ಮಹಾಭಾರತದ ಶ್ರೇಷ್ಠ ಜ್ಞಾನಿ, ವಿಧುರನು ಯಾರ ಬಳಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ಹೇಳಿದ್ದಾರೆ ಗೊತ್ತೇ?? ಈ ಕೂಡಲೇ ಬದಲಾಗಿ.
ನಮಸ್ಕಾರ ಸ್ನೇಹಿತರೇ, ನೀವು ಮಹಾಭಾರತದಲ್ಲಿ ಬರುವ ವಿಧುರನ ಪಾತ್ರದ ಬಗ್ಗೆ ಕೇಳಿರಬಹುದು. ಮಹಾ ಮಂತ್ರಿ ವಿಧುರ ಬಹಳ ಬುದ್ಧಿವಂತ, ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದವನು. ಹಾಗಾಗಿ ಈತ ಹೇಳಿದ ಮಾತುಗಳಿಗೆ ಬಹಳ ಪ್ರಾಮುಖ್ಯತೆ ಕೊಡಲಾಗುತ್ತಿತ್ತು. ವಿಧುರ ಹೇಳಿದ ಒಂದೊಂದು ಮಾತುಗಳೂ ಕೂಡ ಮಾನವನ ಜೀವನಕ್ಕೆ ಅಳವಡಿಕೆ ಆಗುವಂಥದ್ದು. ತಾಯಿ ಲಕ್ಷ್ಮಿ ದೇವಿ ಯಾವ ಸ್ವಭಾವವನ್ನು ಹೊಂದಿರುವವರ ಬಳಿ ಬರುವುದಿಲ್ಲ ಎಂಬುದನ್ನು ವಿಧುರ ಹೀಗೆ ಹೇಳಿದ್ದಾನೆ.
ಮೊದಲನೆಯದಾಗಿ ತಾನು ಅತ್ಯಂತ ಒಳ್ಳೆಯವನು ಎಂದುಕೊಳ್ಳುವ ವ್ಯಕ್ತಿಯ ಬಳಿ ಲಕ್ಷ್ಮಿ ಹೋಗುವುದಿಲ್ಲವಂತೆ. ವ್ಯಕ್ತಿ ಒಳ್ಳೆಯವನೇ ಆಗಿರಬಹುದು, ಆದರೆ ತಾನು ಒಳ್ಳೆಯವನು ಎನ್ನುವ ಭಾವ ಆತನಲ್ಲಿದ್ದರೆ ಆತ ಅಹಂಕಾರಿಯಾಗಿದ್ದಾನೆ ಎಂದೇ ಅರ್ಥ. ಅಂಥವರ ಬಳಿ ಲಕ್ಷ್ಮಿ ಹೇಗೆ ತಾನೆ ಇದ್ದಾಳು!
ಇನ್ನು ಅತಿಯಾಗಿ ದಾನ ಧರ್ಮ ಮಾಡುತ್ತಾ ತಾನು ಮಾಡಿದ್ದೇನೆ ಎಂದುಕೊಳ್ಳುವವರ ಜೊತೆ ಲಕ್ಷ್ಮಿ ನಿಲ್ಲುವುದಿಲ್ಲ. ಯಾಕಂದ್ರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುತ್ತಾರೆ. ಅಂಥದ್ರಲ್ಲಿ, ತಾನು ಮಾಡಿದೆ ಎಂದು ಹೇಳಿಕೊಂಡು ಓಡಾಡುವ ಜನರ ಮನಸ್ಸಿನಲ್ಲಿ ದಾನದ ಬಗ್ಗೆ ಒಳ್ಳೆಯ ಭಾವನೆಗಳು ಇರಲು ಸಾಧ್ಯವಿಲ್ಲ. ಹಾಗಾಗಿ ಇಂಥವರನ್ನು ಲಕ್ಷ್ಮಿ ಎಂದಿಗೂ ಮೆಚ್ಚುವುದಿಲ್ಲ ಎನ್ನುತ್ತಾನೆ ವಿಧುರ.

ಹಾಗೆಯೇ ಉಪವಾಸವನ್ನು ಅಧಿಕ ಮಾಡುವವರನ್ನೂ ಲಕ್ಷ್ಮಿ ಮೆಚ್ಚುವುದಿಲ್ಲವಂತೆ. ಹೌದು ಉಪವಾಸವನ್ನು ಮಾಡುತ್ತಾ ಇರುವವರು ತಮ್ಮ ಈ ಕಾರ್ಯದಿಂದ ತಮಗೆ ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ ಎಂದು ಭಾವಿಸುತ್ತಾರೆ. ಇಂಥವರಿಗೆ ಲಕ್ಷ್ಮಿಯ ಅಗತ್ಯವೂ ಇರುವುದಿಲ್ಲ. ಸಮಾಜದ ನಿಯಮಾನುಸಾರ ನಮ್ಮ ಪಾಲಿನ ಕರ್ಮಗಳನ್ನು ಮಾಡಿಕೊಂಡು ಹೋದಾಗ ಮಾತ್ರ ಲಕ್ಷ್ಮಿ ಕ್ರಪಾಕಟಾಕ್ಷ ಇರಲು ಸಾಧ್ಯ.
ತಾನೇ ಬುದ್ಧಿವಂತ ಎಂದುಕೊಳ್ಳುವ ಅಥವಾ ವ್ಯಕ್ತಿ ನಿಜವಾಗಿ ಬುದ್ಧಿವಂತನಾಗಿದ್ದು, ತಾನೇ ಬುದ್ದಿವಂತ್ ಎಂದು ಹೆಮ್ಮೆಯಿಂದ ಬೀಗುತ್ತಿದ್ದರೆ ಅಂತವರಿಗೆ ಲಕ್ಷ್ಮಿ ಒಲಿಯಲು ಸಾಧ್ಯವೇ ಇಲ್ಲ ಎನ್ನುತ್ತಾನೆ ವಿಧುರ. ಹಾಗಾಗಿ ನಮ್ಮಲ್ಲಿರುವ ಅಹಂಕಾರ, ಹಮ್ಮು ಬಿಮ್ಮುಗಳನ್ನು ತೊರೆದು ಕರ್ಮ ಫಲಗಳನ್ನು ದೇವರಿಗೆ ಬಿಟ್ಟು ಕರ್ಮವನ್ನು ಮಾತ್ರ ಮಾಡುತ್ತಾ ಹೋದಲ್ಲಿ ಸದಾ ಕಾಲಕ್ಕೆ ಲಕ್ಷಿ ತಾಯಿ ಜೊತೆಯಾಗಿರುತ್ತಾಳೆ ಎನ್ನುವುದು ವಿಧುರನ ಲೆಕ್ಕಾಚಾರ.