ಕೇವಲ 12 ಗಂಟೆಗಳಲ್ಲಿ RRR ಚಿತ್ರದ ದಾಖಲೆ ಉಡೀಸ್ ಮಾಡಿದ ಕೆಜಿಎಫ್ ಚಾಪ್ಟರ್ 2, ಬರೆದ ಹೊಸ ದಾಖಲೆಯೇನು ಗೊತ್ತೇ??

18

ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ರವರ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಬಹುತೇಕ ಖಚಿತವಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕೆಜಿಎಫ್ ಚಾಪ್ಟರ್ 2 ಚಿತ್ರ ಈ ಅದ್ಭುತ ಕ್ಷಣಕ್ಕಾಗಿ ಕಾದು ನಿಂತಿತ್ತು ಎಂದು ಕಾಣುತ್ತದೆ. ಕಾಯುವಿಕೆಗೆ ಕೊನೆಗೂ ಕೂಡ ಪ್ರತಿಫಲ ಸಿಕ್ಕಿದೆ ಎಂಬುದಾಗಿ ಭಾವಿಸಲಾಗಿದೆ.

ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಪರ ರಾಜ್ಯಗಳಲ್ಲಿ ಹಾಗೂ ಹೊರದೇಶಗಳಲ್ಲಿ ಆರಂಭವಾಗಿದೆ. ಸದ್ಯಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಕ್ಸಾಫೀಸ್ ನಲ್ಲಿ ಇರುವುದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ದಾಖಲೆಗಳು. ಈಗಾಗಲೇ ನಿಮಗೆ ತಿಳಿದಿರುವಂತೆ ಆರ್ ಆರ್ ಆರ್ ಚಿತ್ರದ ಪ್ರಿ ರಿಲೀಸ್ ರೆಕಾರ್ಡ್ ಅನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಮುರಿದಿದೆ. ಈಗ ಅಡ್ವಾನ್ಸ್ ಬುಕಿಂಗ್ ಕ್ಷೇತ್ರದಲ್ಲಿ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಇನ್ನು ಬಿಡುಗಡೆಗೆ ಒಂದು ವಾರ ಇರುವಂತೆ ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಧೂಳಿಪಟ ಮಾಡಿದ ಎಂಬುದಾಗಿ ಕೇಳಿಬಂದಿದೆ. ಬಿಡುಗಡೆಗೂ ಒಂದು ವಾರದ ಮೊದಲೇ ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 2 ಮುರಿದಿದೆ ಎಂದರೆ ಖಂಡಿತವಾಗಿ ಕನ್ನಡಿಗರಾದ ನಾವು ಹೆಮ್ಮೆ ಪಡಲೇಬೇಕು. ಇನ್ನು ಕರ್ನಾಟಕದ ಬುಕಿಂಗ್ ಪ್ರಾರಂಭವಾದ ಮೇಲೆ ಖಂಡಿತವಾಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಹಿಂದಿ ಪ್ರಾಂತ್ಯದಲ್ಲಿ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾದ 12 ಗಂಟೆಗಳ ಒಳಗಾಗಿ ಒಂದು ಲಕ್ಷದ 7 ಸಾವಿರ ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ. ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಗಮನಿಸುವುದಾದರೆ ಅಡ್ವಾನ್ಸ್ ಬುಕಿಂಗ್ ನಲ್ಲಿ 5.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಕೇವಲ ಹಿಂದಿ ಪ್ರಾಂತ್ಯದಲ್ಲಿ ಅದು ಕೂಡ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾದ 12 ಗಂಟೆಗಳ ಒಳಗೆ 3.35 ಕೋಟಿ ರೂಪಾಯಿ ಗಳಿಸಿದೆ. ಇನ್ನು ಒಂದು ವಾರ ಬಾಕಿ ಇದ್ದು ಅಡ್ವಾನ್ಸ್ ಬುಕಿಂಗ್ ಬರೋಬ್ಬರಿ 15 ರಿಂದ 17 ಕೋಟಿ ರೂಪಾಯಿ ಸುಲಭವಾಗಿ ಗಳಿಸಬಹುದಾಗಿದೆ ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದೆ. ಮೊದಲ ದಿನವೇ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕೂಡಾ ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್ 2 ಭಾರತೀಯ ಚಿತ್ರರಂಗದ ಪ್ರತಿಯೊಂದು ದಾಖಲೆಗಳನ್ನು ನಿರ್ನಾಮ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.