ಪುಷ್ಪ ಸಿನಿಮಾದಲ್ಲಿ ಡಾಲಿ ಮಾಡಿದ ಪಾತ್ರವನ್ನು ರಿಜೆಕ್ಟ್ ಮಾಡಿದ ಕನ್ನಡದ ಟಾಪ್ ನಟ ಯಾರು ಗೊತ್ತೆ; ಡಾಲಿಗೆ ಈ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತೆ??

1,586

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ವರ್ಷದಲ್ಲಿ ಒಂದು ಸಿನಿಮಾವಾದರೂ ದೊಡ್ಡಮಟ್ಟದಲ್ಲಿ ಯಾರೂ ಕೂಡ ಊಹಿಸಲಾಗದಷ್ಟು ಸದ್ದು ಮಾಡುತ್ತದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಚಿತ್ರವೆಂದರೆ ಅದು ಅಲ್ಲು ಅರ್ಜುನ ನಟನೆಯ ಪುಷ್ಪ ಚಿತ್ರವೆಂದರೆ ಖಂಡಿತವಾಗಿ ತಪ್ಪಾಗಲಾರದು. ಪುಷ್ಪ ಚಿತ್ರ ಕೇವಲ ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಅಂತಹ ಮಹೋನ್ನತ ಚಿತ್ರ. ಚಿತ್ರದ ಕುರಿತಂತೆ ಈಗಲೂ ಕೂಡ ಪರಭಾಷೆಗಳಲ್ಲಿ ಜನಪ್ರಿಯತೆ ಹೆಚ್ಚಿದೆ.

ರಂಗಸ್ಥಳಂ ಚಿತ್ರದ ನಂತರ ನಿರ್ದೇಶಕ ಸುಕುಮಾರ್ ಅವರು ಮತ್ತೊಂದು ಮಾಸ್ಟರ್ಪೀಸ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಹೌದು ಪುಷ್ಪ ಚಿತ್ರ ಕಮರ್ಷಿಯಲ್ ಹಾಗೂ ಕಂಟೆಂಟ್ ವಿಚಾರದಲ್ಲಿ ಕಳೆದ ವರ್ಷ ಬಿಡುಗಡೆಯಾದ ಅಂತಹ ಎಲ್ಲಾ ಚಿತ್ರಗಳನ್ನು ಕೂಡ ಮೀರಿಸಿದೆ. ಅದರಲ್ಲೂ ಉತ್ತರ ಭಾರತದ ಪ್ರೇಕ್ಷಕರಂತೂ ಚಿತ್ರದ ಕುರಿತಂತೆ ಮರುಳಾಗಿದ್ದಾರೆ. ಹಿಂದಿಯಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣನ ಅವರ ಜನಪ್ರಿಯತೆ ಈಗಾಗಲೇ ಹಿಂದಿ ಪ್ರಾಂತ್ಯಗಳಲ್ಲಿ ಕೂಡ ಇರುವುದು ನಿಮಗೆಲ್ಲ ಗೊತ್ತಿದೆ.

ಇನ್ನು ಈ ಚಿತ್ರದಲ್ಲಿ ರಶ್ಮಿಕ ಮಂದಣ್ಣ ನವರು ಮಾತ್ರವಲ್ಲದೆ ಹಲವಾರು ಕಲಾವಿದರು ಅಲ್ಲು ಅರ್ಜುನ್ ರವರ ಜೊತೆಗೆ ನಟಿಸಿದ್ದಾರೆ. ಚಿತ್ರ ಸೂಪರ್ ಹಿಟ್ ಆಗುವುದಕ್ಕೆ ಎಲ್ಲರೂ ಕೂಡ ಸಮಾನ ಕಾರಣವೆಂದರೆ
ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಇಂದು ನಾವು ನಿಮಗೆ ಗೊತ್ತಿಲ್ಲದಂತೆ ಇರುವಂತಹ ಒಂದು ವಿಚಾರದ ಕುರಿತಂತೆ ಸವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಆ ವಿಚಾರ ಏನೆಂಬುದನ್ನು ಕಂಪ್ಲೀಟ್ ಆಗಿ ತಿಳಿಯೋಣ ಬನ್ನಿ.

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಪುಷ್ಪ ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರವನ್ನು ಡಾಲಿ ಧನಂಜಯ್ ನಟಿಸಿದ್ದರು. ಈ ಪಾತ್ರಕ್ಕೆ ನೂರಕ್ಕೆ ನೂರರಷ್ಟು ಡಾಲಿ ಧನಂಜಯ್ ನ್ಯಾಯವನ್ನು ಸಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಆದರೆ ಡಾಲಿ ಧನಂಜಯ್ ರವರಿಗೆ ಸಿಗುವ ಮುನ್ನ ಈ ಪಾತ್ರ ಕನ್ನಡದ ಸ್ಟಾರ್ ನಟರೊಬ್ಬರ ಪಾಲಿಗೆ ಬಂದಿತ್ತು. ಅವರು ಈ ಪಾತ್ರವನ್ನು ತಿರಸ್ಕರಿಸಿದ ನಂತರವೇ ಡಾಲಿ ಧನಂಜಯ್ ರವರಿಗೆ ಈ ಸಿನಿಮಾದ ಅವಕಾಶ ಹುಡುಕಿಕೊಂಡು ಬಂದಿದೆ.

ಹೌದು ನಿಮಗೆ ತಿಳಿದಿರಬಹುದು ಕೆಲವು ಸಮಯಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹುಡುಕಿಕೊಂಡು ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಬೆಂಗಳೂರಿಗೆ ಬಂದಿದ್ದರು ಆ ಸಂದರ್ಭದಲ್ಲಿ ಅವರಿಬ್ಬರು ಜೊತೆಗೆ ಇರುವಂತಹ ಹಲವಾರು ಫೋಟೋಗಳು ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸಂದರ್ಭದಲ್ಲಿ ಜಾಲಿ ರೆಡ್ಡಿ ಪಾತ್ರವನ್ನು ಸುಕುಮಾರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗಾಗಿ ತಮ್ಮ ಜೊತೆಗೆ ಕರೆತಂದಿದ್ದರು. ಆದರೆ ದರ್ಶನ್ ರವರು ಮೊದಲ ಮಾತಿನಲ್ಲಿಯೇ ಈ ಆಹ್ವಾನವನ್ನು ತಿರಸ್ಕರಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಟಾಪ್ ಸ್ಟಾರ್ ನಟ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪರಭಾಷೆಗಳಲ್ಲಿ ಇಂದಿಗೂ ಕೂಡ ನಟಿಸಿದವರಲ್ಲ. ಅದರಲ್ಲೂ ಈಗ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಸುತಾರಾಂ ಇಷ್ಟವಿಲ್ಲ. ತಮ್ಮ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವುದು ಅವರಿಗೆ ಹಿಡಿಸಿದೆ. ಹೀಗಾಗಿ ಚಿತ್ರದ ಆಫರ್ ಅನ್ನು ನಿರಾಕರಿಸಿದ್ದರು. ಅದೇ ಅವಕಾಶವನ್ನು ಪಡೆದುಕೊಂಡಿರುವ ಡಾಲಿ ಧನಂಜಯ್ ಈಗ ಜಾಲಿ ರೆಡ್ಡಿ ಪಾತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪಾತ್ರ ಡಾಲಿ ಧನಂಜಯ್ ರವರಿಗೆ ಸಿಕ್ಕಿದ್ದು ಹೇಗೆ. ಅದೇನೇ ಇರಲಿ ಡಾಲಿ ಧನಂಜಯ್ ರವರು ಸಿಕ್ಕಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅರ್ಹ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ಹೆಚ್ಚಿನ ಜನರಿಗೆ ತಿಳಿದಿರುವುದಕ್ಕೆ ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸುಕುಮಾರ್ ರವರು ಜೊತೆಯಾಗಿ ಸಿನಿಮಾ ಮಾಡಿದರು ಕೂಡ ಮಾಡಬಹುದು ಎನ್ನುವ ಚರ್ಚೆಗಳನ್ನು ನಡೆಯುತ್ತಿರುವುದು ನಿಜ.