ಯುದ್ಧದ ನಡುವೆಯೂ ಚಿನ್ನ ಬೆಲೆ ಇಳಿಕೆ, ಗ್ರಾಹಕರಿಗೆ ನಿಟ್ಟುಸಿರು. ಚಿನ್ನ ಕೊಳ್ಳುವ ಪ್ಲಾನ್ ಇದ್ದಾರೆ ಇಂದೇ ಕೊಳ್ಳಿ. ಎಷ್ಟಾಗಿದೆ ಗೊತ್ತೇ??

86

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವೆ ಪ್ರಾರಂಭವಾಗಿರುವ ಬಿಕ್ಕಟ್ಟಿನಿಂದಾಗಿ ಹಲವಾರು ವಸ್ತುಗಳ ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ ಹಾಗೂ ಇದು ಈಗಾಗಲೇ ಭಾರತಕ್ಕೆ ಕೂಡ ತಟ್ಟಿದೆ. ಹಲವಾರು ವಸ್ತುಗಳ ಬೆಲೆ ಏರಿಕೆ ಈಗಾಗಲೇ ಗ್ರಾಹಕರ ಜೀವನಕ್ಕೆ ಕಷ್ಟವನ್ನು ನೀಡಲಾರಂಭಿಸಿವೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶದ ಚಿನ್ನ ಖರೀದಿಯಲ್ಲಿ ಇಡೀ ವಿಶ್ವಕ್ಕೆ ಮೊದಲ ಸ್ಥಾನದಲ್ಲಿದೆ. ನಮ್ಮ ಭಾರತ ದೇಶದ ಮಹಿಳೆಯರು ಚಿನ್ನ ಖರೀದಿಯನ್ನು ತಮ್ಮ ಪ್ರಮುಖ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಕೆಲವರು ತಮ್ಮ ಪ್ರತಿಷ್ಠೆಗಾಗಿ ಚಿನ್ನವನ್ನು ಖರೀದಿಸಿದರೆ. ಪಡೆದುಕೊಳ್ಳುವುದಕ್ಕಾಗಿ ಕೂಡ ಖರೀದಿಸುತ್ತಾರೆ. ಇನ್ನು ಹಲವರು ಚಿನ್ನವನ್ನು ಹೂಡಿಕೆಯನ್ನಾಗಿ ಕೂಡ ಮಾಡಿಕೊಂಡಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವಿನ ಕಲಹದಿಂದಾಗಿ ಚಿನ್ನದ ಬೆಲೆ ಕೂಡ ಗಗನಕ್ಕೆ ಏರುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿತ್ತು. ಆಗಾಗ ಚಿನ್ನದಬೆಲೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರೊಂದಿಗೆ ಕಣ್ಣಾಮುಚ್ಚಾಲೆ ಆಟವನ್ನು ಆಡಿದ್ದಂತೂ ನಿಜ. ಆದರೆ ಚಿನ್ನ ಖರೀದಿಸುವವರಿಗೆ ಇಂದಿನ ದಿನ ಖಂಡಿತವಾಗಿ ಪ್ರಶಸ್ತವಾಗಿದೆ ಎಂದು ಹೇಳಬಹುದಾಗಿದೆ.

ಹೌದು ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ ಎನ್ನುವುದಾಗಿ ವರದಿಯಾಗಿದೆ. ಖಂಡಿತವಾಗಿ ಇಂದು ಚಿನ್ನ ಖರೀದಿಸುವವರಿಗೆ ಕೊಂಚಮಟ್ಟಿಗೆ ಶುಭಸುದ್ದಿ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಚಿನ್ನದ ದರ ಎಷ್ಟು ರೂಪಾಯಿ ಇಳಿಕೆಯಾಗಿದೆ ಎನ್ನುವುದನ್ನು ತಿಳಿಯೋಣ ಬನ್ನಿ. ದೊಡ್ಡಮಟ್ಟದ ಬೆಲೆಇಳಿಕೆ ಕಂಡುಬಂದಿಲ್ಲವಾದರೂ ಕೂಡ ಚಿನ್ನದ ದರದಲ್ಲಿ ನಿನ್ನೆಗಿಂತ ಇಳಿಕೆಯಾಗಿರುವುದು ನಿಜ. ಹೌದು ನಿನ್ನೆಗಿಂತ ಚಿನ್ನದ ದರದಲ್ಲಿ ಇಂದು 150 ರೂಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 4780 ರೂಪಾಯಿ ಆಗಿದೆ. ಅದರಲ್ಲೂ ನಮ್ಮ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47800 ರೂಪಾಯಿ ಆಗಿದೆ. ಒಂದು ವೇಳೆ ನೀವು ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದು ಒಳ್ಳೆಯ ದಿನ ಎಂದು ಹೇಳಬಹುದಾಗಿದೆ.