ಸದಾ ಖಡಕ್ ಆಗಿ ಮಾತನಾಡುವ ದರ್ಶನ್ ಕಣ್ಣೀರು ಹಾಕಿದ್ದು ನೋಡಿದ್ದೀರಾ?? ವೈರಲ್ ಆದ ವಿಡಿಯೋ ಹೇಗಿದೆ ಗೊತ್ತೇ?? ಕಣ್ಣೀರು ಹಾಕಿಸಿದ್ದು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟನ ಮಗನಾಗಿದ್ದರೂ ಕೂಡ ಅವರು ಕಷ್ಟಪಟ್ಟೇ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಸಂಪಾದಿಸಿಕೊಂಡಿದ್ದು. ಅದಕ್ಕಾಗಿಯೇ ಇಂದಿಗೂ ಕೂಡ ಯಾರ ಅಂಜಿಕೆ ಇಲ್ಲದೆ ಸಿಂಗಲ್ ಶೇರ್ ನಂತೆ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಮೊದಲಿಗೆ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡು ಚಿತ್ರಗಳಲ್ಲಿ ನಟಿಸಲು ಅವಕಾಶಕ್ಕಾಗಿ ಒದ್ದಾಡುತ್ತಿದ್ದರು.
ನಂತರ ಅವರಿಗೆ ಸಿಕ್ಕಿದ್ದು ಮೆಜೆಸ್ಟಿಕ್ ಚಿತ್ರ. 2001 ರಲ್ಲಿ ಬಿಡುಗಡೆಯಾದ ಅಂತಹ ಮೆಜೆಸ್ಟಿಕ್ ಚಿತ್ರದ ಗೆಲುವಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಚಿತ್ರರಂಗದಲ್ಲಿ ದರ್ಶನ್ ಅವರು ಮಾಡದ ಕೆಲಸಗಳೇ ಇಲ್ಲ ಎಂದು ಹೇಳಬಹುದಾಗಿದೆ. ಲೈಟ್ ಬಾಯ್ ನಿಂದ ಹಿಡಿದು ಕೋಟಿ ಕೋಟಿ ಸಂಪಾದನೆ ಮಾಡುವ ಸ್ಟಾರ್ ನಟನಾಗಿ ಕೂಡ ಎಲ್ಲಾ ಕಷ್ಟ-ಸುಖಗಳನ್ನು ಕಂಡಿದ್ದಾರೆ. ಹೀಗಾಗಿ ಒಬ್ಬ ಬಡ ವ್ಯಕ್ತಿಯ ಕಷ್ಟಕಾರ್ಪಣ್ಯಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನೋಡಿಕೊಂಡೇ ಇಂದು ಲ್ಯಾಂಬೋರ್ಗಿನಿ ಕಾರಿನಲ್ಲಿ ತಿರುಗುವಷ್ಟರ ಮಟ್ಟಿಗೆ ಯಶಸ್ಸನ್ನು ಸಂಪಾದಿಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಣ್ಣೀರು ಹಾಕಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.
ಇಷ್ಟೊಂದು ಗಟ್ಟಿ ಮನಸ್ಸಿನ ಮನುಷ್ಯ ಕಣ್ಣೀರು ಹಾಕುವುದಕ್ಕೆ ಹೇಗೆ ಸಾಧ್ಯ ಎಂಬುದಾಗಿ ನೀವು ಯೋಚಿಸಿರಬಹುದು. ಅದಕ್ಕೂ ಕೂಡ ಕಾರಣವಿದೆ ಕಾರಣ ಸಮೇತವಾಗಿ ನಿಮಗೆ ಹೇಳುತ್ತೇವೆ ಬನ್ನಿ. ಹೌದು ಇದು ಹಳೆಯ ವಿಡಿಯೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಚಿತ್ರೀಕರಣದ ಸಂದರ್ಭದಲ್ಲಿ ಅವರಿಗೆ ಗೊತ್ತಿಲ್ಲದಂತೆ ತೆಗೆದಿರುವ ವಿಡಿಯೋ. ಈ ವಿಡಿಯೋದಲ್ಲಿ ಲೈಟ್ ಬಾಯ್ ಗಳು ಲೈಟನ್ನು ಕಟ್ಟುತ್ತಿರುವ ಸಂದರ್ಭವನ್ನು ದರ್ಶನ್ ಅವರು ವೀಕ್ಷಿಸುತ್ತಿದ್ದರು. ಇದರ ಶಿವನು ವೀಕ್ಷಿಸಿ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಈಗಾಗಲೇ ಅವರು ಕೂಡ ಸ್ಥಾನದಲ್ಲಿ ಇದ್ದು ಬಂದವರು ಹೀಗಾಗಿ ಅವರ ಕಷ್ಟ ದರ್ಶನ್ ಅವರಿಗೆ ತಿಳಿದಿರುತ್ತದೆ. ನೀವು ಕೂಡ ಈ ವಿಡಿಯೋ ನೋಡಬಹುದಾಗಿದೆ ದರ್ಶನ್ ಅವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.