ರನ್ ಗಳಿಸಲು ಪರದಾಡುತ್ತಿರುವ ಕಿಂಗ್ ಕೊಹ್ಲಿ; ರವಿ ಶಾಸ್ತ್ರೀ ಹಾಗೂ ವಾಸಿಂ ಜಾಫರ್ ಹೇಳಿದ್ದೇನು ಗೊತ್ತೇ?? ಹೀಗೆ ಮಾಡಿದರೆ ಸಾಕೆ??

51

ನಮಸ್ಕಾರ ಸ್ನೇಹಿತರೇ ಮಾಡರ್ನ್ ಡೇ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ಸು ಕಂಡಿರುವ ಅಂತಹ ಕ್ರಿಕೆಟಿಗ ಯಾರಾದರೂ ಇದ್ದರೆ ಅದು ಖಂಡಿತವಾಗಿ ಇಂದು ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ಆದರೆ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಮಾತನಾಡುತ್ತಿಲ್ಲ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಬೌಲರ್ಗಳಿಗೆ ಸಿಂಹಸ್ವಪ್ನರಾಗಿದ್ದ ವಿರಾಟ್ ಕೊಹ್ಲಿ ರವರು ಇಂದು ರನ್ ಗಳಿಸಲು ಪರದಾಡುತ್ತಿದ್ದಾರೆ.

ಎಲ್ಲರೂ ಕೂಡ ನಾಯಕತ್ವದ ಸ್ಥಾನದಿಂದಾಗಿ ವಿರಾಟ್ ಕೊಹ್ಲಿ ರವರ ಮೇಲೆ ಪ್ರೆಷರ್ ಬೀಳುತ್ತಿದೆ ಎಂಬ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಕೂಡ ತ್ಯಜಿಸಿದ್ದರು. ಆದರೆ ಈಗಲೂ ಕೂಡ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ರವರ ನೀರಸ ಪ್ರದರ್ಶನ ಮುಂದುವರೆದಿದೆ ಎಂದು ಹೇಳಬಹುದಾಗಿದೆ. ಈ ಸೀಸನ್ ನಲ್ಲಿ ಎದುರಾಳಿಗಳ ಪಾಲಿಗೆ ವಿರಾಟ್ ಕೊಹ್ಲಿ ರವರು ನುಂಗಲಾರದ ತುತ್ತಾಗಿ ಪರಿಣಮಿ ಸಲಿದ್ದಾರೆ ಎನ್ನುವುದಾಗಿ ಅಭಿಮಾನಿಗಳು ಕಾತರರಾಗಿದ್ದರು ಆದರೆ ಅದರ ವಿರುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ಲಯಕ್ಕೆ ಬರುವುದಕ್ಕೆ ಇನ್ನು ಕೂಡ ಹಲವಾರು ಸಮಯಗಳನ್ನು ತೆಗೆದುಕೊಳ್ಳಬಹುದಾಗಿದೆ.

ಒಂದು ಕಾಲದಲ್ಲಿ ಚೇಸಿಂಗ್ ಮಾಸ್ಟರ್ ಎನ್ನುವುದಾಗಿ ಕರೆಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ರವರು ಈಗ ಆವರೇಜ್ ಸ್ಕೋರ್ ಮಾಡಲು ಕೂಡ ತಿಣುಕಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಬ್ಯಾಟಿಂಗ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರು ಇತ್ತೀಚಿನ ದಿನಗಳಲ್ಲಿ ಹಲವಾರು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂಬುದಾಗಿ ಎಲ್ಲರಿಗೂ ಕಂಡುಬರುತ್ತದೆ. ಒಂದುಕಾಲದಲ್ಲಿ ಬೌಲರ್ ಗಳ ಬೇವರಿಳಿಸುತ್ತಿದ್ದ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಬ್ಯಾಟ್ ಮೂಲಕ ಯಾವುದೇ ಉತ್ತರವನ್ನು ನೀಡದೆ ಮೌನವಾಗಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಮೊದಲ ಪಂದ್ಯದಲ್ಲಿ 44 ರನ್ ಗಳನ್ನು ಬಾರಿಸಿದ್ದರು. ಅದಾದ ನಂತರ ಯಾವುದೇ ಗಮನಾರ್ಹ ಪ್ರದರ್ಶನ ಇದುವರೆಗೂ ಕೂಡ ಕಂಡುಬಂದಿಲ್ಲ.

ಇನ್ನು ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜ ಕ್ರಿಕೆಟಿಗರು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಹುರಿದಂತೆ ಕೆಲವೊಂದು ಟಿಪ್ಸ್ ನೀಡಿದ್ದು ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆಗಳನ್ನು ನೀಡಿದ್ದಾರೆ. ಹಾಗಿದ್ದರೆ ಕ್ರಿಕೆಟಿಗರು ಯಾರು ಹಾಗೂ ಏನು ಸಲಹೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಭಾರತೀಯ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ರವರು ವಿರಾಟ್ ಕೊಹ್ಲಿ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಪ್ರತಿಯೊಂದು ಎಸೆತಗಳನ್ನು ಕೂಡ ಆಡಲು ಇಷ್ಟಪಡುತ್ತಾರೆ. ವಿರಾಟ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಪಿಚ್ ಗೆ ಅನುಗುಣವಾಗಿ ಎಸೆತಗಳನ್ನು ಬಾರಿಸುವುದೋ ಅಥವಾ ಬಿಡುವುದೋ ಎನ್ನುವ ನಿರ್ಧಾರವನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಹೀಗಾಗಿ ಕೆಲವೊಂದು ಎಸೆತಗಳನ್ನು ಬಿಟ್ಟರು ಕೂಡ ಪರವಾಗಿಲ್ಲ ಎಲ್ಲ ಹೆಸರುಗಳನ್ನು ಆಡಲೇ ಬೇಕೆನ್ನುವ ಅವಶ್ಯಕತೆಯಿಲ್ಲ ಎಂಬುದಾಗಿ ಸಲಹೆ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಖ್ಯಾತ ಕ್ರಿಕೆಟಿಗ ಆಗಿರುವ ವಸಿಮ್ ಅಕ್ರಮ ರವರು ಮೊದಲೆರಡು ಓವರ್ಗಳು ಕೊಹ್ಲಿ ರವರು ಬಚಾವ್ ಆಗಬೇಕಾಗಿದೆ. ಒಂದು ವೇಳೆ ಎಡಗೈ ವೇಗಿಗಳ ಎದುರು ವಿರಾಟ್ ಕೊಹ್ಲಿ ರವರು ಸ್ಟ್ರಗಲ್ ಮಾಡುತ್ತಿದ್ದೇನೆ ಎಂದು ಅನಿಸಿದರೆ ಅವರು ಎರಡು ಓವರ್ ಗಳನ್ನು ಡಿಫೆನ್ಸಿವ್ ಆಗಿ ಆಡಬೇಕು ನಂತರ ಅವರನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಇಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ರವರು ರನ್ ಗಳಿಸಲು ಪರದಾಡುತ್ತಿರ ಬಹುದು ಆದರೆ ಒಮ್ಮೆ ಅವರು ಒಂದು ಬಿಗ್ ಇನ್ನಿಂಗ್ಸ್ ಆಟವಾಡಿದರೆ ಖಂಡಿತವಾಗಿ ಅವರು ಮತ್ತೊಮ್ಮೆ ಲಯಕ್ಕೆ ವಾಪಸಾಗಲಿದ್ದಾರೆ.