ಬಿಗ್ ನ್ಯೂಸ್: ಐಪಿಎಲ್ ಆರಂಭದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಶಾಕ್, ಗಾಯದ ಮೇಲೆ ಬರೆ. ಸ್ಟಾರ್ ಪ್ಲೇಯರ್ ಔಟ್. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಕಪ್ ಗೆದ್ದಿರುವ ತಂಡವಾಗಿ ಮುಂಬೈ ಇಂಡಿಯನ್ಸ್ ಅನ್ನು ಗುರುತಿಸಲಾಗುತ್ತದೆ. ಪ್ರತಿ ಬಾರಿ ಕೂಡ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಪಂದ್ಯಗಳ ಕೊನೆಯ ಕ್ಷಣದ ಸಮಯದಲ್ಲಿ ಫೀನಿಕ್ಸ್ ಪಕ್ಷಿಯಂತೆ ಎದ್ದುನಿಂತು ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತವೆ. ಈಗಾಗಲೇ ಈ ಬಾರಿ ಮೊದಲ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋತಿದೆ.
ಇಂದು ಎರಡನೇ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಅದೃಷ್ಟ ಪರೀಕ್ಷೆಗಾಗಿ ಎದುರುನೋಡುತ್ತಿದೆ. ಆದರೆ ಪಂದ್ಯಾಟ ಆರಂಭವಾಗುವ ಮುನ್ನವೇ ಈಗ ಶಾ’ಕಿಂಗ್ ಸುದ್ದಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಎದುರಾಗಿದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮುಂಬೈ ಇಂಡಿಯನ್ಸ್ ತಂಡದ ಭರವಸೆಯ ಬ್ಯಾಟ್ಸ್ ಮ್ಯಾನ್ ಆಗಿ ಸೂರ್ಯಕುಮಾರ್ ಯಾದವ್ ಅವರು ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಂದು ಬಾರಿ ಕೂಡ ಮುಂಬೈ ಇಂಡಿಯನ್ಸ್ ತಂಡ ಸೋಲಿನ ದವಡೆಯಲ್ಲಿ ಇದ್ದಾಗಲೆಲ್ಲ ಮುಂದೆ ನಿಂತು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಆದರೆ ಈ ಬಾರಿ ಮೊದಲ ಪಂದ್ಯಾಟದಲ್ಲಿ ಇಂ’ಜುರಿ ಸಮಸ್ಯೆಯಿಂದಾಗಿ ತಂಡದಿಂದ ಹೊರಕ್ಕೆ ಉಳಿದಿದ್ದರು. ಹೀಗಾಗಿ ಮೊದಲ ಪಂದ್ಯವನ್ನು ಆಡಲಿಕ್ಕೆ ಸಾಧ್ಯವಾಗಿರಲಿಲ್ಲ.

ಆದರೆ ಈಗ ಇಂದಿನ ಎರಡನೇ ಪಂದ್ಯದಲ್ಲೂ ಕೂಡ ಸೂರ್ಯಕುಮಾರ್ ಯಾದವ ರವರು ಇಂ’ಜುರಿ ಯಿಂದ ಹೊರಕ್ಕೆ ಹೋಗಿದ್ದಾರೆ. ಹೀಗಾಗಿ ಇಂ’ಜುರಿ ಯಿಂದ ಹೊರಬರಲು ಸೂರ್ಯಕುಮಾರ್ ಯಾದವರು ಖಂಡಿತವಾಗಿ ಚಿಕಿತ್ಸೆಯ ಮೊರೆ ಹೋಗಲೇಬೇಕು. ಆದರೆ ಚಿಕಿತ್ಸೆಯನ್ನು ಪಡೆದ ನಂತರ ಮತ್ತೆ ಕ್ವಾರಂಟೈನ್ ಸೇರಿದಂತೆ ಬಿಸಿಸಿಐನ ಹಲವಾರು ನಿಯಮಗಳನ್ನು ಎದುರಿಸಲೇಬೇಕಾಗುತ್ತದೆ. ಹೀಗಾಗಿ ಮತ್ತೆ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಈ ಸೀಸನ್ನಲ್ಲಿ ಆಡಲು ಅನುಮತಿ ನೀಡುತ್ತಾರೋ ಇಲ್ಲವೋ ಅಥವಾ ಮತ್ತಷ್ಟು ಪಂದ್ಯಗಳಿಂದ ಹೊರಗೆ ಇಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ಸೂರ್ಯ ಕುಮಾರ್ ಯಾದವ್ ರವರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡದಿದ್ದರೆ ಖಂಡಿತವಾಗಿ ತಂಡಕ್ಕೆ ದೊಡ್ಡ ನೆಗೆಟಿವ್ ಪಾಯಿಂಟ್ ಎಂದರೆ ತಪ್ಪಾಗಲಾರದು. ಈ ವಿಚಾರಗಳ ಕುರಿತಂತೆ ಅಧಿಕೃತ ಘೋಷಣೆ ಮುಂದಿನ ದಿನಗಳಲ್ಲಿ ನಾವು ಕಾದುನೋಡಬೇಕಾಗಿದೆ.