್ ನೀಡಿ ಬಂದಿದ್ದರು ಆದರೆ ಎರಡು ವರ್ಷಗಳವರೆಗೆ ಯಾವುದೇ ಕರೆ ಅಥವಾ ಈ ಕುರಿತಂತೆ ಯಾವುದೇ ವಿಚಾರಗಳು ಕೂಡ ಅವರನ್ನು ತಲುಪಿರಲಿಲ್ಲ. ಎರಡು ವರ್ಷಗಳ ನಂತರ ಅವರಿಗೆ ಚಿತ್ರತಂಡದಿಂದ ಕರೆ ಬಂದು ಅವರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಇಂದು ಕೇವಲ ಒಂದು ಚಿಕ್ಕ ಪಾತ್ರದಿಂದಲೇ ದೇಶದಾದ್ಯಂತ ಪ್ರೇಕ್ಷಕರಲ್ಲಿ ಮನೆಮಾತಾಗಿದ್ದಾರೆ. ಇದೇ ರಾಜಮೌಳಿಯವರ ಚಿತ್ರದ ಕರಾಮತ್ತು ಎಂದು ಹೇಳಬಹುದು.