ಹರಾಜಿನಲ್ಲಿ ಮೊದಲನೇ ದಿನ ಮಾರಾಟಾವಾಗದೇ ಉಳಿದಿದ್ದ ಉಮೇಶ್ ಯಾದವ್, ಈಗ ಕೇವಲ 3 ಪಂದ್ಯಗಳಿಂದ ಗಳಿಸಿದ ಹಣ ಎಷ್ಟು ಗೊತ್ತೇ??

128

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ಹಿಂದೆ ಕೆಲವು ತಂಡಗಳಿಗೆ ಆಟವಾಡಿದ್ದ ಆಟಗಾರರು ಈ ಬಾರಿ ಬೇರೆ ತಂಡಗಳಲ್ಲಿ ಆಟವಾಡುತ್ತಿದ್ದಾರೆ. ನಿಮಗೆ ನೆನಪಿರಬಹುದು ಹಲವಾರು ಸೀಸನ್ ಗಳಿಂದಲೂ ಕೂಡ ಸ್ಪೀಡ್ ಬೌಲರ್ ಆಗಿರುವ ಉಮೇಶ್ ಯಾದವ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಟವಾಡುತ್ತಿದ್ದರು. ಆದರೆ ಯಾವುದೇ ಗಮನಾರ್ಹ ಪ್ರದರ್ಶನವನ್ನು ನೀಡುತ್ತಿಲ್ಲ ಎನ್ನುವ ಕಾರಣದಿಂದಾಗಿ ಕಳೆದ ಬಾರಿಯ ಸೀಸನ್ ನಂತರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಮೇಶ್ ಯಾದವ್ ಅವರನ್ನು ತಂಡದಿಂದ ಕೈಬಿಟ್ಟಿದೆ.

ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಉಮೇಶ್ ಯಾದವ್ ಅವರನ್ನು 2 ಕೋಟಿ ರೂಪಾಯಿ ಬೆಲೆಗೆ ಖರೀದಿಸಿತು. ಆಶ್ಚರ್ಯ ಎನ್ನುವಂತೆ ಈ ಬಾರಿಯ ಐಪಿಎಲ್ ನಲ್ಲಿ ಪ್ರಾರಂಭದಿಂದಲೂ ಕೂಡ ಉಮೇಶ್ ಯಾದವ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಗಮನಾರ್ಹ ಬೌಲಿಂಗ್ ಸಂದರ್ಶನವನ್ನು ನೀಡುತ್ತಿದ್ದಾರೆ. ಈಗಾಗಲೇ ಮೊದಲ ಮೂರು ಪಂದ್ಯಗಳು ಇಂದಲೇ ಬರೋಬ್ಬರಿ 8 ವಿಕೆಟುಗಳನ್ನು ಕಿತ್ತು ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಇನ್ನು ಇವರು ಈಗಾಗಲೇ ಐಪಿಎಲ್ ನಲ್ಲಿ ಗಳಿಸಿರುವ ಹಣವೆಷ್ಟು ಎನ್ನುವುದರ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದೇವೆ.

ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೂಪರ್ ಬಾವಲಿ ಮಾಡಿರುವ ಉಮೇಶ್ ಯಾದವ್ ಅವರು ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗಳನ್ನು ಬಹುಮಾನದ ರೂಪದಲ್ಲಿ ಗೆದ್ದಿದ್ದರು. ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ಸೋತರೂ ಕೂಡ ಎರಡು ವಿಕೆಟುಗಳನ್ನು ಕಿತ್ತು ಉಮೇಶ್ ಯಾದವ್ ರವರು ಬಹುಮಾನದ ರೂಪದಲ್ಲಿ 2ಲಕ್ಷ ರೂಪಾಯಿ ಗೆದ್ದರು. ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್ ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅಗ್ರ ರಾಗಿ ಕಾಣಿಸಿಕೊಂಡು ಬಹುಮಾನಗಳ ಮೇಲೆ ಬಹುಮಾನಗಳನ್ನು ಗೆದ್ದರು. ಒಟ್ಟಾರೆಯಾಗಿ ಇಲ್ಲಿಯವರೆಗೆ ಉಮೇಶ್ ಯಾದವ್ ರವರು ಮೂರು ಪಂದ್ಯಗಳಿಂದ ಬರೋಬ್ಬರಿ 9 ಲಕ್ಷ ರೂಪಾಯಿ ನಗದು ಬಹುಮಾನಗಳನ್ನು ಗೆದ್ದಿದ್ದಾರೆ. ಮೊದಲ ಹಂತದ ಹರಾಜಿನಲ್ಲಿ ಯಾರೂ ಕೂಡ ಉಮೇಶ್ ಯಾದವ್ ಅವರನ್ನು ಖರೀದಿಸಲು ಇಷ್ಟಪಟ್ಟಿರಲಿಲ್ಲ. ಇಂದು ಅದೇ ಉಮೇಶ್ ಯಾದವ್ ಅವರು ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿ ರುವ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ನಿಜವಾದ ಕಂಬ್ಯಾಕ್ ಎಂದು ಹೇಳಬಹುದಾಗಿದೆ.