ಸಿನಿಮಾ ಮುಗಿಯುವವರೆಗೂ ಸುಮ್ಮನೆ ಇದ್ದು, ಈಗ ಯಶ್ ರವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರವೀನ ತಂಡನ್ ರವರು ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮೆಲ್ಲರ ಕನ್ನಡದ ಹೆಮ್ಮೆಯ ಸಿನಿಮಾ ವಾಗಿರುವ ಕೆಜಿಎಫ್ ಚಾಪ್ಟರ್ 2 ಇದೇ ಏಪ್ರಿಲ್ 14ರಂದು ವಿಶ್ವಾದ್ಯಂತ ಎಂಟು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆಯಾಗುವುದಕ್ಕೆ ಸಕಲ ಸನ್ನದ್ಧವಾಗಿದೆ. ಚಿತ್ರದ ಹಾಡು ಹಾಗೂ ಟೀಸರ್ ಮತ್ತು ಟ್ರೈಲರ್ ಗಳು ಈಗಾಗಲೇ ಚಿತ್ರದ ಕುರಿತಂತೆ ಜಾಗತಿಕವಾಗಿ ಬೇಡಿಕೆ ಹೆಚ್ಚುವಂತೆ ಮಾಡಿದೆ. ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವಂತೆ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಸಂಜಯ್ ದತ್ ರವೀನ ತಂಡನ್ ಪ್ರಕಾಶ್ ರಾಜ್ ಸೇರಿದಂತೆ ಹಲವಾರು ನಟರು ನಟಿಸಿದ್ದಾರೆ.
ಅದರಲ್ಲೂ ರವೀನ ತಂಡನ್ ಹಾಗೂ ಸಂಜಯ್ ದತ್ ರವರ ಆಗಮನದಿಂದಾಗಿ ಚಿತ್ರದ ಜನಪ್ರಿಯತೆಯನ್ನುವುದು ಬಾಲಿವುಡ್ನಲ್ಲಿ ಕೂಡ ಹೆಚ್ಚಾಗಿದೆ. ಹೀಗಾಗಿ ಚಿತ್ರ ಈ ಬಾರಿ ಖಂಡಿತವಾಗಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವಂತಹ ಎಲ್ಲಾ ಸಾಧ್ಯತೆಗಳಿವೆ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ವಿಶ್ಯುವಲ್ಸ್ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಟ್ರೈಲರ್ ಮೂಲಕ ಎಲ್ಲರ ಮನಗೆದ್ದಿದೆ. ವಿದೇಶಿಗರು ಕೂಡ ಚಿತ್ರವನ್ನು ನಮ್ಮ ದೇಶಗಳಲ್ಲಿ ತಪ್ಪದೆ ಬಿಡುಗಡೆ ಮಾಡಿ ಎನ್ನುವುದಾಗಿ ಚಿತ್ರದ ನಿರ್ಮಾಪಕರಲ್ಲಿ ದುಂಬಾಲು ಬಿದ್ದಿದ್ದಾರೆ. ಚಿತ್ರ ಇಂಗ್ಲಿಷ್ನಲ್ಲಿ ಕೂಡ ಬಿಡುಗಡೆಯಾಗುತ್ತದೆ ಎನ್ನುವುದಾಗಿ ಚಿತ್ರತಂಡ ಕನ್ಫರ್ಮ್ ಮಾಡಿದೆ. ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಮುಗಿದಿದ್ದು ಚಿತ್ರತಂಡ ಪ್ರಮೋಶನ್ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಕುರಿತಂತೆ ಬಾಲಿವುಡ್ ಚಿತ್ರರಂಗದ ನಟಿ ಆಗಿರುವ ರವೀನ ತಂಡನ್ ರವರು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ಹೌದು ಈಗ ಚಿತ್ರಗಳಿಗೆ ಯಾವುದೇ ಭಾಷೆಯ ಅಡ್ಡಿಯಿಲ್ಲ ಕೇವಲ ಪ್ರತಿಭೆ ಹಾಗೂ ಕಂಟೆಂಟ್ ಗಳನ್ನು ಜನರು ಗುರುತಿಸುತ್ತಿದ್ದಾರೆ ಇದು ನಿಜಕ್ಕೂ ಕೂಡ ಸಂತೋಷದ ವಿಚಾರ. ಯಶ್ ರವರು ಬಹಳಷ್ಟು ಒಳ್ಳೆಯ ವ್ಯಕ್ತಿ ಅತ್ಯುತ್ತಮ ಹಾಗೂ ಪ್ರತಿಭಾವಂತ ನಟ ಅವರ ಜೊತೆಗೆ ಕೆಲಸ ಮಾಡಿರುವುದು ನಿಜಕ್ಕೂ ನನಗೆ ಸಂತೋಷ ನೀಡಿದೆ ಎಂಬುದಾಗಿ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರವರು ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಕನಸುಗಳ ಮೂಲಕ ಕನ್ನಡ ಚಿತ್ರರಂಗದ ಕನಸುಗಳನ್ನು ಕೂಡ ಪೂರೈಸುತ್ತಾ ಬಂದವರು. ಈಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಟಾಪ್ ನಲ್ಲಿ ಕುರಿಸುವ ಕನಸಲು ಕೂಡ ಪೂರೈಸಲಿದ್ದಾರೆ ಎಂಬುದಾಗಿ ಎಲ್ಲರೂ ಕನ್ಫರ್ಮ್ ಆಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.