RRR ದಾಖಲೆಯನ್ನು ಒಂದು ಕಡೆ ಬ್ರೇಕ್ ಮಾಡಲು ಸಿದ್ದವಾಗಿರುವ KGF 2. ಈ ಕುರಿತು ಯಶ್ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

33

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಘನತೆ ಗೌರವವನ್ನು ಮತ್ತೊಮ್ಮೆ ಜಾಗತಿಕವಾಗಿ ಮುಗಿಲೆತ್ತರಕ್ಕೆ ಹಾರಿಸಲು ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಈಗಾಗಲೇ ವಿದೇಶಗಳಲ್ಲಿ ದಾಖಲೆಯ ಮಟ್ಟದಲ್ಲಿ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದು ಇದು ಇಡೀ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಎನ್ನುವುದಾಗಿ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಮುನ್ನವೇ ತನ್ನ ಕೆಲಸವನ್ನು ಪ್ರಾರಂಭಿಸಿದೆ ಎಂದು ಹೇಳಬಹುದಾಗಿದೆ.

ಒಂದು ಕಾಲದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಕನ್ನಡ ಚಿತ್ರರಂಗವನ್ನು ಎಲ್ಲರೂ ಕೂಡ ಗೌರವ ನೀಡುವಂತಹ ಸ್ಥಾನಕ್ಕೆ ಕೊಂಡಯ್ಯ ಬೇಕೆನ್ನುವ ಕನಸನ್ನು ಕಂಡಿದ್ದರು. ಕಂಡ ಕನಸಿನಂತೆ ಎಂಟು ವರ್ಷಗಳ ಪರಿಶ್ರಮದ ಫಲವಾಗಿ ಈಗ ಕೆಜಿಎಫ್ ಚಾಪ್ಟರ್ 2ನ್ನು ನೋಡಲು ಕನ್ನಡಿಗರಿಗಿಂತ ಅಧಿಕವಾಗಿ ಅಧಿಕ ಸಂಖ್ಯೆಯಲ್ಲಿ ಪರಭಾಷಿಗರು ಕಾತರರಾಗಿದ್ದಾರೆ. ಬುಕ್ ಮೈ ಶೋ ನಲ್ಲಿ ಈಗಾಗಲೇ ಅತ್ಯಂತ ಹೆಚ್ಚು ಇಂಟರೆಸ್ಟ್ ಹೊಂದಿರುವ ಚಿತ್ರ ಎನ್ನುವ ಖ್ಯಾತಿಗೆ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿದೆ. ಇತಿಹಾಸದಲ್ಲಿ ಇಂತಹ ದಾಖಲೆಯನ್ನು ಮಾಡಿರುವ ಇನ್ನೊಂದು ಚಿತ್ರವಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅದಾಗಲೇ 500 ಕೋಟಿಗೂ ಅಧಿಕ ಪ್ರಿ ರಿಲೀಸ್ ವ್ಯಾಪಾರ ಮಾಡುವ ಮೂಲಕ ರಾಜಮೌಳಿಯವರ ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಮುರಿದಿದೆ.

ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ರವರು ದಿಲ್ಲಿ ಮುಂಬೈ ಸೇರಿದಂತೆ ಪ್ರಮೋಶನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಸಂದರ್ಶಕರು ಕೆಜಿಎಫ್ ಚಾಪ್ಟರ್ 2 ಚಿತ್ರ ಆರ್ ಆರ್ ಆರ್ ಚಿತ್ರದ ಕಲೆಕ್ಷನ್ ಹಾಗೂ ರೆಕಾರ್ಡ್ ಅನ್ನು ಮು’ರಿಯುತ್ತದೆಯೇ ಎನ್ನುವುದಾಗಿ ಕೇಳಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ರವರು ನೀಡಿರುವಂತಹ ಉತ್ತರ ನಿಜಕ್ಕೂ ಕೂಡ ಎಲ್ಲರೂ ತಲೆದೂಗಿಸುವಂತದ್ದಾಗಿದೆ. ಇದಕ್ಕಾಗಿ ಅವರನ್ನು ನ್ಯಾಷನಲ್ ಸ್ಟಾರ್ ಎಂದು ಕರೆಯುವುದಲ್ಲವೇ.

ಈ ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ರವರು ಜಾಣ್ಮೆಯ ವಿಧಾನದಲ್ಲೇ ಉತ್ತರ ನೀಡಿದ್ದಾರೆ. ಭಾಷೆಗಳ ಅಣೆಕಟ್ಟನ್ನು ಇಟ್ಟುಕೊಂಡು ಯಾರು ಈಗ ಕೆಲಸ ಮಾಡಬಾರದು ಭಾರತೀಯ ಚಿತ್ರರಂಗ ಎನ್ನುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಇಲ್ಲಿ ಯಾವುದೇ ಟಾಲಿವುಡ್ ಬಾಲಿವುಡ್ ಸ್ಯಾಂಡಲ್ ವುಡ್ ಎನ್ನುವ ಭೇದಭಾವ ಇರಬಾರದು. ಒಳ್ಳೆಯ ಸಿನಿಮಾಗಳನ್ನು ಇಂಡಸ್ಟ್ರಿಯಲ್ಲಿ ನಾವು ನೀಡುವಂತಹ ಕೆಲಸಗಳನ್ನು ಮಾಡಬೇಕು.

ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ಕಂಡಿತವಾಗಿ ಜನರೇ ನಮ್ಮ ಸಿನಿಮಾವನ್ನು ನೋಡಿ ಪ್ರಚಾರವನ್ನು ಮಾಡುತ್ತಾರೆ. ನಾವು ಎಷ್ಟು ಒಳ್ಳೆಯ ಸಿನಿಮಾವನ್ನು ನೀಡುತ್ತೇವೆಯೋ ಅಷ್ಟರಮಟ್ಟಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾವನ್ನು ನೋಡಿ ಗೆಲ್ಲಿಸುತ್ತಾರೆ. ಆರ್ ಆರ್ ಆರ್ ಚಿತ್ರ ಗೆಲುವು ಸಾಧಿಸಿರುವುದು ನಮಗೂ ಕೂಡ ಖುಷಿಯೇ. ನಮಗೆ ರೆಕಾರ್ಡ್ ಬ್ರೇಕ್ ಮಾಡುವುದರಲ್ಲಿ ಆಸಕ್ತಿ ಇಲ್ಲ ಬದಲಾಗಿ ರೆಕಾರ್ಡ್ ಕ್ರಿಯೇಟ್ ಮಾಡುವಲ್ಲಿ ಆಸಕ್ತಿ ಇದೆ ಎಂಬುದಾಗಿ ಅವರು ಹೇಳಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ನಮ್ಮ ನಂತರ ಬರುವಂತಹ ಬೇರೆ ಸಿನಿಮಾಗಳು ನಾವು ಕ್ರಿಯೇಟ್ ಮಾಡಿರುವ ರೆಕಾರ್ಡ್ ಅಥವಾ ಬಾಕ್ಸಾಫೀಸ್ ಕಲೆಕ್ಷನ್ ಗಿಂತ ಹೆಚ್ಚಿನ ಯಶಸ್ಸು ಸಾಧಿಸಿದರೆ ಅದು ಕೂಡ ನಮಗೆ ಸಂತೋಷವೇ. ನಾವು ಕೂಡ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಅನ್ನು ಎದುರು ನೋಡುತ್ತಿದ್ದೇವೆ. ನಮ್ಮ ಸಿನಿಮಾಗೆ ಅಷ್ಟೊಂದು ಶಕ್ತಿ ಇದೆ ಎನ್ನುವುದಾಗಿ ನಾವು ನಂಬಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ಯಶ್ ಅವರು ಏನೇ ಹೇಳಲಿ ಕೆಜಿಎಫ್ ಚಾಪ್ಟರ್ 2 ಕ್ಕೆ ಇರುವಂತಹ ಜನಪ್ರಿಯತೆ ಹಾಗೂ ಬೇಡಿಕೆ ಖಂಡಿತವಾಗಿ ಬಾಕ್ಸಾಫೀಸಿನಲ್ಲಿ ಜಾಗತಿಕವಾಗಿ ಯಾರು ಮಾಡಿರದಂತಹ ಸಾಧನೆಯನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕೇಳಿಬರುತ್ತಿದೆ. ಖಂಡಿತವಾಗಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರದ ರೂಪದಲ್ಲಿ ನಮಗೆ ಕೆಜಿಎಫ್ ಚಾಪ್ಟರ್ 2 ಕಂಡರೂ ಕೂಡ ಅಚ್ಚರಿ ಪಡಬೇಕಾದ ವಿಚಾರವಿಲ್ಲ.