ಮ್ಯಾಕ್ಸ್ವೆಲ್ ಮಾಡುವೆ ಮುಗಿಸಿ ಕೊಂಡು ತಂಡ ಸೇರಿಕೊಂಡ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್, ಅಷ್ಟಕ್ಕೂ ನಡೆದ್ದದೇನು ಗೊತ್ತೇ?

1,455

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಬಹುನಿರೀಕ್ಷಿತ ಸೀಸನ್ ಆರಂಭವಾಗಿ ಒಂದು ವಾರ ಕಳೆದಿದೆ. ಎಲ್ಲಾ ಹತ್ತು ತಂಡಗಳು ಉತ್ತಮವಾಗಿ ಆಡುತ್ತಿದ್ದು, ಪ್ರಬಲ ತಂಡಗಳೇ ಪಾಯಿಂಟ್ಸ್ ಟೇಬಲ್ ನಲ್ಲಿ ಕೆಳಗಿನ ಸ್ಥಾನ ಪಡೆದುಕೊಂಡಿವೆ. ಕನ್ನಡಿಗರ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು, ಮೊದಲ ಪಂದ್ಯ ಉತ್ತಮ ಪ್ರದರ್ಶನ ನೀಡಿ ಸೋಲುವಂತಾಯಿತು. ಆದರೇ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ವಿರೋಚಿತ ಗೆಲುವು ಸಾಧಿಸಿತು.ಮುಂದಿನ ಪಂದ್ಯವನ್ನು ಆರ್ಸಿಬಿ ಎಪ್ರಿಲ್ 5 ರಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡಲಿದೆ.

ಆದರೇ ಈ ಪಂದ್ಯದ ಆರಂಭಕ್ಕಿಂತ ಮುಂಚೆ ಆರ್ಸಿಬಿ ತಂಡಕ್ಕೆ ದೊಡ್ಡ ತಲೆ ನೋವು ಎದುರಾಗಿದೆ. ಹೌದು ಆರ್ಸಿಬಿ ತಂಡದ ಪ್ರಮುಖ ವಿದೇಶಿ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಜೋಶ್ ಹೇಜಲ್ವುಡ್ ಇನ್ನು ತಂಡವನ್ನು ಕೂಡಿಕೊಂಡಿಲ್ಲ. ಅವರ ಬದಲಿಗೆ ಈಗ ಡೇವಿಡ್ ವಿಲ್ಲಿ ಹಾಗೂ ಶೇಫಾನೆ ರುದರ್ ಫೋರ್ಡ್ ಆಡುತ್ತಿದ್ದಾರೆ. ಮ್ಯಾಕ್ಸ್ವೆಲ್ ಮತ್ತು ಹೇಜಲ್ವುಡ್ ತಂಡಕ್ಕೆ ಆಗಮಿಸಿದರೇ, ಅವರಿಗೆ ಇವರಿಬ್ಬರೂ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಆದರೇ ಇದೀಗ ಬಂದಿರುವ ಸುದ್ದಿಯ ಪ್ರಕಾರ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹೇಜಲ್ವುಡ್ ಆರ್ಸಿಬಿ ಪಾಳಯಕ್ಕೆ ಸೇರಿಕೊಳ್ಳಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ ಎಂಬ ಮಾಹಿತಿ ಬಂದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್, ಏಪ್ರಿಲ್ 5 ರ ತನಕ ತನ್ನ ತಂಡವನ್ನು ಪಾಕಿಸ್ತಾನದಲ್ಲಿ ಆಡಿಸಲಿದೆ. ಏಪ್ರಿಲ್ 5 ರವರೆಗೆ ತನ್ನ ತಂಡದ ಆಟಗಾರರು ಬೇರೆ ಯಾವುದೇ ಲೀಗ್ ಕ್ರಿಕೇಟ್ ಆಡುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಹಾಗಾಗಿ ಆಸ್ಟ್ರೇಲಿಯಾದ ಕ್ರಿಕೇಟಿಗರು ಏಪ್ರಿಲ್ 5 ರ ನಂತರವೇ ಐಪಿಎಲ್ ನ ಬಯೋ ಬಬಲ್ ಕೂಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಆಸೀಸ್ ಆಟಗಾರರು ಏಪ್ರಿಲ್ 8 ರ ನಂತರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.