ನಮ್ಮಮ್ಮ ಸೂಪರ್ ಸ್ಟಾರ್ ಚಾಂಪಿಯನ್ ಆದರು ವಂಶಿಕ ಯಶಸ್ವಿನಿ ಜೋಡಿ, ಆದರೆ ಸಿಕ್ಕ ಚಿಲ್ಲರೆ ಹಣ ಎಷ್ಟು ಗೊತ್ತೇ??? ಇಷ್ಟು ಕಡಿಮೇನಾ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚೆಗೆ ಕಿರುತೆರೆ ವಾಹಿನಿಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸಾಕಷ್ಟು ಆಕರ್ಷಿಸಿವೆ. ಕೇವಲ ಧಾರವಾಹಿಗಳು ಮಾತ್ರವಲ್ಲದೆ ರಿಯಾಲಿಟಿ ಶೋ ಕಾರ್ಯಕ್ರಮಗಳು ಕೂಡ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದೆ. ಇಂದು ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯ ವಿಶೇಷ ಕಾರ್ಯಕ್ರಮದ ಕುರಿತಂತೆ. ಹೌದು ನಾವು ಮಾತನಾಡಲು ಹೊರಟಿರುವುದು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಕುರಿತಂತೆ.
ಅಮ್ಮ ಮಕ್ಕಳ ಬಾಂಧವ್ಯದ ಕುರಿತಂತೆ ರಸವತ್ತಾಗಿ ಪ್ರೇಕ್ಷಕರಿಗೆ ತೋರಿಸುವಂತಹ ಅರ್ಥಪೂರ್ಣ ಕಾರ್ಯಕ್ರಮವೇ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ. ಹಲವಾರು ತಿಂಗಳ ಹಿಂದೆ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಈಗಾಗಲೇ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ. ಇನ್ನು ಈಗಾಗಲೇ ಅಂದರೆ ನಿನ್ನೆಯಷ್ಟೇ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಫಿನಾಲೆ ಮುಗಿದು ವಿನ್ನರ್ ಯಾರು ಎನ್ನುವುದು ಘೋಷಣೆಯಾಗಿದೆ. ಹೌದು ಕಾರ್ಯಕ್ರಮವನ್ನು ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ ಹಾಗೂ ಪತ್ನಿ ಯಶಸ್ವಿನಿ ರವರು ಗೆದ್ದಿದ್ದಾರೆ.

ಕಾರ್ಯಕ್ರಮದ ತೀರ್ಪುಗಾರರಾಗಿ ಹಿರಿಯ ನಟಿ ತಾರಾ ನಟಿ ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ರವರ ನಡೆಸಿಕೊಟ್ಟಿದ್ದಾರೆ. ಇನ್ನು ಈ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆ ಖ್ಯಾತ ನಟಿ ಅನುಪಮ ಗೌಡ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ತಿಂಗಳುಗಳಿಂದ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಪ್ರೇಕ್ಷಕರ ಜೀವನದ ಒಂದು ಭಾಗವಾಗಿತ್ತು. ಅಮ್ಮ ಮಕ್ಕಳ ಈ ಕಾರ್ಯಕ್ರಮವನ್ನು ನೋಡುವುದು ಕಣ್ಣಿಗೆ ಹಬ್ಬವಾಗಿತ್ತು. ಮೊದಲಿಂದಲೂ ಕೂಡ ಈ ಕಾರ್ಯಕ್ರಮವನ್ನು ಯಾರು ಗೆಲ್ಲಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಕೂಡ ಕಾಡುತ್ತಿತ್ತು.
ಇನ್ನು ಫಿನಾಲೆಗೆ ವಿದ್ಯಾ ರೋಹಿತ್ ಸುಪ್ರೀತಾ ಇಬ್ಬನಿ ಜಾನ್ವಿ ಗ್ರಂಥ್ ಪುನೀತ ಆರ್ಯ ಯಶಸ್ವಿನಿ ವಂಶಿಕ ನಂದಿನಿ ಆದ್ವಿಕ್ ಜೋಡಿ ತೇರ್ಗಡೆ ಆಗಿತ್ತು. ಇವರಲ್ಲಿ ಕೊನೆಗೂ ಕೂಡ ಈಗ ನಿರೀಕ್ಷೆಯಂತೆ ವಿನ್ನರ್ ಯಾರು ಎನ್ನುವುದು ತಿಳಿದುಬಂದಿದೆ. ಕಾರ್ಯಕ್ರಮದ ಮೊದಲಿನಿಂದಲೂ ಕೂಡ ಮಾಸ್ಟರ್ ಆನಂದ್ ರವರ ಮಗಳು ವಂಶಿಕ ಎಲ್ಲರಿಗಿಂತ ಹೆಚ್ಚಾಗಿ ಆಕ್ಟಿವ್ ಆಗಿ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ವೋಟಿಂಗ್ ಮೂಲಕ ಹೆಚ್ಚು ವೋಟ್ ಪಡೆಯುವುದರ ಮೂಲಕ ಯಶಸ್ವಿನಿ ಹಾಗೂ ಅಂಶಿಕ ಜೋಡಿ ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿದೆ.
ಇನ್ನು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಟ್ರೋಫಿಯನ್ನು ರಿಯಲ್ ಸ್ಟಾರ್ ಉಪೇಂದ್ರ ರವರು ವಂಶಿಕ ಹಾಗೂ ಯಶಸ್ವಿನಿ ಜೋಡಿಗೆ ನೀಡಿದ್ದಾರೆ. ಮಾತ್ರವಲ್ಲದೆ ಬರೋಬ್ಬರಿ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಕೂಡ ಗೆದ್ದುಕೊಂಡಿದ್ದಾರೆ. ಟ್ರೋಫಿಯಲ್ಲಿ ಅಮ್ಮ ಮಗಳು ಇರುವಂತಹ ರೀತಿಯಲ್ಲೇ ಇಬ್ಬರು ಕೂಡ ಪೋಸ್ ನೀಡಿದ್ದಾರೆ. ಎರಡನೇ ಸ್ಥಾನದಲ್ಲಿ ಪುನೀತ ಹಾಗೂ ಆರ್ಯ ರವರು ಕೂಡ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಅದ್ದೂರಿ ಕಾರ್ಯಕ್ರಮದ ಮೂಲಕ ನಮ್ಮಮ್ಮ ಸೂಪರ್ಸ್ಟಾರ್ ಗ್ರಾಂಡ್ ಫಿನಾಲೆ ಸಮಾರೋಪಗೊಂಡಿದೆ.

ಫಿನಾಲೆಗೆ ಎಲ್ಲರ ಜೊತೆಗೆ ಹೋಮ್ ಮಿನಿಸ್ಟರ್ ಚಿತ್ರತಂಡದ ಕಡೆಯಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಾಯಕನಟಿ ವೇದಿಕಾ ರವರು ಬಂದಿದ್ದರು. ಇದೇ ಸಂದರ್ಭದಲ್ಲಿ ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ನಂತರ ಯಾವ ಕಾರ್ಯಕ್ರಮ ಎನ್ನುವ ಪ್ರಶ್ನೆಗೆ ಕೂಡ ತೆರೆಬಿದ್ದಿದೆ. ಹೌದು ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30 ಕ್ಕೆ ಗಿಚ್ಚಿ ಗಿಲಿಗಿಲಿ ಎನ್ನುವ ಕಾರ್ಯಕ್ರಮ ಪ್ರಚಾರ ಆರಂಭಿಸಲಿದೆ. ಕಾರ್ಯಕ್ರಮದ ಅಧಿಕೃತ ಉದ್ಘಾಟನೆಯನ್ನು ವೇದಿಕೆ ಮೇಲೆ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡಿದ್ದಾರೆ. ಹಾಗಿದ್ದರೆ ಈ ಕಾರ್ಯಕ್ರಮ ಏನು ಎಂಬುದನ್ನು ನಾವು ಪ್ರಸಾರ ಆರಂಭವಾದ ಮೇಲೆ ನೋಡಬೇಕು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.