ಅಪ್ಪು ರವರ ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ಅಶ್ವಿನಿ ರವರ ಪರಿಚಯ ಮಾಡುತ್ತಿರುವ ನಿರ್ದೇಶಕಿ ಯಾರು ಗೊತ್ತೇ?? ಇವರ ಹಿನ್ನೆಲೆ ಏನು ಗೊತ್ತಾ?

17

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಹೋಮ್ ಬ್ಯಾನರ್ ಆಗಿರುವ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಮೂಲಕ ಇದುವರೆಗೂ ಒಂಬತ್ತು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಯಾವುದೇ ಸಿನಿಮಾಗಳನ್ನು ಕೂಡ ಸ್ಟಾರ್ ನಟರಿಗೆ ಸಿನಿಮಾ ನಿರ್ಮಾಣ ಮಾಡಿ ಹಣ ಪಡೆಯುವಂತಹ ಉದ್ದೇಶ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇರಲಿಲ್ಲ. ಅಷ್ಟೇ ಯಾಕೆ ತಮ್ಮ ಸ್ವಂತ ಬ್ಯಾನರ್ ನಲ್ಲಿ ತಾವೇ ನಾಯಕನಟನಾಗಿ ನಟಿಸಿರಲಿಲ್ಲ.

ಇಲ್ಲಿಯವರೆಗೂ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ಹೊಸಬರಿಗಾಗಿಯೇ ಮಾಡಿರುವುದು. ಹಣಕ್ಕಾಗಿ ಸಿನಿಮಾಗಳನ್ನು ಮಾಡದೆ ಪ್ರತಿಭೆಗಳನ್ನು ಪೋಷಿಸುವುದಕ್ಕಾಗಿ ತಮ್ಮ ಹೋಮ್ ಬ್ಯಾನರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತೆರೆದಿದ್ದರು. ಇದಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅದೆಷ್ಟೋ ಹೊಸ ಪ್ರತಿಭೆಗಳು ಒಂದು ಒಳ್ಳೆಯ ವೇದಿಕೆಯನ್ನು ಅವಕಾಶವನ್ನು ಉಪಯೋಗಿಸಿಕೊಂಡು ಇಂದು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಆದರೆ ಹತ್ತನೆ ಸಿನಿಮಾವನ್ನು ನಿರ್ಮಾಣ ಮಾಡುವ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣದ ನಂತರ ಪ್ರೊಡಕ್ಷನ್ ಯಾವುದೇ ಸಿನಿಮಾ ಮಾಡುವುದಿಲ್ಲ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಯುವಪ್ರತಿಭೆಗಳನ್ನು ಪೋಷಿಸುವ ಪುನೀತ್ ರಾಜಕುಮಾರ್ ಅವರ ಕೆಲಸವನ್ನು ತಮ್ಮ ಜವಾಬ್ದಾರಿಯಂತೆ ಹೆಗಲ ಮೇಲೆ ಹೊತ್ತುಕೊಂಡರು. ಇನ್ನು ಈಗ 10ನೇ ಸಿನಿಮಾವಾಗಿ ಆಚಾರ್ ಆಂಡ್ ಕೊ ಸಿನಿಮಾವನ್ನು ಇತ್ತೀಚಿಗಷ್ಟೇ ಘೋಷಿಸಿದ್ದಾರೆ. ಇನ್ನು ಈ ಚಿತ್ರದ ಮೂಲಕ ಪ್ರೊಡಕ್ಷನ್ ಸಂಸ್ಥೆಯ ಮೊದಲ ಮಹಿಳಾ ನಿರ್ದೇಶಕಿ ಯನ್ನು ಪರಿಚಯಿಸುತ್ತಿದ್ದಾರೆ.

ಹೌದು ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಆಚಾರ್ ಆಂಡ್ ಕೋ ಸಿನಿಮಾವನ್ನು ‌ಸಿಂಧು ಶ್ರೀನಿವಾಸ್ ಮೂರ್ತಿ ಅವರು ನಿರ್ದೇಶಿಸುತ್ತಿದ್ದಾರೆ. ಇವರು ಈಗಾಗಲೇ ಮೊದಲಿನಿಂದಲೂ ಕೂಡ ರಂಗಭೂಮಿ ಹಿನ್ನೆಲೆಯ ಕಲಾವಿದರಾಗಿ ನಟನೆ ಕುರಿತಂತೆ ಸಾಕಷ್ಟು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಪುನೀತ್ ರಾಜಕುಮಾರ್ ರವರೇ ನಿರ್ಮಾಣ ಮಾಡಿರುವಂತಹ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ದ್ಯಾನಿಶ್ ಸೇಟ್ ರವರು ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ವೆಬ್ ಸರಣಿಗಳಲ್ಲಿ ಕೂಡ ಇವರು ನಟಿಸಿದ್ದಾರೆ. ಇದು ಇವರ ಮೊದಲ ನಿರ್ದೇಶನ ಚಿತ್ರವಾಗಿದ್ದು ಈ ಸಿನಿಮಾದಲ್ಲಿ ಬಹುತೇಕ ಮಹಿಳೆಯರೇ ಕಾಣಿಸಿಕೊಳ್ಳುವುದು ಮತ್ತೊಂದು ವಿಶೇಷವಾಗಿದೆ. ಒಟ್ಟಾರೆಯಾಗಿ ಈ ಚಿತ್ರದ ಮೂಲಕ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಸಿಂಧು ಶ್ರೀನಿವಾಸಮೂರ್ತಿ ಅವರಿಗೆ ಒಳ್ಳೆಯ ಹೆಸರು ಸಿಗಲಿ ಎಂದು ಹಾರೈಸೋಣ.