ಮುಗಿಯಿತು ನಿಮ್ಮ ಎಲ್ಲಾ ಕಷ್ಟಗಳು, ಈ ವಾರದಿಂದಲೇ ನಿಮ್ಮ ಅದೃಷ್ಟವೇ ಬದಲು, ಈ ರಾಶಿಗಳಿಗೆ ಗುರುಬಲ ಆರಂಭ, ಯಾರ್ಯಾರಿಗೆ ಗೊತ್ತೇ??

1,204

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸಿರುತ್ತದೆ. ಅದರಲ್ಲಿ ಕೂಡ ಏಪ್ರಿಲ್ ತಿಂಗಳಿನಲ್ಲಿ ಹಲವಾರು ಗ್ರಹಗಳು ತಮ್ಮ ರಾಶಿಯನ್ನು ಬದಲಿಸಲಿವೆ. ಈ ಸಂದರ್ಭದಲ್ಲಿ ಗುರುಗ್ರಹವು ತನ್ನದೇ ಆದಂತಹ ಮೀನ ರಾಶಿಯನ್ನು ಹನ್ನೆರಡು ವರ್ಷಗಳ ನಂತರ ಇದೇ ಏಪ್ರಿಲ್ 13ರಂದು ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ 6 ರಾಶಿಯವರ ಮೇಲೆ ಇದು ಪರಿಣಾಮ ಬೀರಲಿದೆ. ಆ ರಾಶಿಗಳು ಯಾವೆಲ್ಲ ಹಾಗೂ ಏನೆಲ್ಲ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಗುರು ಗ್ರಹವು 12ನೇ ಮನೆಯಲ್ಲಿ ಸಂಕ್ರಮಣ ಗೊಳ್ಳುವ ಕಾರಣದಿಂದಾಗಿ ಮೇಷ ರಾಶಿಯವರಿಗೆ ವಿದೇಶಿ ಪ್ರವಾಸವನ್ನು ಮಾಡುವಂತಹ ಸೌಭಾಗ್ಯ ಒದಗಿ ಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಂತಹ ಆಸಕ್ತಿ ಹೆಚ್ಚಾಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಆರ್ಥಿಕ ಲಾಭ ಹೆಚ್ಚಾಗಲಿದ್ದು ಸಂಸಾರದಲ್ಲಿ ಕೂಡ ಸುಖ-ಶಾಂತಿ ನೆಲೆಸಲಿದೆ.

ವೃಷಭ ರಾಶಿ; ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಹಲವಾರು ಮೂಲಗಳಿಂದ ಆರ್ಥಿಕ ಆದಾಯ ಹರಿದು ಬರಲಿದ್ದು ಹೂಡಿಕೆ ಮಾಡಲು ಒಳ್ಳೆಯ ಸಮಯವಾಗಿದೆ. ಹೂಡಿಕೆಯಿಂದ ಒಳ್ಳೆಯ ಲಾಭವನ್ನು ಕೂಡ ಪಡೆದುಕೊಳ್ಳಲಿದ್ದೀರಿ. ರಹಸ್ಯ ಮೂಲಗಳಿಂದಲೂ ಕೂಡ ವೃಷಭ ರಾಶಿಯವರಿಗೆ ಹಣದ ಹರಿವು ಯಥೇಚ್ಛವಾಗಿ ಹರಿದುಬರಲಿದೆ. ಕುಟುಂಬದಲ್ಲಿ ಸಮರಸ ಎನ್ನುವುದು ಎದ್ದು ಕಾಣಲಿದೆ. ಒಟ್ಟಾರೆಯಾಗಿ ಗುರುಗ್ರಹದ ಪರಿಚಲನೆ ಯಿಂದಾಗಿ ನಿಮಗೆ ಶುಭವಾಗಲಿದೆ.

ಮಿಥುನ ರಾಶಿ; ಒಂದು ವೇಳೆ ಮಿಥುನ ರಾಶಿಯವರು ಹಲವಾರು ವರ್ಷಗಳಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ ಅವರ ಮನಸ್ಸಿಗೆ ಇಷ್ಟ ಆಗುವಂತಹ ಉದ್ಯೋಗ ಅವರಿಗೆ ದೊರಕಲಿದೆ. ಈ ಕಾಲ ಮಿಥುನ ರಾಶಿಯವರಿಗೆ ಉತ್ತಮ ಉದ್ಯೋಗವನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ಕೇವಲ ಉದ್ಯೋಗ ಮಾತ್ರವಲ್ಲದೆ ಉದ್ಯೋಗ ಸ್ಥಳದಲ್ಲಿ ಮಿಥುನ ರಾಶಿಯವರ ಗೌರವ ಕೂಡ ಹೆಚ್ಚಾಗಲಿದೆ. ಇದಕ್ಕಾಗಿ ಅವರು ಕೊಂಚ ಮಟ್ಟಿಗೆ ಪರಿಶ್ರಮವನ್ನು ಪಡಬೇಕಾಗುತ್ತದೆ.

ಕಟಕ ರಾಶಿ; ಕಟಕ ರಾಶಿಯವರಿಗೆ ಈ ಕಾಲ ಪ್ರಶಸ್ತವಾಗಿದೆ. ಉದ್ಯೋಗದಲ್ಲಿ ಸಂಭಾವನೆಯ ಹೆಚ್ಚಳವು ಕೂಡ ನಡೆಯಲಿದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಈ ಸಮಯ ವ್ಯಾಪಾರ ಮಾಡುವವರಿಗೆ ಸರಿಯಾದ ಸಮಯವಾಗಿದ್ದು ಉತ್ತಮ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ವ್ಯಾಪಾರ-ವ್ಯವಹಾರದಲ್ಲಿ ಕಟಕರಾಶಿಯವರು ಎಷ್ಟು ಮಟ್ಟದ ಲಾಭವನ್ನು ಪಡೆಯಲಿದ್ದಾರೆ ಎಂದರೆ ಕಾರಣದಿಂದಾಗಿ ದೊಡ್ಡ ಮೊತ್ತದ ಆಸ್ತಿಯನ್ನು ಖರೀದಿಸಬಹುದಾಗಿದೆ.

ಸಿಂಹ ರಾಶಿ; ಗುರುವಿನ ರಾಶಿ ಸ್ಥಾನ ಪಲ್ಲಟದಿಂದಾಗಿ ಸಿಂಹರಾಶಿಯವರಿಗೆ ಆರ್ಥಿಕವಾಗಿ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಉನ್ನತಿಯನ್ನು ಸಾಧಿಸಲು ನಿಮಗೆ ಹಲವಾರು ಅವಕಾಶಗಳು ಸಿಗಲಿವೆ. ಬೇರೆ ಊರುಗಳಿಗೆ ಸಂಚಾರ ಮಾಡುವಾಗ ಹಾಗೂ ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಅಡ್ಡಿ-ಆತಂಕಗಳು ಬರಬಹುದಾದಂತಹ ಸಾಧ್ಯತೆ ಇದ್ದು ಇದರ ಕುರಿತಂತೆ ನೀವು ಎಚ್ಚರವಾಗಿರಬೇಕು. ಇವುಗಳನ್ನು ಹೊರತುಪಡಿಸಿದರೆ ನಿಮ್ಮ ಜೀವನದಲ್ಲಿ ಸದ್ಯದ ಮಟ್ಟಿಗೆ ಯಾವುದೇ ಚಿಂತೆಗಳಿಲ್ಲ.

ಕನ್ಯಾ ರಾಶಿ; ಹಲವಾರು ಸಮಯಗಳಿಂದ ನಿಮ್ಮನ್ನು ಬಾಧಿಸುತ್ತಿರುವ ಚಿಂತೆಗಳು ದೂರಾಗಿ ಕುಟುಂಬದೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಲಿದ್ದೀರಿ. ಇದುವರೆಗೂ ಮದುವೆ ಆಗದೇ ಇರುವಂತಹವರಿಗೆ ಮದುವೆ ಆಗುವಂತಹ ಯೋಗ ಅತಿಶೀಘ್ರದಲ್ಲಿ ಕೂಡಿಬರಲಿದೆ. ಮದುವೆ ಆಗಿರುವವರ ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಗಳು ನೆಲೆಸಲಿವೆ. ಒಂದು ವೇಳೆ ನೀವು ಪಾರ್ಟ್ನರ್ಶಿಪ್ ವ್ಯಾಪಾರ ವ್ಯವಹಾರವನ್ನು ಮಾಡುತ್ತಿದ್ದರೆ ಖಂಡಿತವಾಗಿ ಲಾಭವನ್ನು ಅನುಭವಿಸಲಿದ್ದೀರಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದಾರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳುವ ಮೂಲಕ ಶೇರ್ ಮಾಡಿಕೊಳ್ಳಿ.