ನೂರು ಸಿನೆಮಾಗಳಲ್ಲಿ ನಟಿಸಿ, ಎಲ್ಲವೂ ಯಶಸ್ಸು ಕಂಡರೂ ಕೂಡ ಅಣ್ಣಾವ್ರು ಪಡೆಯುತ್ತಿದ್ದ ಸಂಭಾವನೆ ಕೇಳಿದರೆ ನೀವು ನಂಬೋದೇ ಕಷ್ಟ. ಎಷ್ಟು ಕಡಿಮೆ ಗೊತ್ತೇ??

20

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಎಂದು ಬಂದಾಗ ಈ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ರಾಜನಾಗಿ ಮೆರೆದವರು ನಮ್ಮೆಲ್ಲರ ನೆಚ್ಚಿನ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರ ತಪ್ಪಾಗಲಾರದು. ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಿಂಚಿ ಮೆರೆದವರು.

ಕನ್ನಡ ಚಿತ್ರರಂಗಕ್ಕೆ ಬೇಡರ ಕಣ್ಣಪ್ಪ ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ನೀಡುವ ಅಣ್ಣಾವ್ರು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಓದಿದ್ದು ಕಡಿಮೆಯಾದರೂ ಕೂಡ ಇಂದಿನ ಪಠ್ಯಪುಸ್ತಕಗಳಲ್ಲಿ ತಮ್ಮ ಅಧ್ಯಾಯವನ್ನು ಮೇಷ್ಟ್ರು ಮಕ್ಕಳಿಗೆ ಬೋಧನೆ ಮಾಡುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಅವರೇ ಒಂದು ವಿಶ್ವವಿದ್ಯಾಲಯ ಎಂದರೂ ಕೂಡ ತಪ್ಪಾಗಲಾರದು. ನಿಜವಾಗಲು ಅವರ ಕುರಿತಂತೆ ಹೇಳುವುದಾದರೆ ಸಿನಿಮಾದಲ್ಲಿ ಹೇಗೆ ನಾಯಕನಾಗಿ ಎಲ್ಲರನ್ನೂ ಆದರಿಸುತ್ತಾರೆ ನಿಜ ಜೀವನದಲ್ಲಿ ಕೂಡ ಅವರು ಚಿನ್ನದಂತ ಮನಸ್ಸಿನ ಮನುಷ್ಯ ಎಂದರೆ ತಪ್ಪಾಗಲಾರದು. ಇನ್ನು ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಾಡಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಅಂತಹ ಏಕೈಕ ನಟ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಕನ್ನಡ ಕಂಠೀರವ ಎಂದರೆ ತಪ್ಪಾಗಲಾರದು. ಹೀಗೆ ತಮ್ಮ ಜೀವಿತಾವಧಿಯಲ್ಲಿ ಹಲವಾರು ವಿಚಾರಗಳಿಗಾಗಿ ಅಣ್ಣಾವ್ರು ಕನ್ನಡಿಗರು ಹೆಮ್ಮೆಪಡುವಂತಹ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ.

ನಾಯಕನಟನಾಗಿ ಹಲವಾರು ಜನರನ್ನು ನಿರ್ಮಾಪಕರನ್ನಾಗಿ ಕೂಡ ಮಾಡಿದ್ದಾರೆ. ಕೆಲವರ ಬಳಿ ಕಡಿಮೆ ಸಂಭಾವನೆ ಪಡೆದು ಇನ್ನೂ ಕೆಲವರ ಬಳಿ ಅವರನ್ನು ಸಿನಿಮಾ ನಿರ್ಮಾಣ ಮಾಡುವಂತೆ ಹೇಳಿ ಚಿತ್ರ ಯಶಸ್ವಿಯಾದ ಮೇಲೆ ಸಂಭಾವನೆ ತೆಗೆದುಕೊಂಡಿದ್ದು ಕೂಡ ಇದೆ. ಕೆಲವರಿಗೆ ಉಚಿತವಾಗಿ ಸಿನಿಮಾ ಮಾಡಿಕೊಟ್ಟಿದ್ದು ಕೂಡ ಇದೆ. ಇಲ್ಲಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಅಣ್ಣಾವ್ರು 100 ಚಿತ್ರದ ನಂತರವೂ ಕೂಡ ಅವರು ಪಡೆದುಕೊಳ್ಳುತ್ತಿದ್ದ ಸಂಭಾವನೆ ಕುರಿತಂತೆ. ಅಣ್ಣಾವ್ರು ಎಂದರೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಹೊಂದಿರುವ ನಟ ಎನ್ನುವುದಾಗಿ ಎಲ್ಲರಿಗೂ ತಿಳಿದಿದೆ. ಹೀಗೆಂದ ಮೇಲೆ ಅವರು ಸಂಭಾವನೆ ವಿಚಾರದಲ್ಲಿ ಕೂಡ ಚೆನ್ನಾಗಿ ಸಂಭಾವನೆ ಪಡೆಯುತ್ತಾರೆ ಎಂಬುದಾಗಿ ಅಂದುಕೊಂಡಿರುತ್ತಾರೆ. ನಿಮಗೆ ಗೊತ್ತಿಲ್ಲ ಗೆಳೆಯರೇ 100 ಚಿತ್ರದಲ್ಲಿ ನಟಿಸಿದ ನಂತರವೂ ಕೂಡ ಅಣ್ಣಾವ್ರು ಪಡೆದುಕೊಳ್ಳುತ್ತಿದ್ದ ಸಂಭಾವನೆ ಕೇವಲ 25 ಸಾವಿರ ರೂಪಾಯಿ ಮಾತ್ರ. ಇದು ಅವರ ಹೃದಯ ಶ್ರೀಮಂತಿಕೆ ಗುರುತಾಗಿದೆ ಎಂದು ಹೇಳಬಹುದಾಗಿದೆ.