ಮಾವನನ್ನೇ ಮನೆಯಿಂದ ಹೊರಹಾಕಲು ಪ್ಲಾನ್ ಮಾಡಿದ ಸೊಸೆಯರು; ನಂತರ ಮಾವ ಮಾಡಿದ್ದೇನು ಗೊತ್ತಾ?? ಸೊಸೆಯರಿಗೆ ಶಾಕ್ ನೀಡಿದ ಮಾವ

47

ನಮಸ್ಕಾರ ಸ್ನೇಹಿತರೇ ನಾವು ಇಂದು ನಿಮಗೆ ಚೆನ್ನೈನಲ್ಲಿ ನಡೆದಿರುವಂತಹ ಒಂದು ಸತ್ಯ ಘಟನೆಯ ಕುರಿತಂತೆ ಹೇಳಲು ಹೊರಟಿದ್ದೇವೆ. ಹೀಗಾಗಿ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಚಾಚೂ ತಪ್ಪದೇ ಓದಿ. ಚೆನ್ನೈನಲ್ಲಿ ಸುಂದರನ್ ಎನ್ನುವ 60 ವರ್ಷದ ವಯಸ್ಸಾದ ವ್ಯಕ್ತಿ ಇದ್ದಾರೆ. ಇವರ ಪತ್ನಿ ಕೆಲವು ಸಮಯಗಳ ಹಿಂದಷ್ಟೇ ಕ್ಯಾ’ನ್ಸರ್ ನಿಂದಾಗಿ ಮರಣವನ್ನು ಹೊಂದುತ್ತಾರೆ. ಈತನಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಈ ಗಂಡು ಮಕ್ಕಳಿಬ್ಬರಿಗೂ ಕೂಡ ಮದುವೆಯಾಗಿ ಮಕ್ಕಳು ಕೂಡ ಇದ್ದಾರೆ. ಇನ್ನು ಸುಂದರನ್ ಕೂಡ ತಾನು ಕಟ್ಟಿಸಿದ ಮನೆಯಲ್ಲಿ ತನ್ನ ಇಬ್ಬರು ಮಕ್ಕಳು ಅವರ ಹೆಂಡತಿಯರು ಹಾಗೂ ಮೊಮ್ಮಕ್ಕಳು ಜೊತೆಗೆ ವಾಸಿಸುತ್ತಿದ್ದರು.

ಒಂದು ದಿನ ಸುಂದರನ್ ರವರ ಇಬ್ಬರೂ ಸೊಸೆಯರು ಕೂಡ ಗುಟ್ಟಾಗಿ ರೂಮಿನಲ್ಲಿ ಕೂತುಕೊಂಡು ಮಾತನಾಡುತ್ತಿರುತ್ತಾರೆ. ನಿಮಗೆ ಹೇಳೋದನ್ನು ಮರೆತುಬಿಟ್ಟಿದ್ದೇವೆ ಸುಂದರನ್ ರವರ ಬಳಿ ಅವರದೇ ಆದಂತಹ ಸ್ವಂತ ದಿನಸಿ ಅಂಗಡಿ ಕೂಡ ಇತ್ತು. ಹೆಂಡತಿಯ ಮರಣದ ವಿಚಾರದಿಂದಾಗಿ ಅವರು ಬೇಸರದಲ್ಲಿದ್ದ ಕಾರಣ ಅಂಗಡಿಯತ್ತ ತಲೆ ಕೂಡ ಹಾಕಿರಲಿಲ್ಲ. ಆಗ ಅವನ ಸೊಸೆಯರು ಇಬ್ಬರೂ ಸೇರಿಕೊಂಡು ಅತ್ತೆ ಹೋದನಂತರ ಮಾವನನ್ನು ಸಾಕುವುದು ತುಂಬಾ ಟಾ’ರ್ಚರ್ ಆಗಿಬಿಟ್ಟಿದೆ. ಅವರನ್ನು ಗಂಡಂದಿರ ಬಳಿ ಹೇಳಿ ವೃದ್ಧಾಶ್ರಮಕ್ಕೆ ಸೇರಿಸೋಣ. ಅಂಗಡಿಯನ್ನು ನಾವು ನಡೆಸಿಕೊಂಡು ಹೋಗೋಣ. ಕೆಳಗಿನ ಮಹಡಿಯಲ್ಲಿ ನಾವಿದ್ದರೆ ಮೇಲಿನ ಮಹಡಿಯಲ್ಲಿ ನೀವು ಇರಿ ಎಂಬುದಾಗಿ ಕಿರಿಯ ಹಾಗೂ ಹಿರಿಯ ಸೊಸೆ ಇಬ್ಬರೂ ಕೂಡ ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲ ವುದನ್ನು ಕೂಡ ಸುಂದರನ್ ಮರೆಯಲ್ಲಿ ನಿಂತುಕೊಂಡು ಕೇಳಿಸಿಕೊಳ್ಳುತ್ತಲೇ ಇದ್ದರು

ಗಂಡಂದಿರನ್ನು ಹೇಗಾದರೂ ಮಾಡಿ ನಾವೇ ಒಪ್ಪಿಸೋಣ ಎಂಬುದಾಗಿ ಇಬ್ಬರು ಸೊಸೆಯಂದಿರು ಮಾತನಾಡಿಕೊಳ್ಳುವುದನ್ನು ಸುಂದರನ್ ಕೇಳಿಸಿಕೊಳ್ಳುತ್ತಾರೆ. ನನ್ನ ಹೆಂಡತಿ ಇರುವಾಗ ಎಲ್ಲವೂ ಸರಿಯಿತ್ತು ಅವಳು ಹೋದ ಆರು ತಿಂಗಳಿಗೆ ನನ್ನನ್ನು ಮನೆಯಿಂದ ಹೊರ ಹೋಗುವ ಉಪಾಯ ಮಾಡುತ್ತಿದ್ದಾರೆ ಎಂಬುದಾಗಿ ದುಃಖ ಪಡುತ್ತಾರೆ. ಕೆಲವೇ ದಿನಗಳಲ್ಲಿ ಹಿರಿಯಮಗ ತಂದೆಯ ಬಳಿ ಬಂದು ಬೆವರುತ್ತದೆ ಅಪ್ಪಾ ನಿಮ್ಮ ಬಳಿ ಒಂದು ಮಾತನಾಡಬೇಕು ಎಂಬುದಾಗಿ ಹೇಳುತ್ತಾನೆ.

ಆಗ ಇದು ಸೊಸೆಯರು ಮಾತನಾಡಿಕೊಳ್ಳುತ್ತಿದ್ದ ವಿಚಾರವೇ ಎನ್ನುವುದನ್ನು ಕಂಡುಹಿಡಿಯಲು ಸುಂದರನ್ ಗೆ ಹೆಚ್ಚು ವರ್ಷ ಬೇಕಾಗಲಿಲ್ಲ. ಹಿರಿಯ ಮಗ ತಂದೆಯ ಬಳಿ ಈ ವಿಚಾರದ ಕುರಿತಂತೆ ಹೇಳಲು ಬೇಡವೋ ಎನ್ನುವ ಗೊಂದಲದಲ್ಲಿ ಗಂಟಲು ಒಣಗಿದ ವರಂತೆ ಹೇಳಲು ಪ್ರಾರಂಭಿಸಿದ. ಆತ ಹೇಳಲು ತಿಣುಕಾಡುತ್ತಿರುವುದನ್ನು ನೋಡಿ ನೀನು ಏನು ಹೇಳಬೇಕು ಅಂತ ಇದ್ದೀಯ ಆದರೆ ಹೇಳಲು ಸಾಧ್ಯವಾಗುತ್ತಿಲ್ಲ ಆದರೆ ನಾನೊಂದು ವಿಚಾರವನ್ನು ಹೇಳಬೇಕು ಮಗನೇ ಎಂಬುದಾಗಿ ಹೇಳಲು ಆರಂಭಿಸುತ್ತಾರೆ.

ಹೌದು ಮಾತನಾಡಲು ಆರಂಭಿಸಿದ ಸುಂದರನ್ ನಿಮಗೂ ಬೇರೆ ಜೀವನ ನಡೆಸಬೇಕೆನ್ನುವ ಆಸೆ ಇರುತ್ತದೆ ಒಂದು ಕೆಲಸ ಮಾಡಿ ನಾನು ಕಟ್ಟಿಸಿರುವ ಈ ಮನೆಯಲ್ಲಿ ನಾನೇ ಇದ್ದುಬಿಡುತ್ತೇನೆ ಹೇಗೋ ಜೀವನ ನಡೆಸುವುದಕ್ಕೆ ಅಂಗಡಿ ಇದೆ. ನೀವು ಬಾಡಿಗೆ ಮನೆ ಮಾಡಿಕೊಂಡು ಹೋಗಿಬಿಡಿ ಎಂಬುದಾಗಿ ಮಗನಿಗೆ ಹೇಳುತ್ತಾರೆ. ಇದನ್ನು ಕೇಳಿ ಇಬ್ಬರು ಮಕ್ಕಳು ಹಾಗೂ ಸೊಸೆಯರು ದಂ’ಗಾಗಿ ಬಿಡುತ್ತಾರೆ. ತಂದೆಯನ್ನು ಹೊರಹಾಕಬೇಕು ಎಂದು ಎಂದುಕೊಂಡಿದ್ದ ಮಕ್ಕಳಿಗೂ ಕೂಡ ತಂದೆಯೇ ಹೊರ ಹೋಗಲು ಹೇಳಿದ್ದು ತಲೆಯಮೇಲೆ ಆಕಾಶ ಬಿದ್ದಂತಾಗುತ್ತದೆ.

ಆಗ ಸೊಸೆಯರು ಏನು ಮಾವ ಹೀಗೆ ಹೇಳುತ್ತೀರಿ ಸಮಾಜ ಏನ್ ಅಂದುಕೊಳ್ಳುತ್ತದೆ ಎಂಬುದಾಗಿ ಹೇಳುತ್ತಾಳೆ. ಹಾಗಾಗಿ ಸುಂದರನ್ ಸಮಾಜಕ್ಕೆ ಏನಮ್ಮ ಏನೇ ಮಾಡಿದರೂ ಕೂಡ ಕೆಟ್ಟದ್ದನ್ನು ಹೇಳುತ್ತದೆ. 35 ವರ್ಷಗಳಿಂದ ನಾನು ನನ್ನ ಹೆಂಡತಿ ಬಾಳಿ ಬಳಸಿದಂತಹ ಮನೆ ಇದು ನಾನು ಇಲ್ಲಿಯೇ ಬದುಕುತ್ತೇನೆ. ಮೇಲಿನ ಮಹಡಿಯನ್ನು ಬಾಡಿಗೆ ನೀಡುತ್ತೇನೆ ಕೆಲಸಕ್ಕೆ ಒಂದು ಕೆಲಸಗಾರನನ್ನು ಇಟ್ಟುಕೊಳ್ಳುತ್ತೇನೆ ಪೆನ್ಷನ್ ಹಣ ಕೂಡ ನನಗೆ ಬರುತ್ತದೆ. ನೀವು ನಿಮ್ಮ ಜೀವನ ನೋಡಿಕೊಳ್ಳಿ ಎನ್ನುವುದಾಗಿ ಹೇಳಿ ಹೋಗುತ್ತಾರೆ.

ಮಾವನನ್ನೇ ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಸೇರಿಸಿ ಆಸ್ತಿಯನ್ನು ಪಡೆದುಕೊಳ್ಳುವಂತಹ ಆಲೋಚನೆ ಮಾಡಿದವರಿಗೆ ಇಂತಹ ಶಾ’ಕ್ ಸಿಗುತ್ತದೆ ಎಂಬುದಾಗಿ ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಅದಕ್ಕೆ ಅತಿ ಆಸೆ ಗತಿಗೇಡು ಎನ್ನುವ ಗಾದೆ ಮಾತನ್ನು ಹಿರಿಯರು ಬಹಳ ಹಿಂದೆಯೇ ಹೇಳಿರುವುದು. ಈ ನೈಜ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.