ಹರ್ಷ, ಭುವಿ ಎಂಗೇಜ್ಮೆಂಟ್ ನಲ್ಲಿ ಕಾಣೆಯಾದ ಉಂಗುರ; ಉಂಗುರ ಇಲ್ಲದೆಯೂ ಎಂಗೇಜ್ಮೆಂಟ್ ಮತ್ತಷ್ಟು ಶಾಸ್ತ್ರಬದ್ಧವಾಗಿ ನಡೆಯಿತು. ಮುಂದೇನು ನಡೆಯಲಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳು ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರೇಕ್ಷಕರಿಗೆ ಪ್ರತಿಯೊಂದು ದೃಶ್ಯಗಳಲ್ಲಿಯೂ ಕೂಡ ರೋಚಕ ಟ್ವಿಸ್ಟ್ ಗಳನ್ನು ನೀಡುತ್ತಿದ್ದಾರೆ. ಹೌದು ನಾವು ಇಂದು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯ ಸೂಪರ್ಹಿಟ್ ಧಾರವಾಹಿ ಆಗಿರುವ ಕನ್ನಡತಿ ಧಾರವಾಹಿ ಕುರಿತಂತೆ. ಹಾಗಿದ್ದರೆ ಅಷ್ಟು ನಡೆದಿರುವುದು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹಲವಾರು ಸಮಯಗಳಿಂದ ಹರ್ಷ ಹಾಗೂ ಭುವಿಯ ನಡುವೆ ಅವ್ಯಕ್ತವಾದ ಪ್ರೀತಿಯ ಸಂಚಿಕೆಗಳು ನಡೆದುಕೊಂಡು ಬರುತ್ತಿದ್ದವು. ಹಲವಾರು ಅಡೆತಡೆಗಳ ನಡುವೆಯೂ ಕೂಡ ಈಗ ಇವರಿಬ್ಬರ ನಡುವೆ ಎಂಗೇಜ್ಮೆಂಟ್ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯುವ ಹಂತಕ್ಕೆ ತಲುಪಿದೆ. ಪ್ರೇಕ್ಷಕರು ಕೂಡ ಈ ಸಂಚಿಕೆಗಳನ್ನು ನೋಡಲು ಕಾತರರಾಗಿದ್ದಾರೆ. ಹರ್ಷನ ತಾಯಿಯಾಗಿರುವ ರತ್ನ ಮಾಲಾ ಕೊನೆಗೂ ಕೂಡ ತನ್ನ ಮಗನ ಜೀವನ ಅರ್ಥಪೂರ್ಣವಾಗಿ ಸಾಗುತ್ತಿದೆ ಎನ್ನುವುದರ ಕುರಿತಂತೆ ಹರ್ಷವನ್ನು ವ್ಯಕ್ತಪಡಿಸಿದ್ದಾಳೆ. ಹರ್ಷನು ಕೂಡ ತನ್ನ ಜೀವನದ ಪ್ರೀತಿ ಸಿಕ್ಕಿದೆ ಎಂಬ ಸಂತೋಷದಲ್ಲಿದ್ದಾನೆ.

ಇನ್ನು ಎಂಗೇಜ್ಮೆಂಟ್ ದೃಶ್ಯಗಳನ್ನು ಚಿತ್ರೀಕರಿಸಲು ಕನ್ನಡತಿ ಧಾರಾವಾಹಿ ತಂಡ ಉದರಿ ಎನ್ನುವ ಚಿಕ್ಕ ಹಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಸೆಟ್ ಗಳನ್ನು ಹಾಕಿದ್ದಾರೆ. ಹಳ್ಳಿಯ ಸೊಗಡಿನಲ್ಲಿ ಪ್ರಕೃತಿಯ ಮಡಿಲಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಚಿತ್ರೀಕರಿಸಿದ್ದಾರೆ. ನಿಶ್ಚಿತಾರ್ಥದ ಎಲ್ಲಾ ಪ್ರಕ್ರಿಯೆಗಳು ಕೂಡ ಸಂಪ್ರದಾಯಬದ್ಧವಾಗಿ ಪ್ರಕೃತಿಯ ಮಡಿಲಿನಲ್ಲಿ ಹಳ್ಳಿಯ ಸೊಗಡಿನ ಶೈಲಿಯಲ್ಲಿ ಚಿತ್ರಿಕರಿಸಿದ್ದಾರೆ ಎಂದು ಹೇಳಬಹುದಾಗಿದೆ. ಖಂಡಿತವಾಗಿ ಹಳ್ಳಿಯ ಸೊಗಡಿನಲ್ಲಿ ಎಲ್ಲರ ನೆಚ್ಚಿನ ಜೋಡಿಗಳ ನಿಶ್ಚಿತಾರ್ಥ ಪ್ರಕ್ರಿಯೆಯನ್ನು ನೋಡಲು ಪ್ರೇಕ್ಷಕರಂತೂ ಸನ್ನದ್ಧರಾಗಿದ್ದಾರೆ ಎನ್ನುವುದನ್ನು ಅನುಮಾನವಿಲ್ಲದೆ ಹೇಳಬಹುದಾಗಿದೆ.

ಆದರೆ ಪ್ರತಿಯೊಂದು ಸಂತೋಷದ ಕ್ಷಣ ಗಳಿಗೆ ಖಂಡಿತವಾಗಿ ಧಾರವಾಹಿಗಳಲ್ಲಿ ಟ್ವಿಸ್ಟ್ ಇದೆ ಎಂದು ಹೇಳುತ್ತಾರೆ ಇಲ್ಲಿ ಕೂಡ ಟ್ವಿಸ್ಟ್ ಇದೆ. ಹೌದು ಹರ್ಷ ಹಾಗೂ ಭುವಿ ನಿಶ್ಚಿತಾರ್ಥ ನಡೆಯುವುದು 3 ಜನರಿಗೆ ಇಷ್ಟವಿಲ್ಲ. ಒಬ್ಬಳು ಭುವಿಯ ಅಜ್ಜಿ ಆಗಿರುವ ಮಂಗಳಮ್ಮ. ಎರಡನೆಯವಳು ಹರ್ಷನ ತಮ್ಮನ ಹೆಂಡತಿಯಾಗಿರುವ ಸಾಂಗ್. ಒಂದು ವೇಳೆ ಭುವಿ ಹರ್ಷನನ್ನು ಮದುವೆಯಾದರೆ ಆಸ್ತಿಯಲ್ಲ ಅವಳ ಪಾಲಾಗುತ್ತದೆ ಎನ್ನುವ ಕಾರಣಕ್ಕಾಗಿ ಅವಳನ್ನು ಹಾಗೂ ರತ್ನ ಮಾಲಾಳನ್ನು ಮುಗಿಸಲು ಈಗಾಗಲೇ ಹಲವಾರು ತಯಾರಿಗಳನ್ನು ಕೂಡ ಮಾಡಿಕೊಂಡಿದ್ದಾಳೆ. ಮೂರನೆಯವಳು ಭುವಿಯ ಗೆಳತಿ ಆಗಿರುವ ವರುಧಿನಿ. ಹರ್ಷ ನನ್ನು ಪ್ರೀತಿ ಮಾಡುತ್ತಿರುವ ವರುಧಿನಿ ಈಗ ತನ್ನ ಪ್ರಿಯಕರನನ್ನು ನನಗೆಳತಿ ಮದುವೆಯಾಗುತ್ತಿದ್ದಾಳೆ ಎನ್ನುವ ದುಃಖ ಅವಳಲ್ಲಿದೆ. ಅವಳನ್ನು ಒಬ್ಬ ಭಗ್ನ ಪ್ರೇಮಿ ಎಂದು ಕರೆಯಬಹುದಾಗಿದೆ.
ಇವೆಲ್ಲಾ ಅಡ್ಡಿ ಆತಂಕಗಳ ನಡುವೆ ಕೂಡ ಇವರಿಬ್ಬರ ನಿಶ್ಚಿತಾರ್ಥದ ಕಾರ್ಯಕ್ರಮವು ಸರಾಗವಾಗಿ ನಡೆದುಕೊಂಡು ಬಂದು ಇಬ್ಬರು ಉಂಗುರವನ್ನು ಬದಲಾಯಿಸಿಕೊಳ್ಳುವ ಶಾಸ್ತ್ರಕ್ಕೆ ಬಂದಿದೆ. ಆದರೆ ಉಂಗುರದ ಬಾಕ್ಸನ್ನು ತೆರೆದು ನೋಡಿದಾಗ ಅಲ್ಲಿ ಉಂಗುರ ಇಲ್ಲ. ನಿಶ್ಚಿತಾರ್ಥ ನಿಲ್ಲುವ ಹಂತಕ್ಕೆ ಬಂದು ತಲುಪಿದೆ ಈ ಸಂದರ್ಭದಲ್ಲಿ ಹರ್ಷ ಮಾಡುವಂತಹ ಬುದ್ಧಿವಂತಿಕೆ ಇಲ್ಲಿ ಕಾರ್ಯರೂಪಕ್ಕೆ ಬರುತ್ತದೆ. ಹೌದು ರೇಷ್ಮೆ ದಾರಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಅದನ್ನೇ ಉಂಗುರವನ್ನಾಗಿ ಮಾಡಿದ್ದಾನೆ.
ಈ ಮೂಲಕ ಇಬ್ಬರೂ ಕೂಡ ಪರಸ್ಪರ ಉಂಗುರ ತೊಡಿಸಿಕೊಂಡು ಅರ್ಥಪೂರ್ಣವಾಗಿ ನಿಶ್ಚಿತಾರ್ಥ ಮಾಡಿಕೊಂಡು ಸಮಾಜಕ್ಕೆ ಧಾರವಾಹಿಯ ಮೂಲಕ ಅದ್ದೂರಿತನ ಕಿಂತ ಹೆಚ್ಚಾಗಿ ಅರ್ಥಪೂರ್ಣ ನಿಶ್ಚಿತಾರ್ಥದ ಪ್ರಕ್ರಿಯೆಯನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ ಪ್ರೇಕ್ಷಕರು ಕೂಡ ಇದನ್ನು ನೋಡಿ ಇಷ್ಟಪಟ್ಟಿದ್ದಾರೆ. ಅದ್ದೂರಿ ಆಡಂಬರ ತನಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಇರುವಂತಹ ಅರ್ಥಪೂರ್ಣ ಪ್ರೀತಿಯನ್ನು ಇಲ್ಲಿ ಬಿಂಬಿಸಲಾಗಿದೆ ಎಂಬುದಾಗಿ ತೋರಿಸಲಾಗಿದೆ. ಈ ಸಂಚಿಕೆ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.