ಆರ್ಸಿಬಿ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ ಮೇಲೆ ಖಡಕ್ ಆಗಿ ಮಾತನಾಡಿದ ದಿನೇಶ್ ಕಾರ್ತಿಕ್ ಹೇಳಿದ್ದೇನು ಗೊತ್ತೇ???
ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2022 ಹಲವಾರು ರೋಚಕ ಕಥೆಗಳಿಗೆ ಸಾಕ್ಷಿಯಾಗುತ್ತಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ನಿನ್ನೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದೆ. ಹೌದು ಡುಪ್ಲೆಸಿಸ್ ನಾಯಕತ್ವದಲ್ಲಿ ಹೊಸ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಖಂಡಿತವಾಗಿ ಕಪ್ ಗೆಲ್ಲಲೇ ಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡಂತಿದೆ.
ಅದರಲ್ಲೂ ಪ್ರಮುಖವಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿರುವ ಆಟಗಾರ ದಿನೇಶ್ ಕಾರ್ತಿಕ್ ರವರು ತಂಡಕ್ಕೆ ಫಿನಿಶರ್ ನ ಜವಾಬ್ದಾರಿಯನ್ನು ನಿರ್ವಹಿಸಿ ಕೊಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಕೂಡ ಕೊನೆಗೆ ಬಂದು ಮ್ಯಾಚನ್ನು ಮುಗಿಸಿ ಕೊಟ್ಟಿದ್ದರು. ಇನ್ನು ನಿನ್ನೆಯ ರಾಜಸ್ತಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕೊನೆಗೆ 23 ಎಸೆತಗಳಲ್ಲಿ 44 ರನ್ನುಗಳನ್ನು ದಿನೇಶ್ ಕಾರ್ತಿಕ್ ರವರು ತಮ್ಮ ಬ್ಯಾಟಿನಿಂದ ಹರಿಸಿದ್ದರು. ಈ ಮೂಲಕ ದಿನೇಶ್ ಕಾರ್ತಿಕ್ ರವರು ಉಳಿದವರಿಗೆ ವಾ’ರ್ನಿಂಗ್ ನೀಡಿದ್ದಾರೆ ಎಂದು ಕೇಳಿ ಬಂದಿದೆ. ಹಾಗಿದ್ದರೆ ಮ್ಯಾಚ್ ಮುಗಿದ ನಂತರ ದಿನೇಶ್ ಕಾರ್ತಿಕ್ ರವರು ನೀಡಿದ ವಾರ್ನಿಂ’ಗ್ ಆದರೂ ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಐಪಿಎಲ್ ಆರಂಭಕ್ಕೂ ಮುನ್ನ ದಿನೇಶ್ ಕಾರ್ತಿಕ್ ರವರ ಕರಿಯರ್ ಮುಗಿಯಿತು ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ದಿನೇಶ್ ಕಾರ್ತಿಕ್ ರವರು ಎಲ್ಲೂ ಕೂಡ ಈ ಕುರಿತಂತೆ ಮಾತನಾಡಲು ಹೋಗಿರಲಿಲ್ಲ. ರಾಜಸ್ತಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ ನಂತರ ಮಾತನಾಡಿದ ದಿನೇಶ್ ಕಾರ್ತಿಕ್ ನನ್ನಲ್ಲಿ ಇನ್ನೂ ಕ್ರಿಕೆಟ್ ಇದೆ ಆದರೆ ಅದಕ್ಕೆ ಉತ್ತಮ ವೇದಿಕೆ ಬೇಕಾಗಿತ್ತು ಈಗಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅದು ಸಿಕ್ಕಿದೆ ಎಂಬುದಾಗಿ ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಇಷ್ಟೊಂದು ಚೆನ್ನಾಗಿ ಪ್ರದೇಶದ ನೀಡುತ್ತಿದ್ದೇನೆ ಎಂದರೆ ನನ್ನ ಟ್ರೈನಿಂಗ್ ಕೋಚ್ ಗೆ ನಾನು ಧನ್ಯವಾದಗಳನ್ನು ಅರ್ಪಿಸಬೇಕು. ನನಗೆ ಹೇಗೆ ರನ್ನುಗಳನ್ನು ಬಾರಿಸಬೇಕು ಯಾವ ಸಂದರ್ಭದಲ್ಲಿ ಅಗ್ರೆಸ್ಸಿವ್ ಮಾಡಬೇಕು ಎನ್ನುವುದು ಗೊತ್ತಿದೆ. ಗುರಿ ಎಷ್ಟೇ ದೊಡ್ಡದಾಗಿರಲಿ ನಾನು ಕಾಮ್ ಆಗಿ ಅದನ್ನು ಪೂರೈಸುತ್ತೇನೆ ಎಂಬುದಾಗಿ ಸ್ವೀಟ್ ವಾ’ರ್ನಿಂಗ್ ನೀಡಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮ್ಯಾಚ್ ವಿನ್ನರ್ ಆಗಿ ಪರಿಣಮಿಸಿರುವುದು ನಿಜಕ್ಕೂ ಸಂತೋಷದ ವಿಚಾರ.