ಪ್ರತಿ ಬಾರಿ ಕ್ಯಾಮೆರಾ ಕಂಡಾಗ ರಶ್ಮಿಕಾ ಮಂದಣ್ಣ ಮಾಡುವಂತಹ ಈ ಸನ್ನೆಯ ಅರ್ಥವೇನು ಗೊತ್ತೇ??

72

ನಮಸ್ಕಾರ ಸ್ನೇಹಿತರೇ ನಟಿ ರಶ್ಮಿಕಾ ಮಂದಣ್ಣ ನವರ ಸಿನಿಮಾ ಜರ್ನಿ ಖಂಡಿತವಾಗಿ ಎಲ್ಲರಿಗೂ ಕೂಡ ಸ್ಪೂರ್ತಿ ಆಗುವಂಥದ್ದು. ಯಾಕೆಂದರೆ ಇಷ್ಟೊಂದು ಕಡಿಮೆ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಬೇಡಿಕೆಗೆ ಸೃಷ್ಟಿಸಿಕೊಂಡಿರುವುದು ನಿಜಕ್ಕೂ ಸುಲಭದ ಮಾತಲ್ಲ. ಕನ್ನಡದ ಕುರಿತಂತ ಹಾಗೂ ಕರ್ನಾಟಕದ ಕುರಿತಂತೆ ನಿರ್ಲಕ್ಷ್ಯ ಭಾವ ಅವರಲ್ಲಿ ಇದೆ ಎನ್ನುವ ಕಾರಣಕ್ಕಾಗಿ ಮಾತ್ರ ಅವರನ್ನು ನಾವು ದ್ವೇ’ಷಿಸುತ್ತೇವೆ. ಅದನ್ನು ಬಿಟ್ಟು ಅವರು ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಯಶಸ್ವಿಯಾಗಿರುವುದನ್ನು ಖಂಡಿತವಾಗಿ ಪ್ರತಿಯೊಬ್ಬರು ಕೂಡ ಮೆಚ್ಚಲೇ ಬೇಕಾಗುವಂಥದ್ದು.

ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ನಟಿಸುವ ಮೂಲಕ ತಮ್ಮ ಜರ್ನಿ ಯನ್ನು ಪ್ರಾರಂಭಿಸಿ ಈಗ ಭಾರತೀಯ ಚಿತ್ರರಂಗದ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಅವರ ಸಿನಿಮಾದಲ್ಲಿ ಅವರ ಜೊತೆಗೆ ನಟಿಸುವವರೆಗೂ ಕೂಡ ತಮ್ಮ ಯಶಸ್ಸಿನ ಹಾದಿಯನ್ನು ಬೆಳೆಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ಬಿಟ್ಟರೆ ಅಮಿತಾಬ್ ಬಚ್ಚನ್ ರವರೊಂದಿಗೆ ಸಿನಿಮಾದಲ್ಲಿ ನಟಿಸಿರುವಂತಹ ಏಕೈಕ ಕನ್ನಡಿಗರೆಂದರೆ ರಶ್ಮಿಕ ಮಂದಣ್ಣ ಎಂದು ಹೇಳಬಹುದಾಗಿದೆ. ಈಗಾಗಲೇ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕ ಮಂದಣ್ಣ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳನ್ನು ರಶ್ಮಿಕ ಮಂದಣ್ಣ ಹೊಂದಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮಾಧ್ಯಮಗಳ ಎದುರು ಬಂದಾಗ ಥಮ್ಸ್ ಅಪ್ ಹಾಗೂ ಎರಡು ಬೆರಳುಗಳನ್ನು ತೋರಿಸಿ ವಿಕ್ಟರಿ ಚಿನ್ನೆಯನ್ನು ತೋರಿಸುತ್ತಾರೆ.

ಆದರೆ ರಶ್ಮಿಕ ಮಂದಣ್ಣ ಮಾತ್ರ ಹೆಬ್ಬೆರಳು ಹಾಗೂ ತೋರುಬೆರಳುಗಳನ್ನು ಉಪಯೋಗಿಸಿ ವಿಶೇಷವಾದ ಚಿಹ್ನೆಯನ್ನು ತೋರಿಸುತ್ತಾರೆ. ಇದರ ಅರ್ಥ ಏನು ಎನ್ನುವುದು ಎಲ್ಲರೂ ಕೂಡ ಗೊಂದಲವನ್ನು ಮೂಡಿಸಿತ್ತು. ಆದರೆ ಇದರ ಅರ್ಥ ಈಗ ತಿಳಿದುಬಂದಿದೆ. ಇದನ್ನು ರಶ್ಮಿಕಾ ಮಂದಣ್ಣ ನವರು ಕೊರಿಯನ್ ಮ್ಯೂಸಿಕ್ ಬ್ಯಾಂಡ್ ಟೀಮ್ ಆಗಿರುವ ಬಿಟಿಎಸ್ ನಿಂದ ಕಲಿತು ಪ್ರೇರೇಪಿತರಾಗಿ. ಇದರ ಪ್ರಕಾರ ನೀವು ನಗುತ್ತಿರಿ ಅಥವಾ ನಿಮ್ಮ ದಿನ ಸಂತೋಷದಾಯಕವಾಗಿರಲಿ ಇಲ್ಲವೇ ಐ ಲವ್ ಯು ಎನ್ನುವುದಾಗಿದೆ. ಪ್ರತಿ ಬಾರಿ ಮಾಧ್ಯಮದವರನ್ನು ಕಂಡಾಗ ರಶ್ಮಿಕ ಮಂದಣ್ಣ ಈ ಚಿಹ್ನೆಯ ಮೂಲಕ ಕಂಡುಬರುತ್ತಾರೆ ಎಂಬುದನ್ನು ಹಲವಾರು ಬಾರಿ ಫೋಟೋಗಳಲ್ಲಿ ನೀವು ನೋಡಿದ್ದೀರಿ. ಸದ್ಯಕ್ಕೆ ಇಂದು ರಶ್ಮಿಕ ಮಂದಣ್ಣ ಅವರ ಜನ್ಮ ದಿನವಾಗಿದೆ. ಕಾಮೆಂಟ್ ಬಾಕ್ಸ್ನಲ್ಲಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೊಡಬಹುದಾಗಿದೆ.