ಕೊನೆಗೂ ಎಲ್ಲಾ ಕಷ್ಟಗಳನ್ನು ಮುಗಿಯಿತು, ಯುಗಾದಿ ದಿನದಿಂದ ಹಲವಾರು ರಾಶಿಗಳಿಗೆ ಅದೃಷ್ಟ ಶುರು, ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಗೊತ್ತೇ??

137

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ರಾಶಿಚಕ್ರ ಹಾಗೂ ನಕ್ಷತ್ರಗಳ ಆಧಾರದ ಕುರಿತಂತೆ ಒಬ್ಬ ಮನುಷ್ಯನ ಜೀವನವನ್ನೇ ನಿರ್ಧಾರ ಮಾಡುವಂತಹ ವಿಚಾರಗಳು ಕೂಡ ದೊರಕುತ್ತವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯುಗಾದಿ ಹಬ್ಬ ನಮ್ಮ ಹಿಂದೂ ಧರ್ಮದಲ್ಲಿ ಹೊಸವರ್ಷದ ಆಚರಣೆ. ಈ ಸಂದರ್ಭದಲ್ಲಿ ಹಲವಾರು ಗ್ರಹಗಳ ಗೋಚರವಾಗುತ್ತದೆ.

ಕೆಲವೊಮ್ಮೆ ಕೆಲವು ರಾಶಿಯವರಿಗೆ ಶುಭ ಉಂಟಾದರೆ ಇನ್ನು ಕೆಲವು ರಾಶಿಯವರಿಗೆ ಅಶುಭ ಉಂಟಾಗುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ ಗೋಚರ ಫಲ ಎಷ್ಟು ಮಟ್ಟಕ್ಕೆ ಸಿಗುತ್ತದೆ ಎನ್ನುವುದನ್ನು ನೋಡೋಣ ಬನ್ನಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ರಾಶಿಗೆ ಯಾವ ಪರಿಣಾಮ ಇದೆ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ಮೊದಲನೇದಾಗಿ ಮೇಷ ರಾಶಿಯ ಕುರಿತಂತೆ ಹೇಳುವುದಾದರೆ ಗುರು ಹಾಗೂ ಶನಿ ಗ್ರಹಗಳ ಫಲ ಇರುವುದಿಲ್ಲ. ಮಾರಕ ಸಪ್ತಾಹದಲ್ಲಿ ಕೇತು ಜೊತೆಗೆ ರಾಹು ಕೂಡ ಇರುವುದರಿಂದಾಗಿ ಕೇವಲ 10% ಮಾತ್ರ ಒಳ್ಳೆಯ ಫಲದ ನಿರೀಕ್ಷೆ ಮಾಡಬಹುದಾಗಿದೆ. ಇನ್ನು ವೃಷಭ ರಾಶಿಯವರಿಗೆ ನೋಡುವುದಾದರೆ ಗುರು ಹಾಗೂ ಶನಿಯ ಜೊತೆಗೆ ಕೇತುವಿನ ಫಲ ಕೂಡ ಸಿಗಲಿದೆ. ಹೀಗಾಗಿ 85% ದಷ್ಟು ಗೋಚಾರ ಫಲ ಸಿಗಲಿದೆ ಎಂಬುದಾಗಿ ತಿಳಿದುಬಂದಿದೆ. ಅಂದರೆ ವೃಷಭ ರಾಶಿಯವರಿಗೆ ಶುಭಕಾಲ ಒದಗಿಬಂದಿದೆ ಎಂಬುದಾಗಿ ಅರ್ಥ.

ಮಿಥುನ ರಾಶಿಯವರ ಯೋಗದಲ್ಲಿ ಶನಿಯ ಬಲ ಇರುವುದಿಲ್ಲ ಐದನೇ ಮನೆಯಲ್ಲಿ ರಾಹು ಕೇತು ಇರುವ ಕಾರಣದಿಂದಾಗಿ 60% ದಷ್ಟು ಗೋಚರ ಫಲ ಸಿಗುತ್ತದೆ. ಕರ್ಕಾಟಕ ರಾಶಿಯವರಿಗೆ ಶನಿ ಹಾಗೂ ರಾಹು-ಕೇತು ಎಲ್ಲರೂ ಕೂಡ ಸರಿಯಾದ ಮನೆಯಲ್ಲಿ ಇಲ್ಲ ಹೀಗಾಗಿ ಅಷ್ಟೊಂದು ಸಂತೋಷದಾಯಕ ವಿಚಾರಗಳು ಕೂಡ ನಡೆಯುವ ಸಾಧ್ಯತೆ ತೀರಾ ಕಡಿಮೆ.

ಕನ್ಯಾರಾಶಿಯವರಿಗೆ 8ನೇ ಮನೆಯಲ್ಲಿ ರಾಹು ಇದು ಕೇತುವಿನ ಬೆಂಬಲ ಇರುವುದಿಲ್ಲ ಹೀಗಾಗಿ 35% ದಷ್ಟು ಗೋಚರ ಫಲ ಮಾತ್ರ ಸಿಗಲಿದೆ. ಇನ್ನು ತುಲಾ ರಾಶಿಯವರಿಗೆ ಶನಿ ಸಂಚಾರ ಇರುವ ಕಾರಣದಿಂದಾಗಿ ಕೇವಲ 10% ಮಾತ್ರ ಸಂತೋಷ ನೆಮ್ಮದಿ ಇರುತ್ತದೆ. ರಾಶಿಯಲ್ಲಿ ರಾಹು ಕೇತುವಿನ ಸಂಚಾರ ಕೂಡ ಇರುವ ಕಾರಣದಿಂದಾಗಿ ಇದು ಸಂಭವಿಸುತ್ತದೆ.

ವೃಶ್ಚಿಕ ರಾಶಿಯ ಪರಾಕ್ರಮದ ಭಾಗದಲ್ಲಿ ಶನಿಗ್ರಹವಿದೆ. ಶನಿ ಹಾಗೂ ಗುರುವಿನ ಬಲ ವೃಶ್ಚಿಕ ರಾಶಿಯವರ ಮೇಲೆ ಇರುವ ಕಾರಣದಿಂದಾಗಿ 60% ಗೋಚರ ಫಲ ಸಿಗುತ್ತದೆ. ದ್ವಿತೀಯ ಮನೆಯಲ್ಲಿ ಶನಿ ಇರುವ ಕಾರಣದಿಂದಾಗಿ ಹಾಗೂ ಸಾಡೇಸಾತ್ ಕೊನೆ ಭಾಗದಲ್ಲಿ ಮುಗಿಯುವ ಕಾಲಕ್ಕೆ ಸನ್ನಿಹಿತವಾಗಿರುವುದರಿಂದಾಗಿ ಧನಸ್ಸು ರಾಶಿಯವರಿಗೆ 35% ಗೋಚರ ಫಲ ಲಭ್ಯವಾಗುತ್ತದೆ.

ಮಕರ ರಾಶಿಯವರಿಗೆ ಸಾಡೆಸಾತಿ ಶನಿ ಮಧ್ಯಮದಲ್ಲಿ ಇರುವ ಕಾರಣದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವಾರು ವಿಚಾರಗಳಲ್ಲಿ ಸಿಲುಕಿಕೊಳ್ಳಲಿದ್ದೀರಿ. ಇವರಿಗೆ ಗುರುವಿನ ದೋಷ ಇಲ್ಲ ಈ ಕಾರಣದಿಂದಾಗಿ 10% ಗೋಚರ ಫಲ ಸಿಗಲಿದೆ. ಶನಿ ಅಧಿಪತಿಯಾಗಿರುವ ಕುಂಭರಾಶಿಯವರಿಗೆ 60% ಗೋಚರ ಫಲ ಸಿಗಲಿದೆ. ಗುರುಗ್ರಹದ ಅನುಗ್ರಹದಿಂದಾಗಿ ಕುಂಭ ರಾಶಿಯವರಿಗೆ ಅನಿರೀಕ್ಷಿತವಾಗಿ ಧನಲಾಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗುರು ಹಾಗೂ ಶನಿ ಇಬ್ಬರೂ ಸೇರಿಕೊಂಡು ಕೊನೆಯ ರಾಶಿಯಾಗಿರುವ ಮೀನರಾಶಿಯಲ್ಲಿ ಲಾಭ ತರಲಿದ್ದಾರೆ. ಹೀಗಾಗಿ 35% ಗೋಚರ ಫಲವನ್ನು ಅನುಭವಿಸಲಿದ್ದಾರೆ. ಕೇತು ಅಷ್ಟಮ ಮನೆಯಲ್ಲಿ ಇರುವ ಕಾರಣದಿಂದಾಗಿ ಹೆಚ್ಚೇನು ಹಾನಿ ಸಂಭವಿಸುವುದಿಲ್ಲ. ಇವುಗಳಲ್ಲಿ ನಿಮ್ಮ ರಾಶಿ ಯಾವುದು ಎನ್ನುವುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.