16 ವರ್ಷಗಳಿಂದ ನಟನೆ ಮಾಡುತ್ತಿದ್ದರೂ ಕೂಡ ಇಂದಿಗೂ ಕೂಡ ಯಶಸ್ವಿ ನಟಿಯಾಗಿರುವ ನಿತ್ಯ ಮೆನನ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??

24

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಮೂಲದ ನಟಿಯರು ಪರಭಾಷೆಗಳಲ್ಲಿ ಹಲವಾರು ವರ್ಷಗಳಿಂದಲೂ ಕೂಡ ನಟಿಸಿಕೊಂಡು ಬರುತ್ತಿದ್ದಾರೆ. ಅವರಲ್ಲಿ ಒಬ್ಬರು ನಟಿ ನಿತ್ಯ ಮೆನನ್ ರವರು. ನಿತ್ಯ ಮೆನನ್ ರವರನ್ನು ಮೊದಲಿನಿಂದಲೂ ಕೂಡ ಎಲ್ಲರೂ ಕೇರಳ ಮೂಲದ ನಟಿ ಎಂಬುದಾಗಿ ಗುರುತಿಸಿಕೊಂಡಿದ್ದರು.

ಆದರೆ ಇತ್ತೀಚಿಗೆ ಕೆಲವರ್ಷಗಳ ಹಿಂದೆ ಅವರು ಮೂಲತಹ ಬೆಂಗಳೂರಿನವರು ಎಂಬುದು ಎಲ್ಲರಿಗೂ ತಿಳಿದುಬಂದಿದೆ. 2006 ರಲ್ಲಿ ಬಿಡುಗಡೆ ಆದಂತಹ 7 ಓ ಕ್ಲಾಕ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದರ್ಪಣೆ ಮಾಡುತ್ತಾರೆ. ಜೋಶ್ ಕೋಟಿಗೊಬ್ಬ 2 ಹಾಗೂ ಮೈನಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ. ಈಗಾಗಲೇ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಕೇವಲ ತಮ್ಮ ನಟನೆಯ ಮೂಲಕವೇ ಸಿನಿಮಾವನ್ನು ಗೆಲ್ಲಿಸಬಹುದಾದಂತಹ ಪ್ರತಿಭೆ ಹಾಗೂ ಛಾಪು ನಿತ್ಯಾ ಮೆನನ್ ಅವರ ಬಳಿ ಇದೆ.

ಈಗಾಗಲೇ ಇತ್ಯಾ ಮೆನನ್ ರವರು ಕನ್ನಡ ಚಿತ್ರರಂಗಕ್ಕೆ ಅಥವಾ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 14 ವರ್ಷಗಳ ಕಳೆದು ಹೋಗಿದೆ. ಅವರು ವಯಸ್ಸು ಎಷ್ಟು ಇರಬಹುದು ಎನ್ನುವುದಾಗಿ ಎಲ್ಲರಲ್ಲೂ ಕೂಡ ಅದರಲ್ಲು ವಿಶೇಷವಾಗಿ ಅವರ ಅಭಿಮಾನಿಗಳಲ್ಲಿ ಗೊಂದಲವಿದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ನಿಮ್ಮ ಗೊಂದಲವನ್ನು ನಾವು ಪರಿಹರಿಸುತ್ತೇವೆ. ಹೌದು 16 ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಮಿಂಚು ಹರಿಸುತ್ತಿರುವ ನಟಿ ನಿತ್ಯಾ ಮೆನನ್ ರವರಿಗೆ ವಯಸ್ಸು 32 ವರ್ಷ ಎಂದರೆ ಯಾರು ಕೂಡ ನಂಬೋದಕ್ಕೆ ಸಾಧ್ಯವೇ ಇಲ್ಲ. ಆದರೂ ಕೂಡ ಇದು ನಂಬಲೇಬೇಕಾದ ಅಂತಹ ಸತ್ಯ. ನೋಡಲು 20ರ ಹರೆಯದ ಸುಂದರಿಯಂತೆ ಕಂಡರೂ ಕೂಡ ಅವರ ನಿಜವಾದ ವಯಸ್ಸು 32. ಇಂದಿಗೂ ಕೂಡ ನಟನೆ ಆಧಾರಿತ ಪ್ರಮುಖ ಪಾತ್ರವನ್ನು ಯಾವುದಾದರೂ ನಟಿಗೆ ನೀಡಬೇಕೆಂದು ನಿರ್ದೇಶಕರು ಯೋಚಿಸುತ್ತಿದ್ದರೆ ಅವರಿಗೆ ಮೊದಲು ಆಯ್ಕೆಯಲ್ಲಿ ಬರುವುದೇ ನಿತ್ಯ ಮೆನನ್ ಅವರ ಹೆಸರು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.