ವಿದ್ಯಾವಂತರೇ ಹೀಗೆ ಆದರೆ ಹೇಗೆ, ಮಾಡಿದ ಒಂದು ತಪ್ಪಿಗಾಗಿ ಆಕೆಯ ಜೀವನ ಏನಾಯಿತು ಗೊತ್ತಾ?? ಆ ತಪ್ಪಾದರೂ ಏನು ಗೊತ್ತೇ??

132

ನಮಸ್ಕಾರ ಸ್ನೇಹಿತರೇ ವಿದ್ಯಾವಂತರಾಗಿದ್ದರೂ ಕೂಡ ಕೆಲವು ಜನರು ಈ ಸಮಾಜದಲ್ಲಿ ಯಾವುದನ್ನು ಹೇಗೆ ನೋಡಬೇಕು ಯಾವುದು ಒಳಿತು ಹಾಗೂ ಕೆಡುಕು ಎಂಬುದರ ವ್ಯತ್ಯಾಸವನ್ನು ಅಂದಾಜಿಸಲು ವಿಫಲರಾಗುತ್ತಾರೆ. ಇಲ್ಲಿ ನಾವು ಹೇಳಲು ಹೊರಟಿರುವ ವಿಚಾರವೂ ಕೂಡ ಘಟನೆಯಾಗಿದ್ದು ಇದು ನಿಮಗೊಂದು ಪಾಠವಾಗಲಿ ಎಂಬುದು ನಮ್ಮೆಲ್ಲರ ಆಸೆ.

ದಾನೇಶ್ವರಿ ಎನ್ನುವ ಹುಡುಗಿ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯಾಗಿದ್ದಾಳೆ. ಶಿವಕುಮಾರ್ ಎನ್ನುವ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆತನನ್ನು ಪ್ರೀತಿಸುತ್ತಿದ್ದಳು. ಇತ್ತೀಚಿಗಷ್ಟೇ ಆತನನ್ನು ಮದುವೆಯಾಗುವುದಾಗಿ ಕೇಳಿಕೊಂಡಿದ್ದಳು. ಇಷ್ಟು ಸಮಯಗಳ ಕಾಲ ಪ್ರೀತಿಸುತ್ತಿದ್ದ ಆತ ಈಗ ಮದುವೆಯಾಗಲು ಎಂದು ಕೇಳಿದಾಗ ಜಾತಿಕಾರಣ ಹೇಳಿ ಮದುವೆ ಆಗುವುದಿಲ್ಲ ಎನ್ನುವುದಾಗಿ ಹೇಳಿದ್ದಾನೆ. ಕೇವಲ ಇಷ್ಟು ಮಾತ್ರವಲ್ಲದೆ ನಿನ್ನನ್ನು ಮುಗಿಸುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾನೆ.

ಇಬ್ಬರ ನಡುವೆ ಮದುವೆ ವಿಚಾರವಾಗಿ ಗಲಾಟೆ ತಾರಕಕ್ಕೇರಿದೆ. ಆಗ ದಾನೇಶ್ವರಿ ಯ ಹಿಂದಿನಿಂದ ಬಂದಂತಹ ಮೂವರು ಹುಡುಗರು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂ’ಕಿ ಹಚ್ಚಿದ್ದಾರೆ. ಕೂಡಲೇ ದಾನೇಶ್ವರಿ ಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನವೂ ನಡೆಯುತ್ತಿದ್ದರೂ ಕೂಡ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕವನ್ನು ತ್ಯಜಿಸಿದ್ದಾಳೆ. ಈಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರು ದಾಖಲಾಗಿದೆ.

ಈ ಕುರಿತಂತೆ ದಾನೇಶ್ವರಿ ಯ ತಂದೆಯ ಬಳಿ ಕೇಳಿದಾಗ ಅವರು ಹೇಳಿರುವ ಹೇಳಿಕೆಯು ಕೂಡ ಆಶ್ಚರ್ಯವನ್ನು ತರಿಸುವಂತಿದೆ. ಹೌದು ದಾನೇಶ್ವರಿ ಹಾಗೆಯೇ ಮದುವೆಯ ತಯಾರಿಯನ್ನು ಕೂಡ ಮಾಡಲಾಗಿತ್ತಂತೆ. ಈ ಸಂದರ್ಭದಲ್ಲಿ ದಾನೇಶ್ವರಿ ಬಾದಾಮಿ ಮೂಲದವನು ಆಗಿರುವ ಶಿವಕುಮಾರ್ ನನ್ನು ಪ್ರೀತಿಸುತ್ತಿರುವುದಾಗಿ ಆತನನ್ನು ಮದುವೆಯಾಗಬೇಕು ಎಂಬುದಾಗಿ ಅಂದುಕೊಂಡಿದ್ದಳಂತೆ. ಆದರೆ ಶಿವಕುಮಾರ್ ಜಾತಿ ಕಾರಣವೊಡ್ಡಿ ನಿನ್ನನ್ನು ನನ್ನ ಮನೆಯವರು ಸೇರಿಸಿಕೊಳ್ಳುವುದಿಲ್ಲ ಎಂಬುದಾಗಿ ಹೇಳಿ ದೂರ ಮಾಡುತ್ತ ಬಂದಿದ್ದನಂತೆ.

ಇನ್ನು ಪೊಲೀಸರು ಈ ಪ್ರಕರಣದಲ್ಲಿ ದಾನೇಶ್ವರಿಯೇ ಪೆಟ್ರೋಲ್ ಹಾಕಿಕೊಂಡು ಇಂತಹ ಕೆಲಸವನ್ನು ಮಾಡಿಕೊಂಡಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ. ಆದರೆ ದಾನೇಶ್ವರಿ ತಂದೆ ಹೇಳುವಂತೆ ಶಿವಕುಮಾರ್ ಈ ಕೆಲಸ ಮಾಡಿರುವುದು ಎನ್ನುವುದಾಗಿ ದೂರನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಅವನೇ ತನ್ನ ಮಗಳನ್ನು ಆಸ್ಪತ್ರೆಗೆ ಸೇರಿಸುವ ನಾಟಕಮಾಡಿ ಮೊಬೈಲ್ ನಂಬರನ್ನು ನೀಡಿದ್ದಾನೆ ಎಂಬುದಾಗಿ ಕೂಡ ದೂರನ್ನು ಹೇಳಿದ್ದಾರೆ.

ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಕಲಿತು ಒಳ್ಳೆಯ ಉದ್ಯೋಗಕ್ಕೆ ಹೋಗುತ್ತಾರೆ ಎನ್ನುವುದಾಗಿ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಹೋಗುವ ಜಾಗದಲ್ಲಿ ಹಿನ್ನೆಲೆಯೇ ತಿಳಿಯದೆ ಇರುವವರನ್ನು ಪ್ರೀತಿಸಿ ಮದುವೆಯಾಗುವ ಹಂತಕ್ಕೆ ಕೂಡ ಹೋಗಿರುತ್ತಾರೆ ಆದರೆ ಮುಂದಿನ ಭವಿಷ್ಯದ ಅರಿವು ಯಾರಿಗೂ ಕೂಡ ಇರುವುದಿಲ್ಲ. ಗೊತ್ತುಗುರಿ ಇಲ್ಲದಂತಹ ಪ್ರಿಯತಮನನ್ನು ನಂಬಿ ಕೊನೆಗೆ ಮೋಸ ಹೋಗುವ ಬದಲು ನಿಮ್ಮ ಮೇಲೆ ನಂಬಿಕೆ ಇಟ್ಟಿರುವ ಮನೆಯವರ ನಂಬಿಕೆಯನ್ನು ನಿಜವಾಗಿಸಿ ಒಳ್ಳೆಯ ಕೆಲಸಕ್ಕೆ ಸೇರಿ ಎಂಬುದಾಗಿ ಹೇಳಲು ಇಷ್ಟಪಡುತ್ತೇವೆ. ಈ ಘಟನೆಯಿಂದ ನಿಮಗೆ ಏನು ಅನಿಸುತ್ತೆ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.

ಇದು ಕೇವಲ ಕಾಲ್ಪನಿಕ ಕಥೆಯಲ್ಲ ಬದಲಾಗಿ ನೈಜ ಘಟನೆ ಹೀಗಾಗಿ ತಪ್ಪದೇ ಇಂತಹ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನೀವು ತೆಗೆದುಕೊಳ್ಳುವ ಹೆಜ್ಜೆ ಹಾಗೂ ನಿರ್ಧಾರವನ್ನು ಹಲವಾರು ಬಾರಿ ಯೋಚಿಸಿ ನಂತರ ಮುಂದಿನ ಹೆಜ್ಜೆಯನ್ನು ಇಡಿ. ಒಂದೇ ಒಂದು ತಪ್ಪು ನಿರ್ಧಾರದಿಂದ ಆಗಿ ಮುಂದಿನ ಹೆಜ್ಜೆಯನ್ನು ಯಾವತ್ತೂ ಕೂಡ ಬಿಡದಂತೆ ಆಗಬಾರದಲ್ಲವೇ. ಇಂದಿನ ಯುವತಿ ಜವಾಬ್ದಾರಿಯುತವಾಗಿ ತಮ್ಮ ಜವಾಬ್ದಾರಿಯನ್ನು ಅರಿತು ಜೀವನವನ್ನು ನಡೆಸಬೇಕು.