ಮುಂಬೈ ನಲ್ಲಿ ಸ್ವರ್ಗದಂತೆ ಕಾಣುವ ಐಷಾರಾಮಿ ಮನೆ ಖರೀದಿ ಮಾಡಿದ ಸಮಂತಾ, ಇದರ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಟಾಪ್ ನಟಿಯ ಮನೆ ಬೆಲೆ ಇಷ್ಟೊಂದಾ??

99

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ಅತ್ಯಂತ ದೊಡ್ಡದಾಗಿ ಸುದ್ದಿ ಆದಂತಹ ವಿಚಾರವೆಂದರೆ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ಧಿ. ಹೌದು ಗೆಳೆಯರೇ ಇವರಿಬ್ಬರ ಮದುವೆ ಹೇಗೆ ಸುದ್ದಿಯಾಗಿತ್ತೋ ಅದೇ ರೀತಿ ಇವರಿಬ್ಬರ ಡಿವೋರ್ಸ್ ಕೂಡ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಂಡಿತ್ತು. ಹಲವಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತ ಯಾವ ಕಾರಣಕ್ಕೆ ನಾಗಚೈತನ್ಯ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ ಎನ್ನುವುದು ಇಂದಿಗೂ ತಿಳಿದುಬಂದಿಲ್ಲ.

ಬೇರೆಯಾದ ನಂತರ ಈಗ ಸಮಂತ ರವರು ಹಾಗೂ ನಾಗಚೈತನ್ಯ ಇಬ್ಬರೂ ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕಹಿ ಎಂದು ಅನಿಸಿದರೂ ಕೂಡ ಇದು ನಿಜವಾದ ಸತ್ಯದ ಮಾತು. ಅದೇನೆಂದರೆ ವಿವಾಹ ವಿಚ್ಛೇದನ ಪಡೆದ ನಂತರ ಸಮಂತ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಹಿಂದಿಯಲ್ಲಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ನಟಿಸಿದ ನಂತರ ನಟಿ ಸಮಂತಾ ರವರ ಜನಪ್ರಿಯತೆಯನ್ನು ವುದು ಹಿಂದಿಯಲ್ಲಿ ಕೂಡ ಹೆಚ್ಚಾಗಿ ಬಾಲಿವುಡ್ ನಿಂದ ಕೂಡ ಹಲವಾರು ಸಿನಿಮಾ ಹಾಗೂ ವೆಬ್ ಸರಣಿಗಳ ಆಫರ್ಗಳು ಸಮಂತ ಅವರನ್ನು ಹುಡುಕಿಕೊಂಡು ಬರುತ್ತಿವೆ. ಹೀಗಾಗಿ ಸಮಂತ ರವರು ಹೈದರಾಬಾದ್ ನಿಂದ ಮುಂಬೈ ಗೆ ಶಿಫ್ಟ್ ಆಗುವಂತಹ ಸುದ್ದಿಗಳು ಕೇಳಿಬರುತ್ತಿವೆ.

ಹೌದು ಗೆಳೆಯರೇ ಸಮಂತ ರವರು ಮುಂಬೈನಲ್ಲಿ ಈಗಾಗಲೇ ಎರಡು ಮನೆಗಳನ್ನು ಫಿಕ್ಸ್ ಮಾಡಿದ್ದಾರೆ. ಮೂಲಗಳ ಪ್ರಕಾರ ಈ ಎರಡು ಮನೆಗಳು ಕೂಡ ಜುಹೂ ಹಾಗೂ ಬಾಂದ್ರಾದ ಸೀ ಫೇಸಿಂಗ್ ಕಡೆ ಇದೆಯಂತೆ. ಎರಡು ಫ್ಲಾಟ್ ಗಳನ್ನು ಈಗಾಗಲೇ ನಟಿ ಸಮಂತಾ ರವರು ಫೈನಲ್ ಮಾಡಿದ್ದಾರಂತೆ. ಎರಡು ಪ್ಲೇಟ್ ಗಳ ಬೆಲೆ ಬರೋಬ್ಬರಿ ಮೂರು ಕೋಟಿ ರೂಪಾಯಿಯಂತೆ. ಹೀಗಾಗಿ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಸಮಂತಾ ರವರು ಹೆಚ್ಚಾಗಿ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಲೆಕ್ಕಾಚಾರ ಹಾಕಿದ್ದಾರೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.