ಆರ್ಸಿಬಿ ತಂಡದಲ್ಲಿ ಎಬಿಡಿ ರವರಂತೆ ಬ್ಯಾಟಿಂಗ್ ಮಾಡಿ, ಮ್ಯಾಚ್ ಫಿನಿಷ್ ಮಾಡುವ ಬಲಾಢ್ಯ ಆಟಗಾರ ಸಿಕ್ಕೇಬಿಟ್ಟರು. ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಫುಟ್ಬಾಲ್ ಬಿಟ್ಟರೆ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಭಾರತ ದೇಶದಲ್ಲಿ ಕ್ರಿಕೆಟ್ಗೆ ಇರುವಷ್ಟು ಮಾನ್ಯತೆ ಯಾವುದೇ ಕ್ರೀಡೆಗಳಿಗೆ ಇಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಅದಕ್ಕಾಗಿಯೇ ಅಲ್ಲವೇ ನಮ್ಮ ಭಾರತದ ಕ್ರಿಕೆಟ್ ಸಂಸ್ಥೆಯನ್ನುವುದು ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಇದು ಒಂದು ವಿಚಾರದಲ್ಲಾದರೂ ಕೂಡ ನಾವು ಬೇರೆಲ್ಲಾ ದೇಶಗಳಿಗಿಂತ ಶ್ರೀಮಂತವಾಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು ಹಾಗೂ ಗರ್ವದಿಂದ ಹೇಳಿಕೊಳ್ಳಬೇಕು.
ಇಂದು ಮಾತನಾಡಲು ಹೊರಟಿರುವುದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಕುರಿತಂತೆ. ಈಗಾಗಲೇ ಈ ಬಾರಿಯ ಐಪಿಎಲ್ ಸೀಸನ್ 2022 ಪ್ರಾರಂಭವಾಗಿ ಹಲವಾರು ಪಂದ್ಯಗಳು ಕೂಡ ಮುಗಿದಿದೆ. ಈ ಬಾರಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಹೇಳುವುದಾದರೆ ಹಲವಾರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ವಿರಾಟ್ ಕೊಹ್ಲಿ ರವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು ಎಬಿ ಡಿವಿಲಿಯರ್ಸ್ ರವರು ತಂಡವನ್ನು ಬಿಟ್ಟಿದ್ದಾರೆ. ಕೇವಲ ತಂಡವನ್ನು ಮಾತ್ರವಲ್ಲದೆ ಎಬಿ ಡಿವಿಲಿಯರ್ಸ್ ರವರು ಐಪಿಎಲ್ ಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ತಂಡದ ನಾಯಕತ್ವವನ್ನು ಸೌತ್ ಆಫ್ರಿಕಾ ಮೂಲದ ಕ್ರಿಕೆಟರ್ ಆಗಿರುವ ಹಾಗೂ ಭರವಸೆಯ ಬ್ಯಾಟ್ಸ್ಮನ್ ಆಗಿರುವ ಡುಪ್ಲೆಸಿಸ್ ಅವರು ವಹಿಸಿಕೊಂಡಿದ್ದಾರೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಬೀಗಿದೆ. ಹಲವಾರು ಬದಲಾವಣೆಗಳು ತಂಡದಲ್ಲಿ ಕಾಣಿಸಿದ್ದರು ಕೂಡ ಈ ಬಾರಿ ಪೇಪರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವಂತಹ ತಂಡಗಳಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.

ಇನ್ನು ಇತ್ತೀಚಿಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿತ್ತು. ಈ ಸಂದರ್ಭದಲ್ಲಿ ಒಬ್ಬ ಆಟಗಾರ ತನ್ನ ನಿಜವಾದ ಸಾಮರ್ಥ್ಯವನ್ನು ಸಾಬೀತು ಪಡಿಸಿದ ಕಾರಣದಿಂದಾಗಿ ಎಲ್ಲರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಬ್ಬ ಪರ್ಫೆಕ್ಟ್ ಫಿನಿಶರ್ ಸಿಕ್ಕಿದ್ದಾನೆ ಎಂಬುದಾಗಿ ಖುಷಿ ಪಡುತ್ತಿದ್ದಾರೆ. ಇನ್ನು ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಹಾಗೂ ಹಾಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನ ಆಗಿರುವ ಡುಪ್ಲೆಸಿಸ್ ರವರು ಕೂಡ ಈ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಹಾನ್ ಫಿನಿಶರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಹಾಗೂ ಎಬಿಡಿ ರವರಿಗೆ ಹೋಲಿಸಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಲವಾರು ಸಂಕಟದ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ತಂಡವನ್ನು ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ ಸೇರಿಸಿರುವುದು ಈಗಾಗಲೇ ಹಲವಾರು ಬಾರಿ ಇತಿಹಾಸದಲ್ಲಿ ದಾಖಲಾಗಿದೆ. ಇಷ್ಟು ಮಾತ್ರವಲ್ಲದೆ ಎಬಿಡಿ ಅವರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಲವಾರು ಬಾರಿ ರಕ್ಷಿಸಿದ್ದಾರೆ. ಈಗ ಅದೇ ತರಹದ ಆಟವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನೊಬ್ಬ ಪ್ರದರ್ಶಿಸಿದ್ದಾರೆ.
ಹೌದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊನೆಯ ಓವರಿನಲ್ಲಿ ಏಳು ರನ್ನುಗಳು ಬೇಕಾಗಿತ್ತು. ಅನುಭವಿ ಆಟಗಾರ ರಸೆಲ್ ಅವರು ಬೌಲಿಂಗ್ ಮಾಡುತ್ತಿದ್ದರು. ಸ್ಟ್ರೈಕ್ ನಲ್ಲಿದ್ದ ದಿನೇಶ್ ಕಾರ್ತಿಕ್ ರವರು ಒತ್ತಡವಿದ್ದರೂ ಕೂಡ ಕೂಲಾಗಿ ಒಂದು ಸಿಕ್ಸ್ ಹಾಗೂ ಒಂದು ಫೋರ್ ಬಾರಿಸಿ ಆರಾಮದಿಂದ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು. ಇದನ್ನು ನೋಡಿ ತಂಡದ ನಾಯಕನಾಗಿರುವ ಡುಪ್ಲೆಸಿಸ್ ರವರು ದಿನೇಶ್ ಕಾರ್ತಿಕ್ ರವರನ್ನು ಹಾಡಿಹೊಗಳಿದ್ದಾರೆ.

ಇಷ್ಟು ಮಾತ್ರವಲ್ಲದೆ ಯಾವುದೇ ಒತ್ತಡದ ಸಂದರ್ಭದಲ್ಲಿ ಧೋನಿ ಹಾಗೂ ಎಬಿಡಿ ಅವರು ಹೇಗೆ ಒತ್ತಡವನ್ನು ನಿಭಾಯಿಸಿ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡುತ್ತಾರೋ ಹಾಗೆ ದಿನೇಶ್ ಕಾರ್ತಿಕ್ ರವರು ಕೂಡ ಧೋನಿಯಂತೆ ಕೂಲಾಗಿ ಪರಿಸ್ಥಿತಿಯನ್ನು ಸಂಭಾಳಿಸುತ್ತಾರೆ ಎಂಬುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಮೊದಲ ಗೆಲುವಿನ ಖುಷಿಯಲ್ಲಿದ್ದಾರೆ. ಡುಪ್ಲೆಸಿಸ್ ರವರು ಹೇಳಿರುವ ಮಾತನ್ನು ನೀವು ಒಪ್ಪುತ್ತೀರೋ ಇಲ್ಲವೋ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.