ಅಂದು ಯಶ್ ನೋಡಿ ಶೋ ಆಫ್ ಎಂದು ಹೇಳಿ ವಿವಾದ ಸೃಷ್ಟಿ ಮಾಡಿದ್ದ ರಶ್ಮಿಕ ಇದೀಗ ಏನು ಹೇಳಿದ್ದಾರೆ ಗೊತ್ತಾ; ಇದೆಲ್ಲಾ ಕೇವಲ ಬಕೆಟ್ ಹಿಡಿಯುವುದಕ್ಕೆ ಎಂದ ನೆಟ್ಟಿಗರು??

38

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕ ಮಂದಣ್ಣ ಈಗಾಗಲೇ ನ್ಯಾಷನಲ್ ಕೃಷ್ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹುಬೇಡಿಕೆಯ ನಟಿ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿರುವ ಅಲ್ಲು ಅರ್ಜುನ ನಟನೆಯ ಪುಷ್ಪಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮೇಲಂತೂ ಹಿಂದಿ ಸಿನಿಮಾಗಳಲ್ಲಿ ಅವರ ಜನಪ್ರಿಯತೆ ಎನ್ನುವುದು ಶಿಖರಕ್ಕೆ ತಲುಪಿದೆ.

ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ಕೂಡ ಕಾಲಿಟ್ಟಿರುವ ರಶ್ಮಿಕ ಮಂದಣ್ಣ ನವರು ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಅಮಿತಾ ಬಚ್ಚನ್ ರವರಂತಹ ಸ್ಟಾರ್ ನಟರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಿಮಗೆ ತಿಳಿದಿರಬಹುದು ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕ ಮಂದಣ್ಣ ಅವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ನವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ನವರ ಜೊತೆ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಕೂಡ ಇದ್ದರು.

ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿಗೆ ಶೋ ಆಫ್ ಮಾಡುವಂತಹ ನಟ ಯಾರು ಎಂದು ಕೇಳಿದಾಗ ರಶ್ಮಿಕ ಮಂದಣ್ಣ ನವರು ಸಡನ್ನಾಗಿ ರಾಕಿಂಗ್ ಸ್ಟಾರ್ ಯಶ್ ರವರ ಹೆಸರನ್ನು ಹೇಳುತ್ತಾರೆ. ಆದರೆ ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸರಣಿ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸಿಗಾಗಿರುವುದರಿಂದಾಗಿ ಯಶ್ ರವರಿಗೆ ಜಾಗತಿಕವಾಗಿ ದೊಡ್ಡಮಟ್ಟದ ಜನ ಮನ್ನಣೆ ಸಿಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ ನೋಡಿ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎನ್ನುವುದಾಗಿ ರಶ್ಮಿಕ ಮಂದಣ್ಣ ರವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಹೇಳಿಕೊಂಡಿದ್ದಾರೆ. ಈ ಕುರಿತಂತೆ ಜನರು ರಶ್ಮಿಕ ಮಂದಣ್ಣ ನವರು ಈಗ ರಾಕಿಂಗ್ ಸ್ಟಾರ್ ಯಶ್ ರವರನ್ನು ಹೊಗಳುತ್ತಿರುವುದು ಕೇವಲ ಬಕೆಟ್ ಹಿಡಿಯುವುದಕ್ಕಾಗಿ ಎನ್ನುವುದಾಗಿ ಟೀಕಿಸಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.