ಕೆಜಿಎಫ್ 2 ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಸರಂತೆ ಯಂತೆ ಮಿಂಚಿದ ರಾಧಿಕಾ ರವರು ಧರಿಸಿದ್ದ ಬಟ್ಟೆಯ ಬೆಲೆ ಎಷ್ಟು ಗೊತ್ತೇ?? ಒಂದು ಡ್ರೆಸ್ ಗೆ ಇಷ್ಟೊಂದಾ??

75

ನಮಸ್ಕಾರ ಸ್ನೇಹಿತರೇ ನಟಿ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದ ಸಿಂಡ್ರೆಲಾ ಎನ್ನುವ ಖ್ಯಾತಿಗೆ ಒಳಗಾಗಿದ್ದವರು. ನಟಿ ರಮ್ಯಾ ರವರನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಯಶಸ್ವಿ ನಟಿಯಾಗಿ ಕಾಣಿಸಿಕೊಂಡಿದ್ದರು ರಾಧಿಕಾ ಪಂಡಿತ್. ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ರಾಧಿಕಾ ಪಂಡಿತ್ ಅವರು ನಟಿಸಿದ್ದಾರೆ. ಮೊದಲು ಕಿರುತೆರೆಯಿಂದ ತಮ್ಮ ನಟನೆಯ ಜರ್ನಿ ಯನ್ನು ಪ್ರಾರಂಭಿಸಿ ನಂತರ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ನಂತರ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ರಾಧಿಕಾ ಪಂಡಿತ್ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಬಾಕ್ಸಾಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದವು. ಇನ್ನು ಯಶ್ ಅವರನ್ನು ಮದುವೆಯಾದ ನಂತರ ಕೊಂಚಮಟ್ಟಿಗೆ ಕನ್ನಡ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದರು. ನಂತರ ಯಶ್ ರವರ ಜೊತೆಗೆ ಆಗಾಗ ಕೆಲವೊಂದು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬಿಟ್ಟರೆ ಸಂಪೂರ್ಣ ಸಮಯವನ್ನು ತಮ್ಮ ಮಕ್ಕಳಿಗಾಗಿ ಹಾಗೂ ಸಂಸಾರಕ್ಕಾಗಿ ಮೀಸಲಿಟ್ಟಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಬೇಡಿಕೆಯ ಉನ್ನತ ಹಂತದಲ್ಲಿದ್ದರೂ ಕೂಡ ಸಂಸಾರಕ್ಕಾಗಿ ಇಷ್ಟೊಂದು ತ್ಯಾಗ ಮಾಡಿರುವ ರಾಧಿಕಾ ಪಂಡಿತ್ ರವರನ್ನು ನಾವು ಮೆಚ್ಚಲೇಬೇಕು. ಇತ್ತೀಚಿಗಷ್ಟೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಕೂಡ ಬಂದಿದ್ದರು.

ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ರವರು ಗ್ಲಾಮರಸ್ ಬಟ್ಟೆಯಲ್ಲಿ ಬಂದು ಎಲ್ಲರ ಕಣ್ಮನವನ್ನು ಸೆಳೆದಿದ್ದರು. ಇನ್ನು ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಕೂಡ ಪೋಸ್ಟ್ ಮಾಡಿದ್ದರು. ಅಭಿಮಾನಿಗಳು ಕೂಡ ನೋಡಿ ಫಿದಾ ಆಗಿ ರಾಧಿಕಾ ಪಂಡಿತ್ ರವರಲ್ಲಿ ಮತ್ತೆ ಕಂಬ್ಯಾಕ್ ಮಾಡಿ ಎನ್ನುವುದಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಈಗ ಸುದ್ದಿಯಾಗುತ್ತಿರುವುದು ಈ ಬಟ್ಟೆಯ ಬೆಲೆ. ಸೆಲೆಬ್ರಿಟಿಗಳು ಎಂದ ಮೇಲೆ ಅವರು ಧರಿಸುವ ಬಟ್ಟೆಗಳ ಬೆಲೆ ಕೂಡ ದುಬಾರಿಯಾಗಿರುತ್ತದೆ. ಹೌದು ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಲಾಂಚಿನಲ್ಲಿ ರಾಧಿಕಾ ಪಂಡಿತ್ ಅವರು ಧರಿಸಿರುವ ಬಟ್ಟೆಯ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ. ಈ ಬಟ್ಟೆಯ ಮೂಲಕ ಎರಡು ಮಕ್ಕಳ ತಾಯಿಯಾಗಿದ್ದರೂ ಕೂಡ ಕಾರ್ಯಕ್ರಮದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ರಾಧಿಕಾ ಪಂಡಿತ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ