ಈ ಬಾರಿಯ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಪತ್ನಿ ಹಾಗೂ ಗರ್ಲ್ ಫ್ರೆಂಡ್ ಗಳನ್ನೂ ನೋಡಿದ್ದೀರಾ??

9

ನಮಸ್ಕಾರ ಸ್ನೇಹಿತರೇ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದರೆ ಅದು ನಮ್ಮ ಭಾರತದ ಐಪಿಎಲ್ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಐಪಿಎಲ್ ನಲ್ಲಿ ಚಾಂಪಿಯನ್ ತಂಡ ವೆಂದರೆ ಅದು ಮುಂಬೈ ಇಂಡಿಯನ್ಸ್ ತಂಡ. ತಂಡದಲ್ಲಿ ಸಾಕಷ್ಟು ವರ್ಷದಿಂದ ವರ್ಷಕ್ಕೆ ಬದಲಾವಣೆ ಕಂಡುಬಂದರೂ ಕೂಡ ಈಗಾಗಲೇ ಐದು ಬಾರಿ ಚಾಂಪಿಯನ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಹಲವಾರು ದಾಖಲೆಗಳನ್ನು ಕೂಡ ಐಪಿಎಲ್ ನಲ್ಲಿ ನಿರ್ಮಿಸಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಸುಂದರ ಪತ್ನಿಯರ ಕುರಿತಂತೆ. ಹಾಗಿದ್ದರೆ ಬಾಲಿವುಡ್ ನಟಿಯರನ್ನು ಕೂಡ ಮೀರಿಸುವಂತೆ ಸುಂದರವಾಗಿರುವ ಚಾಂಪಿಯನ್ಸ್ ಆಟಗಾರರ ಪತ್ನಿಯರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್ ತಂಡದ ಕಪ್ತಾನ ರೋಹಿತ್ ಶರ್ಮಾ ರವರು ರಿತಿಕ ಸಾಜ್ದೆಹ್ ರವರನ್ನು ಮದುವೆಯಾಗಿರುತ್ತಾರೆ. ಇನ್ನು ರಿತಿಕಾ ರವರು ಆಟಗಾರರ ಬ್ರಾಂಡ್ ಎಂಡೋಸ್ಮೆಂಟ್ ಹಾಗೂ ಜಾಹಿರಾತು ಚಿತ್ರೀಕರಣವನ್ನು ನೋಡಿಕೊಳ್ಳುವ ಮ್ಯಾನೇಜರ್ ಆಗಿದ್ದಾರೆ. ರೋಹಿತ್ ಶರ್ಮ ಹಾಗೂ ರಿತಿಕ ಇಬ್ಬರು ಕೂಡ ಜಾಹೀರಾತು ಚಿತ್ರೀಕರಣದ ಸಂದರ್ಭದಲ್ಲಿ ಭೇಟಿಯಾಗಿ ಅಲ್ಲಿಂದ ಅವರ ನಡುವೆ ಪ್ರೀತಿಯೆನ್ನುವುದು ಪ್ರಾರಂಭವಾಗುತ್ತದೆ. 2015 ರಲ್ಲಿ ಇವರಿಬ್ಬರು ಮದುವೆಯಾಗಿ ಈಗ ಸಮಯ ಎನ್ನುವ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ; ಮುಂಬೈ ತಂಡದ ಪ್ರಮುಖ ಹಾಗೂ ಯಶಸ್ವಿ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ರವರು ಕಳೆದ ವರ್ಷ ಸಂಜನಾ ಗಣೇಶನ್ ಅವರನ್ನು ಮದುವೆಯಾಗಿದ್ದಾರೆ. ಸಂಜನಾ ಗಣೇಶನ್ ರವರು ಸ್ಪೋರ್ಟ್ಸ್ ನಿರೂಪಕಿಯಾಗಿದ್ದು ಮಾಡಲಾಗಿ ಕೂಡ ಹಲವಾರು ಬ್ಯೂಟಿ ಕಾಂಟೆಸ್ಟ್ ಗಳಲ್ಲಿ ಮಿಂಚಿದ್ದಾರೆ.

ಕಿರನ್ ಪೊಲಾರ್ಡ್; ಕಿರನ್ ಪೊಲಾರ್ಡ್ ರವರ ಪತ್ನಿ ಹೆಸರು ಜೆನ್ನ ಅಲಿ. ಜೆನ್ನ ಕೆಜೆ ಸ್ಪೋರ್ಟ್ಸ್ ಎನ್ನುವ ಸ್ಪೋರ್ಟ್ಸ್ ಕಂಪನಿಯ ಮಾಲೀಕರಾಗಿದ್ದಾರೆ. ಇವರಿಬ್ಬರು ಮೊದಲು ಪರಿಚಿತರಾಗಿದ್ದು ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ಪಂದ್ಯದಲ್ಲಿ. ಕಾಮನ್ ಫ್ರೆಂಡ್ ಮೂಲಕ ಪರಿಚಿತರಾದ ಇವರಿಬ್ಬರು ಬರೋಬ್ಬರಿ ಏಳು ವರ್ಷಗಳ ಕಾಲ ಡೇಟ್ ಮಾಡುತ್ತಾರೆ. ನಂತರ 2012 ರಲ್ಲಿ ಮದುವೆ ಆಗುತ್ತಾರೆ. ಇವರಿಬ್ಬರಿಗೂ ಮೂರು ಮಕ್ಕಳಿದ್ದಾರೆ.

ಸೂರ್ಯ ಕುಮಾರ್ ಯಾದವ್; ಮುಂಬೈ ತಂಡದ ಬ್ಯಾಟಿಂಗ್ ಜೀವಾಳವಾಗಿರುವ ಸೂರ್ಯ ಕುಮಾರ್ ಯಾದವ್ ರವರು ದೇವಿಶಾ ಶೆಟ್ಟಿಯವರನ್ನು ಮದುವೆಯಾಗಿರುತ್ತಾರೆ. ಇಬ್ಬರೂ ಕೂಡ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ. ಇಷ್ಟು ಮಾತ್ರವಲ್ಲದೆ ದೇವಿಶಾ ಶೆಟ್ಟಿಯವರು ಒಬ್ಬ ಡ್ಯಾನ್ಸರ್ ಹಾಗೂ ಡಾನ್ಸ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು ಕೆಲವೇ ತಿಂಗಳ ನಂತರ ಮದುವೆ ಕೂಡ ಆಗಿದ್ದಾರೆ.

ಇಶಾನ್ ಕಿಶನ್; ಈ ಬಾರಿ ಅತ್ಯಂತ ದುಬಾರಿ ಆಟಗಾರನಾಗಿರುವ ಇಶಾನ್ ಕಿಶನ್ ರವರು ಕೇವಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಾತ್ರವಲ್ಲದೆ ಭಾರತೀಯ ತಂಡದ ಉದಯೋನ್ಮುಖ ಯುವ ಆಟಗಾರರು ಕೂಡ ಆಗಿದ್ದಾರೆ. ಇನ್ನು ಇವರು ಮದುವೆ ಆಗದಿದ್ದರೂ ಕೂಡ ಗರ್ಲ್ ಫ್ರೆಂಡ್ ಅನ್ನು ಹೊಂದಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಅವರ ಗೆಳತಿ ಯಾಗಿರುವ ಅದಿತಿ ಹುಂಡಿಯ ಅವರ ಜನ್ಮದಿನದಂದು ವಿಶೇಷವಾದ ಪೋಸ್ಟ್ ಮಾಡುವ ಮೂಲಕ ಇದಕ್ಕೆ ಪುಷ್ಟಿ ನೀಡಿದ್ದಾರೆ. ಅದಿತಿ ಹುಂಡಿಯ ವೃತ್ತಿಪರ ಮಾಡೆಲ್ ಆಗಿದ್ದಾರೆ. ಆಗಾಗ ಇಶಾನ್ ಕಿಶನ್ ರವರನ್ನು ಸಪೋರ್ಟ್ ಮಾಡಲು ಮುಂಬೈ ಸ್ಟೇಡಿಯಂಗೆ ಕೂಡ ಬರುತ್ತಾರೆ.

ಜೋಫ್ರಾ ಆರ್ಚರ್; ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿರುವ ಐಪಿಎಲ್ ನಲ್ಲಿ ಯಶಸ್ವಿ ಆಲ್-ರೌಂಡರ್ ಗಳಲ್ಲಿ ಒಬ್ಬರಾಗಿರುವ ಜೋಫ್ರಾ ಆರ್ಚರ್ ಬ್ರಿಟಿಷ್ ಮೂಲದ ಡ್ರುವನ್ನಾ ಬಟ್ಲರ್ ಎನ್ನುವವರನ್ನು ಡೇಟ್ ಮಾಡುತ್ತಿದ್ದಾರೆ ಆದರೆ ಇದನ್ನು ಎಲ್ಲೂ ಕೂಡ ಹೊರಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಜಯದೇವ್ ಉನದ್ಕತ್; ಮುಂಬೈ ತಂಡದ ವೇಗಿಯಾಗಿರುವ ಜಯದೇವ್ ಉನದ್ಕತ್ ಅವರು ರಿನ್ನಿ ಕಂಟಾರಿಯಾ ಎನ್ನುವವರನ್ನು ಅರೆಂಜ್ ಮ್ಯಾರೇಜ್ ಆಗಿದ್ದಾರೆ. 2020 ರ ಮಾರ್ಚ್ನಲ್ಲಿ ಎಂಗೇಜ್ಮೆಂಟ್ ಆಗಿ 2021 ರ ಫೆಬ್ರವರಿಯಲ್ಲಿ ಮದುವೆಯಾಗಿದ್ದಾರೆ.

ಟೈಮಲ್ ಮಿಲ್ಸ್ ; ಟೈಮಲ್ ಕೇಟ್ ಮಿಲ್ಸ್ ರವರು ಇಂಡಿಯಾ ಕೇಟ್ ಮೆಕ್ಲೆವನ್ ರವರನ್ನು ಮದುವೆಯಾಗಿದ್ದಾರೆ. ಹಲವಾರು ವರ್ಷಗಳ ಡೇಟಿಂಗ್ ನಂತರ 2019 ರಲ್ಲಿ ಇಬ್ಬರೂ ಕೂಡ ವೈವಾಹಿಕ ಜೀವನಕ್ಕೆ ಒಳಗಾಗಿದ್ದಾರೆ. 2020 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಟಿಮ್ ಡೇವಿಡ್; ಟಿಮ್ ಡೇವಿಡ್ ರವರು ಸ್ಟೆಫನೀ ಕೇರ್ಶಾ ಅವರನ್ನು ಮದುವೆಯಾಗಿದ್ದಾರೆ. ಸ್ಟೆಫನೀ ರವರು ಆಸ್ಟ್ರೇಲಿಯಾ ಮೂಲದ ಹಾಕಿ ಆಟಗಾರ್ತಿ ಆಗಿದ್ದಾರೆ. ಆಗಾಗ ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಡೇನಿಯಲ್ ಸ್ಯಾಮ್; ಡೇನಿಯಲ್ ಸ್ಯಾಮ್ ಅವರ ಪತ್ನಿ ಹೆಸರು ಡೇನಿಯಲ್ಲೇ. ಮುಂಬೈ ಇಂಡಿಯನ್ಸ್ ತಂಡದ ಆಲ್-ರೌಂಡರ್ ಹಾಗಿರುವ ಡೇನಿಯಲ್ ಮದುವೆಯಾಗಿದ್ದು 2015 ರಲ್ಲಿ. ಈ ಜೋಡಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುತ್ತದೆ. ಇವರೇ ಮುಂಬೈನ ತಂಡದ ಆಟಗಾರರ ಸುಂದರ ಪತ್ನಿಯರು.