ಎಷ್ಟೇ ಮಾಡರ್ನ್ ಬಟ್ಟೆ ಹಾಕಿದರು ಕೂಡ ಪ್ರತಿ ಹುಡುಗರು ಇಷ್ಟಪಡುವುದು ಸೀರೆಯನ್ನು, ಯಾಕೆ ಗೊತ್ತೇ?? ಅದರ ಹಿಂದಿನ ಗುಟ್ಟೇನು ಗೊತ್ತೇ??

284

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತ ದೇಶ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಪ್ರತಿ ಸಂದರ್ಭದಲ್ಲೂ ಕೂಡ ಆಚರಿಸಿಕೊಂಡು ಬಂದಿರುವಂತಹ ದೇಶ. ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಮಹಿಳೆಯರು ಸೀರೆ ಉಟ್ಟರೆ ಲಕ್ಷ್ಮಿಯಂತೆ ಕಾಣುತ್ತಾರೆ ಎಂಬುದಾಗಿ ಪುರುಷರ ಭಾವನೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಹೆಣ್ಣುಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಒಳಗೊಂಡು ಸೀರೆ ಹಾಗೂ ಇನ್ನಿತರ ಸಾಂಸ್ಕೃತಿಕ ಉಡುಗೆ-ತೊಡುಗೆಗಳನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಅವರು ಯಾವಾಗಲಾದರೂ ಸೀರೆಯನ್ನುಟ್ಟಾಗಲೆಲ್ಲ ಅದು ಹುಡುಗರಿಗೆ ಸಾಕಷ್ಟು ಆಕರ್ಷಕವಾಗಿರುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಯಾಕೆಂದರೆ ಸೀರೆಗೆ ಅಂತಹ ಆಕರ್ಷಣ ಶಕ್ತಿ ಇದೆ. ಇಂದಿನ ವಿಚಾರದಲ್ಲಿ ಹುಡುಗರಿಗೆ ಹುಡುಗಿಯರು ಸೀರೆ ಉಟ್ಟರೆ ಯಾಕೆ ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.

ಅಮ್ಮನಂತೆ ಕಾಣಿಸುವುದು; ಹೇಗೆ ಹುಡುಗಿಯರು ತಾನು ಮದುವೆಯಾಗುವ ಹುಡುಗ ನಲ್ಲಿ ತಂದೆಯ ಗುಣಗಳನ್ನು ನಿರೀಕ್ಷೆ ಮಾಡುತ್ತಾರೋ ಅದೇ ರೀತಿ ಹುಡುಗರು ಕೂಡ ತಾವು ಮದುವೆಯಾಗುವ ಹುಡುಗಿ ಯಲ್ಲಿ ತಾಯಿಯ ಝಲಕ್ ಅನ್ನು ನೋಡಲು ಇಷ್ಟಪಡುತ್ತಾರೆ. ಹೀಗಾಗಿ ತಾಯಿ ಹಾಗೂ ಸೀರೆ ಕಾಂಬಿನೇಷನ್ ಮೊದಲಿನಿಂದಲೂ ಕೂಡ ಹುಡುಗರ ತಲೆಯಲ್ಲಿ ಅಚ್ಚೊತ್ತಿಕೊಂಡು ಬಂದಿದೆ. ಹೀಗಾಗಿ ಹುಡುಗಿಯರು ಸೀರೆಯನ್ನು ಉಟ್ಟಾಗ ಹುಡುಗರಿಗೆ ಆಕರ್ಷಿತರಾಗಿ ಕಾಣುವುದು ಕೂಡ ಇದೇ ಕಾರಣಕ್ಕಾಗಿ. ಸಭ್ಯರಾಗಿ ಕಾಣಿಸುತ್ತಾರೆ; ಒಂದು ವೇಳೆ ಹುಡುಗಿಯರು ಚೆನ್ನಾಗಿ ಸರಿಯಾಗಿ ಸೀರೆಯನ್ನು ಉಟ್ಟುಕೊಂಡಿದ್ದರೆ ಖಂಡಿತವಾಗಿ ನೀವು ಹುಡುಗರಿಗೆ ಸಭ್ಯರಾಗಿ ಹಾಗೂ ಸುಂದರವಾಗಿ ಕಾಣಿಸಿಕೊಳ್ಳುತ್ತೀರಿ.

ಪರಿಪಕ್ವತೆ; ಒಬ್ಬ ಹುಡುಗಿ ಸೀರೆಯನ್ನು ಉಟ್ಟುಕೊಂಡರೆ ಆಕೆ ಮೆಚ್ಯೂರ್ ಆಗಿ ಕಾಣಿಸಿಕೊಳ್ಳುತ್ತಾಳೆ ಎನ್ನುವುದು ಹುಡುಗರ ಭಾವನೆ. ಒಂದು ಸೀರೆಯನ್ನು ಒಂದು ಹುಡುಗಿಯನ್ನು ಮಹಿಳೆಯನ್ನಾಗಿ ಮಾಡುತ್ತದೆ. ಹುಡುಗಿಯನ್ನು ಸೀರೆಯಲ್ಲಿ ನೋಡಿದಾಗ ಹುಡುಗ ತಾನು ತನ್ನ ಪೂರ್ಣ ಜೀವನ ಇವಳೊಂದಿಗೆ ಕಳೆಯಬಹುದು ಎನ್ನುವುದಾಗಿ ಅಂದುಕೊಳ್ಳುತ್ತಾನೆ. ಬಾಡಿ ಲ್ಯಾಂಗ್ವೇಜ್; ಸೀರೆ ಉಟ್ಟು ಕೊಳ್ಳುತ್ತಲೇ ಹುಡುಗಿಯರ ಬಾಡಿಲಾಂಗ್ವೇಜ್ ಬದಲಾಗುತ್ತದೆ. ಅವರ ಪ್ರತಿಯೊಂದು ಮಾತುಗಳು ಹಾಗೂ ನಡೆ ಹುಡುಗರಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತದೆ.

ಸಿಂಪಲ್; ಸೀರೆಯನ್ನು ಉಟ್ಟುಕೊಂಡು ನಂತರ ನಿಮ್ಮ ಸ್ಕಿನ್ ಕಾಣಿಸಿಕೊಳ್ಳುತ್ತಿರಬಹುದು ಆದರೆ ಅದು ಎಲ್ಲೂ ಕೂಡ ಕೆಟ್ಟದಾಗಿ ಕಾಣಿಸಿಕೊಳ್ಳುವುದಿಲ್ಲ. ಯಾಕೆಂದರೆ ಸೀರೆ ಇದನ್ನು ಸಿಂಪಲ್ಲಾಗಿ ಸೂಪರಾಗಿ ಕಾಣಿಸುವಂತೆ ಮಾಡುತ್ತದೆ. ಸುಂದರವಾಗಿ ಹಾಗೂ ಗ್ಲಾಮರಸ್ ಆಗಿ ಕೂಡ ಕಾಣಿಸಿಕೊಳ್ಳುತ್ತೀರಿ; ಸಾಂಸ್ಕೃತಿಕ ಉಡುಪಾಗಿರುವ ಸೀರೆಯಲ್ಲಿ ಕೂಡ ಕೇವಲ ಸುಂದರವಾಗಿ ಮಾತ್ರವಲ್ಲದೆ ಗ್ಲಾಮರಸ್ ಆಗಿ ಕೂಡ ಆಕರ್ಷಕವಾಗಿ ಕಾಣಿಸಿಕೊಳ್ಳುವುದರಿಂದ ಹುಡುಗರಿಗೆ ಇಷ್ಟವಾಗುತ್ತಾರೆ.

ಮಹಿಳೆಯ ಗುಣಗಳು ಕಾಣಿಸಲು ಆರಂಭಿಸುತ್ತದೆ; ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಶಾಲಾ-ಕಾಲೇಜು ಆಫೀಸುಗಳಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್ ಗಳಲ್ಲಿ ನೋಡುತ್ತಿರುತ್ತಾರೆ. ಒಮ್ಮೆಲೆ ಅವರನ್ನು ಸೀರೆಯಲ್ಲಿ ನೋಡಿದಾಗ ಅವರಲ್ಲಿ ಮಹಿಳೆಯರ ಗುಣ ಎದ್ದು ಕಾಣುತ್ತದೆ. ನಂತರ ಖಂಡಿತವಾಗಿ ಅದಾದನಂತರ ಸ್ನೇಹಿತರ ರೂಪದಲ್ಲಿ ಕಾಣುವುದನ್ನು ಬಿಟ್ಟು ಬಿಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಭಿನ್ನ ಲುಕ್; ವೆಸ್ಟರ್ನ್ ಬಟ್ಟೆಗಳನ್ನು ಹಾಕಿಕೊಂಡಿರುವ ಹುಡುಗಿಯರ ನಡುವೆ ನೀವು ಸೀರೆ ಹಾಕಿಕೊಂಡು ಹೋದರೆ ಖಂಡಿತವಾಗಿ ವಿಭಿನ್ನವಾಗಿ ವಿಶೇಷವಾಗಿ ಕಾಣಿಸುತ್ತೀರಿ. ಇನ್ನು ಸೀರೆಯನ್ನು ಕೂಡ ವಿವಿಧ ರೀತಿಯಲ್ಲಿ ಹಾಕಿಕೊಳ್ಳುವ ವಿಧಾನಗಳಿವೆ.

ಟ್ರೆಡಿಷನಲ್; ಸೀರೆಯನ್ನು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಕಿಕೊಳ್ಳುವುದು ಇದೇ ಕಾರಣಕ್ಕಾಗಿ. ಇದರಿಂದಾಗಿ ನಮ್ಮತನ ಎನ್ನುವುದು ಎದ್ದು ಕಾಣುತ್ತದೆ. ಸಾಂಸ್ಕೃತಿಕ ಛಾಯೆ ಎನ್ನುವುದು ಸೀರಿಯಲ್ಲಿ ಎದ್ದುಕಾಣುತ್ತದೆ. ಇದೇ ಕಾರಣಕ್ಕಾಗಿ ಹುಡುಗರು ಸೀರೆಯನ್ನು ಉಟ್ಟುಕೊಂಡಿರುವ ಹುಡುಗಿಯರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇವುಗಳಲ್ಲಿ ನಿಮ್ಮ ಕಾರಣ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ