ಕನ್ನಡದ ಮೂಲಕ ಪಾದಾರ್ಪಣೆ ಮಾಡಿ ಬೇರೆ ಭಾಷೆಗಳಲ್ಲಿ ಸದ್ದು ಮಾಡಿದ ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??

1,382

ನಮಸ್ಕಾರ ಸ್ನೇಹಿತರೇ ನಿಮಗೆ ತಿಳಿದಿರಬಹುದು ಭಾರತ ಚಿತ್ರರಂಗದಲ್ಲಿ ಇಂದು ಮಿಂಚಿ ಮರೆಯುತ್ತಿರುವ ಹಾಗೂ ಈಗಾಗಲೆ ಮಿಂಚಿ ಮೆರೆದಿರುವ ಹಲವಾರು ಜನಪ್ರಿಯ ನಟಿಯರು ಕನ್ನಡ ಚಿತ್ರರಂಗದಿಂದಲೇ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿದ್ದಾರೆ. ಇಂದಿನ ಲೇಖನಿಯಲ್ಲಿ ಇದೇ ವಿಚಾರದ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ತಿಳಿಸಲು ಹೊರಟಿದ್ದೇವೆ. ಲೇಖನಿಯ ಸಾಲಿನಲ್ಲಿ ಯಾವೆಲ್ಲ ನಟಿಯರು ಬರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ದೀಪಿಕಾ ಪಡುಕೋಣೆ; ಕರ್ನಾಟಕ ಮೂಲದ ನಟಿ ದೀಪಿಕಾ ಪಡುಕೋಣೆ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ. ಆದರೆ ಇವರು ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿದ್ದು 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರವರ ಐಶ್ವರ್ಯ ಚಿತ್ರದ ಮೂಲಕ. ಆದರೆ ಇವರು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಶಾರುಖ್ ಖಾನ್ ರವರ ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ.

ನಿತ್ಯ ಮೆನನ್; ಈಗಾಗಲೇ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ನಲ್ಲಿ ಕೂಡ ತಮ್ಮ ನಟನೆಯ ಮೂಲಕ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ನಟಿ ನಿತ್ಯ ಮೆನನ್ ರವರು ಮೂಲತಃ ಬೆಂಗಳೂರಿಗರೇ ಆಗಿದ್ದಾರೆ. ಇನ್ನು ಇವರು 7 ಓ ಕ್ಲಾಕ್ ನಮ್ಮ ಕನ್ನಡ ಚಿತ್ರರಂಗದ ಮೂಲಕವೇ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿರುತ್ತಾರೆ.

ರಾಕುಲ್ ಪ್ರೀತ್ ಸಿಂಗ್; ರಾಕುಲ್ ಪ್ರೀತ್ ಸಿಂಗ್ ಅವರ ಹೆಸರನ್ನು ಕೇಳಿದರೆ ನಿಮಗೆ ಮೊದಲಿಗೆ ದಕ್ಷಿಣ ಭಾರತ ಚಿತ್ರರಂಗದ ಅಂದರೆ ತೆಲುಗು ತಮಿಳು ಸಿನಿಮಾಗಳಲ್ಲಿ ಇವರನ್ನು ನೋಡಿದ ನೆನಪಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಕೂಡಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ ಇವರು ಕನ್ನಡದ ಗಿಲ್ಲಿ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಶ್ರೀನಿಧಿ ಶೆಟ್ಟಿ; ಈಗಾಗಲೇ ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ಇವರು ನಟಿಸುತ್ತಿದ್ದಾರೆ. ಆದರೆ ಇವರು ಕೂಡ ಕನ್ನಡದ ಹೆಮ್ಮೆಯ ಸಿನಿಮಾ ವಾಗಿರುವ ಕೆಜಿಎಫ್ ಚಾಪ್ಟರ್ 1ರ ಮೂಲಕ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ; ರಶ್ಮಿಕ ಮಂದಣ್ಣ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ತಮಿಳು ತೆಲುಗು ಹಿಂದಿ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿಯರ ಸಾಲಿನಲ್ಲಿ ಇವರು ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ. 26ನೇ ವಯಸ್ಸಿಗೆ ನ್ಯಾಷನಲ್ ಕೃಷ್ ಹಾಗೂ ಅತ್ಯಂತ ಹೆಚ್ಚು ಜನಪ್ರಿಯ ಹಾಗೂ ಬಹುಬೇಡಿಕೆಯ ನಟಿಯರಲ್ಲಿ ತಮ್ಮ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. ಇವರು ಕೂಡ ಕನ್ನಡ ಚಿತ್ರವಾಗಿರುವ ಕಿರಿಕ್ ಪಾರ್ಟಿ ಮೂಲಕವೇ ತಮ್ಮ ಸಿನಿಮಾ ಜರ್ನಿಯಲ್ಲಿ ಪ್ರಾರಂಭಿಸಿದ್ದು.

ಪ್ರಣಿತ ಸುಭಾಷ್; ಪ್ರಮುಖವಾಗಿ ಪ್ರಣಿತ ಸುಭಾಷ್ ಅವರು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇವರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಪೊರ್ಕಿ ಸಿನಿಮಾದ ಮೂಲಕ ಚಿತ್ರಲೋಕಕ್ಕೆ ಕಾಲಿಡುತ್ತಾರೆ. ತಮಿಳು ತೆಲುಗು ಹಿಂದಿ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಸಮಾಜಸೇವೆಯಲ್ಲಿ ಕೂಡ ಇವರ ಕೊಡುಗೆಯನ್ನು ನಾವು ಸ್ಮರಿಸಿಕೊಳ್ಳಬಹುದಾಗಿದೆ.

ಜಯಲಲಿತಾ; ತಮಿಳು ಚಿತ್ರರಂಗದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಅಧ್ಯಾಯವನ್ನು ಬರೆದಿದ್ದ ಜಯಲಲಿತಾ ರವರು ಕೂಡ ಚಿತ್ರ ಜಗತ್ತಿಗೆ ಪದಾರ್ಪಣೆ ಮಾಡಿದ್ದು ಕನ್ನಡದ ಚಿನ್ನದ ಗೊಂಬೆ ಚಿತ್ರದ ಮೂಲಕ.

ಸೌಂದರ್ಯ; ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿ ಮೆರೆದಿದ್ದ ಸೌಂದರ್ಯ ರವರು ಕೂಡ ಗಂಧರ್ವ ಎನ್ನುವ ಕನ್ನಡ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜಗತ್ತಿಗೆ ಪರಿಚಿತರಾಗಿದ್ದರು. ಸೌಂದರ್ಯ ರವರ ಕುರಿತಂತೆ ಪರಿಚಯ ಹೇಳುವ ಅಗತ್ಯವೇ ಇಲ್ಲ ಅವರ ಸಿನಿಮಾ ಅವರ ನಿಜವಾದ ಗುರುತು ಎಂದರೆ ತಪ್ಪಾಗಲಾರದು.

ರೇಖಾ ವೇದವ್ಯಾಸ್; ನಟಿ ರೇಖಾ ರವರು ಕೂಡ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಅವುಗಳಲ್ಲಿ ಅವರ ಐಕಾನಿಕ್ ಸಿನಿಮಾ ಎಂದರೆ ಅದು ಕಿಚ್ಚ ಸುದೀಪ್ ನಟನೆಯ ಹುಚ್ಚ ಸಿನಿಮಾ. ಆದರೆ ಅವರು ಪಾದಾರ್ಪಣೆ ಮಾಡಿದ್ದು ಚಿತ್ರ ಎನ್ನುವ ಕನ್ನಡ ಸಿನಿಮಾ ಮೂಲಕ.

ಛಾಯಾಸಿಂಗ್; ಒಂದು ಕಾಲದಲ್ಲಿ ಬಹುಬೇಡಿಕೆ ನಟಿಯಾಗಿದ್ದ ಛಾಯಾ ಸಿಂಗ್ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಮುನ್ನುಡಿ ಅನ್ನುವ ಸಿನಿಮಾದ ಮೂಲಕ ಪಾದರ್ಪಣೆ ಮಾಡಿದ್ದರು. ಇತ್ತೀಚಿಗೆ ಕಾಣಿಸಿಕೊಂಡಿರುವ ಕೊನೆಯ ಕನ್ನಡ ಸಿನಿಮಾ ವೆಂದರೆ ಅದು ಮುಫ್ತಿ.

ರೇಖಾ; ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ರೇಖಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 180 ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಿನ ಕಾಲದಲ್ಲಿ ರಾಜಕುಮಾರ್ ರವರ ಆಪರೇಷನ್ ಜಾಕ್ ಪಾಟ್ ಸಿಐಡಿ 999 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೇ ಆ ಟಾಪ್ ನಾಯಕ ನಟಿಯರು ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಪರಿಚಿತರಾದವರು. ಇವರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.