ಆರ್ಸಿಬಿ ತಂಡದ ವಿರುದ್ಧ ಸೋತ ಬೆನ್ನಲ್ಲೇ ಮತ್ತೊಂದು ಶಾಕ್ ಅನುಭವಿಸಿದ ರಾಜಸ್ಥಾನ ರಾಯಲ್ಸ್ ತಂಡ. ಏನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿನ್ನೆಯವರೆಗೂ ಕೂಡ ರಾಜಸ್ಥಾನ ರಾಯಲ್ಸ್ ತಂಡ ಸೋಲಿಲ್ಲದ ಸರದಾರನಾಗಿ ಐಪಿಎಲ್ ನಲ್ಲಿ ಮಿಂಚುತ್ತಿತ್ತು. ಆದರೆ ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲುವ ಮೂಲಕ ಟೂರ್ನಿಯ ಮೊದಲ ಸೋಲಿಗೆ ಸಾಕ್ಷಿಯಾಯಿತು.

ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಈ ಬಾರಿಯ ಅಜೇಯ ತಂಡಗಳಲ್ಲಿ ಒಂದಾಗಿತ್ತು. ಆದರೆ ನಿನ್ನೆ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಾಲ್ಕು ವಿಕೆಟ್ ಗಳ ಸೋಲನ್ನು ಅನುಭವಿಸಿದೆ. ಎಲ್ಲಾ ವಿಭಾಗದಲ್ಲಿ ಕೂಡ ಸಮಾಧಾನಕರ ಪ್ರದರ್ಶನವನ್ನು ನೀಡಿದರು ಕೂಡ ಕೊನೆಯ ಕ್ಷಣದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಆಹ್ಮದ್ ರವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡ ಸೋಲನ್ನು ಅನುಭವಿಸಿತು. ಆದರೆ ಇದರ ಬೆನ್ನಲ್ಲೇ ಇನ್ನೊಂದು ಆಘಾ’ತಕ್ಕೆ ರಾಜಸ್ತಾನ್ ರಾಯಲ್ಸ್ ತಂಡ ಒಳಗಾಗಿದೆ ಎಂದರೆ ನಂಬಲೇಬೇಕು.

ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲಿನ ಬೇಸರದಲ್ಲಿ ಇರುವ ರಾಜಸ್ಥಾನ ರಾಯಲ್ಸ್ ತಂಡ ಈಗ ಟೂರ್ನಿಯ ಮಧ್ಯದಲ್ಲೇ ಪ್ರಮುಖ ಬೌಲರನ್ನು ಕಳೆದುಕೊಂಡಿರುವ ದುಃಖದಲ್ಲಿ ಇದೆ. ಹಾಗಿದ್ದರೆ ತಂಡವನ್ನು ಬಿಟ್ಟು ಹೋಗುತ್ತಿರುವ ಬೌಲರ್ ಯಾರು ಕಾರಣ ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹೌದು ರಾಜಸ್ತಾನ ರಾಯಲ್ಸ್ ತಂಡ ಮೆಗಾ ಹರಾಜಿನಲ್ಲಿ ನತನ್ ಕೌಲ್ಟರ್ ನೈಲ್ ರವರನ್ನು ಬರೋಬ್ಬರಿ 2 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ ಇಂಜುರಿ ಆಗಿರುವ ಕಾರಣದಿಂದಾಗಿ ಈಗ ನತನ್ ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ ಎಂಬುದಾಗಿ ಅಧಿಕೃತವಾಗಿ ಹೇಳಿಕೆ ಹೊರಬಿದ್ದಿದೆ. ಯಾವ ಕಾರಣಕ್ಕಾಗಿ ಗಾ’ಯಗೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈಗಿರುವ ದೊಡ್ಡ ಪ್ರಶ್ನೆ ಎಂದರೆ ಅವರ ಬದಲಿಗೆ ಯಾವ ಆಟಗಾರರನ್ನು ರಾಜಸ್ಥಾನ ರಾಯಲ್ಸ್ ತಂಡ ಸೇರಿಸಿಕೊಳ್ಳಲಿದೆ ಎನ್ನುವುದು.