ಮಸ್ತ್ ಫೋಟೋಶೂಟ್ ಮಾಡಿಸಿದ ಪುಟ್ಟಕ್ಕನ ಮಗಳು ಸ್ನೇಹ, ಹೇಗಿವೆ ಗೊತ್ತಾ ಕಿರುತೆರೆ ನಟಿ ಸಂಜನಾರವರ ಫೋಟೋಗಳು??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯ ಹಲವಾರು ಧಾರವಾಹಿಗಳು ಕಿರುತೆರೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರೇಟಿಂಗ್ ವಿಚಾರದಲ್ಲಿ ಮೊದಲ 5 ಸ್ಥಾನಗಳನ್ನು ಜೀ ಕನ್ನಡ ವಾಹಿನಿಯ ಧಾರವಾಹಿಗಳೇ ಪಡೆದುಕೊಂಡಿರುತ್ತವೆ. ಹಲವಾರು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಧಾರವಾಹಿಗಳು ಕಿರುತೆರೆಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಈ ಮೂಲಕ ನಾವು ಅರ್ಥೈಸಿಕೊಳ್ಳಬಹುದಾಗಿದೆ.

ಆಗಾಗ ಹೊಸ ಗುಣಮಟ್ಟದ ಧಾರವಾಹಿಗಳನ್ನು ಜೀ ಕನ್ನಡ ವಾಹಿನಿ ಪ್ರಸಾರವನ್ನು ಮಾಡುತ್ತಲೇ ಇರುತ್ತದೆ. ಒಂದು ಕಾಲದಲ್ಲಿ ಜೊತೆ ಜೊತೆಯಲ್ಲಿ ಧಾರವಾಹಿ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿತು. ಈಗ ಅದೇ ರೀತಿ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಆಗಿರುವ ಉಮಾಶ್ರೀ ಅವರು ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರಾರಂಭವಾಗಿ ಒಂದೊಂದೇ ರೆಕಾರ್ಡುಗಳನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಲು ಪ್ರಾರಂಭಿಸಿದೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರತಿವಾರ ರೇಟಿಂಗ್ ವಿಚಾರದಲ್ಲಿ ಮೊದಲನೇ ಸ್ಥಾನವನ್ನು ಪ್ರಸಾರದ ದಿನದಿಂದಲೂ ಕೂಡ ಪಡೆದುಕೊಂಡು ಬರುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಎಲ್ಲರೂ ಮೆಚ್ಚಿಕೊಂಡಿರುವ ಮೊದಲ ಪಾತ್ರವೆಂದರೆ ಅದು ಪುಟ್ಟಕ್ಕನ ಎರಡನೇ ಮಗಳಾಗಿರುವ ಸ್ನೇಹ ಪಾತ್ರ. ಸ್ನೇಹ ಪಾತ್ರವನ್ನು ಪ್ರತಿಯೊಬ್ಬ ಧಾರವಾಹಿ ಪ್ರೇಕ್ಷಕರೂ ಕೂಡ ಮೆಚ್ಚಿ ಮನಸಾರೆ ಹೊಗಳಿದ್ದಾರೆ. ಇನ್ನು ಈ ಪಾತ್ರವನ್ನು ನಿರ್ವಹಿಸುತ್ತಿರುವವರು ಸಂಜನಾ ಬುರ್ಲಿ.

ಇನ್ನು ಇತ್ತೀಚಿನ ದಿನಗಳಲ್ಲಿ ಸಂಜನಾ ಬುರ್ಲಿ ತಮ್ಮ ಲೇಟೆಸ್ಟ್ ಫೋಟೋಶೂಟ್ ಗಳಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸಕ್ರಿಯ ಆಗಿರುವ ಸಂಜನಾ ಬುರ್ಲಿ ಆಗಾಗ ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳೊಂದಿಗೆ ಕೂಡ ಸುಲಭವಾಗಿ ಕನೆಕ್ಟ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಸಂಜನಾ ರವರು ಮಾಡರ್ನ್ ಹಾಗೂ ಸಾಂಸ್ಕೃತಿಕ ಧಿರಿಸಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಈ ಫೋಟೋಗಳು ಈಗಾಗಲೇ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಫೋಟೋಗಳಲ್ಲಿ ಯಾವುದೇ ಸಿನಿಮಾ ಹೀರೋಯಿನ್ ಗಿಂತ ಕಡಿಮೆ ಇಲ್ಲದಂತೆ ಸುಂದರವಾಗಿ ಕಾಣಿಸುತ್ತಿದ್ದಾರೆ. ನೀವು ಕೂಡ ಈ ಫೋಟೋಗಳನ್ನು ನೋಡಬಹುದಾಗಿದ್ದು ಇದರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.