ಕರ್ನಾಟಕದ ಅಚ್ಚುಮೆಚ್ಚಿನ ಧಾರವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹ ಪಾತ್ರಧಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಹಿನ್ನೆಲೆ ಏನು ಗೊತ್ತೇ??

2,778

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಕಿರುತೆರೆಯಲ್ಲಿ ದೊಡ್ಡಮಟ್ಟದ ಬದಲಾವಣೆಯನ್ನು ತಂದಂತಹ ಧಾರವಾಹಿ ಎಂದರೆ ಅದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿ ಎನ್ನಬಹುದು. ಧಾರವಾಹಿ ಕ್ವಾಲಿಟಿ ಮೇಕಿಂಗ್ ಕುರಿತಂತೆ ಕಿರುತೆರೆ ಪ್ರೇಕ್ಷಕರಿಗೆ ತೋರಿಸಿ ಕೊಟ್ಟಂತಹ ಹಾಗೂ ಸಾಬೀತುಪಡಿಸಿದಂತಹ ಧಾರವಾಹಿ. ಈಗ ಅದೇ ದಾರವಾಹಿಯ ನಿರ್ದೇಶಕರಾಗಿರುವ ಆರೂರು ಜಗದೀಶ್ ರವರು ನಿರ್ದೇಶಿಸಿ ನಿರ್ಮಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ರೇಟಿಂಗ್ ವಿಚಾರದಲ್ಲಿ ಪ್ರತಿ ವಾರ ಕೂಡ ಮೊದಲನೇ ಸ್ಥಾನವನ್ನು ಅಲಂಕರಿಸಿ ಯಶಸ್ವಿಯಾಗಿ ಪ್ರಸಾರ ಕಾಣುತ್ತಿದೆ. ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿ ಪ್ರಸಾರ ಕಾಣುತ್ತಿದೆ.

ಪುಟ್ಟಕ್ಕನ ಮಕ್ಕಳು ಧಾರವಾಹಿಯ ವಿಚಾರಕ್ಕೆ ಬಂದರೆ ಅತ್ಯಂತ ಜನಪ್ರಿಯವಾಗಿರುವ ಎರಡು ಪಾತ್ರಗಳೆಂದರೆ ಅದು ಸ್ನೇಹ ಹಾಗೂ ಕಂಠಿ. ಕಂಠಿ ಪಾತ್ರದಾರಿ ಧನುಶ್ ರವರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವಂತಹ ಧನುಶ್ ರವರು ಆಡಿಶನ್ ನೀಡಿ ಧಾರವಾಹಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಈಗ ಎಲ್ಲರ ಮೆಚ್ಚುಗೆಗೂ ಕೂಡ ಪಾತ್ರರಾಗಿದ್ದಾರೆ ಎನ್ನುವುದು ಕೂಡ ನಿಮಗೆ ತಿಳಿದಿರುವಂತಹ ವಿಚಾರವಾಗಿದೆ. ಇನ್ನು ಸ್ನೇಹ ಪಾತ್ರವನ್ನು ನಿರ್ವಹಿಸುತ್ತಿರುವ ಅವರ ನಿಜವಾದ ಹೆಸರು ಸಂಜನಾ ಬುರ್ಲಿ. ಇದಕ್ಕೂ ಮುನ್ನ ಅವರು ಲಗ್ನಪತ್ರಿಕೆ ಎನ್ನುವ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಯಲ್ಲಿ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು ಆದರೆ ಇದು ರೇಟಿಂಗ್ ಚೆನ್ನಾಗಿ ಬರೆದ ಇದ್ದ ಕಾರಣದಿಂದಾಗಿ ಹೆಚ್ಚು ದಿನ ನಡೆಯಲಿಲ್ಲ.

ಇದರಿಂದ ಬೇಸರಗೊಂಡ ಅಂತಹ ನಟಿ ಸಂಜನಾ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಈ ಗಟನೆ ನಡೆದ ಮೂರು ತಿಂಗಳ ನಂತರ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಆರೂರು ಜಗದೀಶ್ ರವರು ಸಂಜನಾ ರವರಿಗೆ ಪುಟ್ಟಕ್ಕನ ಮಕ್ಕಳು ಧಾರವಾಹಿ ಆಫರ್ ನೀಡುತ್ತಾರೆ. ಆದರೆ ಕಾಲೇಜ್ ಪುನರ್ ಆರಂಭವಾಗಿದ್ದ ಕಾರಣದಿಂದಾಗಿ ಸಂಜನಾ ರವರು ಈ ಅವಕಾಶವನ್ನು ನಯವಾಗಿ ತಿರಸ್ಕರಿಸುತ್ತಾರೆ.

ಆದರೆ ಸಂಜನಾ ರವರ ಅದೃಷ್ಟ ಎನ್ನುವಂತೆ ಅವರ ವಿದ್ಯಾಭ್ಯಾಸದ ತರಗತಿಗಳು ಆನ್ಲೈನ್ ಕ್ಲಾಸ್ ಮೂಲಕ ನಡೆಯಲು ಆರಂಭವಾಗುತ್ತದೆ. ಹೀಗಾಗಿ ಮತ್ತೆ ಆರೂರು ಜಗದೀಶ್ ರವರ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವಂತಹ ಅವಕಾಶವನ್ನು ಒಪ್ಪಿಕೊಳ್ಳುತ್ತಾರೆ. ಇಂದಿಗೂ ಕೂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಂತಹ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಸಂಜನಾ ರವರು ತಮ್ಮ ಪ್ರಥಮ ಆದ್ಯತೆ ವಿದ್ಯಾಭ್ಯಾಸವೇ ಎಂಬುದಾಗಿ ಕೂಡ ಹೇಳುತ್ತಾರೆ. ಒಮ್ಮೆ ನಟನೆಯಲ್ಲಿ ಅವಕಾಶ ಸಿಕ್ಕರೆ ಸಾಕು ತಮ್ಮ ಲೈಫ್ ಸೆಟಲ್ ಆಗಿದೆ ಎಂಬುದಾಗಿ ಅಂದುಕೊಳ್ಳುವ ಎಷ್ಟೋ ಜನರ ನಡುವೆ ತನ್ನ ವಿದ್ಯಾಭ್ಯಾಸವೇ ಮುಖ್ಯ ಎಂದು ಭಾವಿಸಿರುವ ಸಂಜನಾ ರವರು ವಿಶೇಷವಾಗಿ ಕಾಣಸಿಗುತ್ತಾರೆ.

ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಇಷ್ಟೊಂದು ಜನಪ್ರಿಯತೆಯನ್ನು ಹೊಂದಿರುವಂತಹ ಸಂಜನಾ ರವರು ಇಂದಿಗೂ ಕೂಡ ತಮ್ಮ ಇಂಜಿನಿಯರ್ ಕ್ಲಾಸನ್ನು ತಪ್ಪದೆ ಪಾಲಿಸುತ್ತಾರೆ. ಕೆಲವರು ಯಾವುದೇ ಬೇರೆ ಕೆಲಸ ಇಲ್ಲದೆ ಕೇವಲ ಇಂಜಿನಿಯರಿಂಗ್ ಮಾಡಿದವರು ಕೂಡ ರ್ಯಾಂಕ್ ಪಡೆಯಬಲ್ಲಂತಹ ಮಾರ್ಕ್ಸ್ ಪಡೆಯುವುದು ಅನುಮಾನವೇ ಸರಿ. ಆದರೆ ಸಂಜನಾ ರವರು ನಟನೆಯನ್ನು ಕೂಡ ನಿರ್ವಹಿಸಿಕೊಂಡು ಇತ್ತ ಎಂಜಿನಿಯರಿಂಗ್ ಕೂಡ ಮಾಡಿಕೊಂಡು ರಾಂಕ್ ಅಂಕಗಳನ್ನು ಪಡೆಯುತ್ತಿದ್ದಾರೆ. ನಿಜಕ್ಕೂ ಕೂಡ ಸಂಜನಾ ರವರ ಕರ್ತವ್ಯನಿಷ್ಠೆ ಹಾಗೂ ವಿದ್ಯಾ ನಿಷ್ಠೆಗೆ ನಮ್ಮ ಸಲಾಂ ಹೇಳಲೇಬೇಕು. ಸದ್ಯ 8ನೇ ಸೆಮಿಸ್ಟರ್ ಎಂಜಿನಿಯರಿಂಗ್ ಮಾಡುತ್ತಿದ್ದಾರೆ ನಮ್ಮೆಲ್ಲರ ನೆಚ್ಚಿನ ಸಂಜನಾ ಬುರ್ಲಿ.

ಚಿಕ್ಕವಯಸ್ಸಿನಿಂದಲೂ ಕೂಡ ಸಂಜನಾ ರವರಿಗೆ ನಾಟಕ ಹಾಗೂ ಏಕಪಾತ್ರಾಭಿನಯಗಳು ಮೇಲೆ ಎಲ್ಲಿಲ್ಲದ ಆಸಕ್ತಿ ಹಾಗೂ ಜಿಲ್ಲಾ ಹಾಗೂ ರಾಜ್ಯ ಹಾಗೂ ಅಂತರ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕೂಡ ಇವುಗಳ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇನ್ನೊಂದು ಕಡೆ ಅವರ ತಂದೆ-ತಾಯಿಯರಿಗೆ ಮಗಳು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಎನ್ನುವ ಹಂಬಲವೂ ಕೂಡ ಇದೆ. ಹೀಗಾಗಿ ತನ್ನ ಹಾಗೂ ತನ್ನ ಪೋಷಕರ ಎರಡು ಕನಸುಗಳನ್ನು ಒಂದೇ ದೋಣಿಯ ಮೇಲೆ ಕೂತು ಈಡೇರಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಸಂಜನಾ ರವರ ಈ ಪ್ರಯತ್ನಕ್ಕೆ ನಾವು ಪ್ರಶಂಸೆ ನೀಡಲೇಬೇಕು.

ಧಾರವಾಹಿಯಲ್ಲಿ ಸಂಜನಾ ರವರನ್ನು ಕಂಡವರು ಇಂತಹ ಮಗಳು ನಮಗೆ ಇರಬಾರದೆ ಎಂಬುದಾಗಿ ಆಶೀರ್ವಾದ ನೀಡಿದವರು ಕೂಡ ಇದ್ದಾರೆ. ಇನ್ನು ನಟನೆ ಹಾಗೂ ತಮ್ಮ ತಂದೆ-ತಾಯಿಯ ಕನಸಾಗಿರುವ ಎಂಜಿನಿಯರಿಂಗ್ ಮಾಡುವ ಪ್ರಯತ್ನಕ್ಕೆ ಸಪೋರ್ಟ್ ಮಾಡುತ್ತಿರುವ ದಾರವಾಹಿ ತಂಡದವರಿಗೆ ತಂದೆ-ತಾಯಿಯರಿಗೆ ಪ್ರೇಕ್ಷಕರಿಗೆ ಹಾಗೂ ಕಾಲೇಜಿನ ಅವರಿಗೆ ಧನ್ಯವಾದಗಳು ಎಂಬುದಾಗಿ ಕೂಡ ಸಂಜನಾ ಬರ್ಲಿ ಅವರು ಹೇಳಿಕೊಂಡಿದ್ದಾರೆ. ಸಂಜನಾ ಬುರ್ಲಿ ಅವರ ಸ್ನೇಹ ಪಾತ್ರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.