ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ ರವರ ಬಗ್ಗೆ ನಿಮಗೆಷ್ಟು ಗೊತ್ತೇ?? ಅವರ ಲೈಫ್ ಸ್ಟೈಲ್ ಬಗ್ಗೆ ನಿಮಗೆ ಗೊತ್ತೇ??

18,669

ನಮಸ್ಕಾರ ಸ್ನೇಹಿತರೇ, ಮೈಸೂರು ಅರಮನೆಯ ಬಗ್ಗೆ ಸಾಕಷ್ಟು ಜನರಿಗೆ ಗೊತ್ತು, ಅಲ್ಲಿನ ಮಹಾರಾಣಿ ಹಾಗೂ ಮಹಾರಾಝ ಮೊದಲ ಆಕರ್ಷಣೆಯೂ ಹೌದು. ಯಾಕಂದ್ರೆ ಸದ್ಯದ ಆಧುನಿಕ ಯುಗದಲ್ಲಿ ಮಹಾರಾಜರ ಮನೆತನದ ಗೌರವವನ್ನೂ ಉಳಿಸುತ್ತಾ, ತಮ್ಮ ಇಷ್ಟದ ಬದುಕನ್ನೂ ನಡೆಸುವುದು ಎಂದರೆ ಸುಲಭದ ಕೆಲಸವಲ್ಲ. ಆದರೆ ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ ಹಾಗೂ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹಳ ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾದರೆ ಬನ್ನಿ ಮೈಸೂರಿನ ಮಹಾರಾಣಿಯ ಜೀವನ ಹೇಗಿರುತ್ತೆ, ನಮಗಿಂಥ ಎಷ್ಟು ಭಿನ್ನವಾಗಿರುತ್ತೇ ನೋಡೋಣ.

ತ್ರಿಶಿಕಾಕುಮಾರಿ ಅವರು ನಾರ್ಮಲ್ ಜನರಂತೆ ದಿನದ ಬದುಕನ್ನು ನಡೆಸುತ್ತಾರೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಬೆಳಗ್ಗೆ ಬೇಗನೇ ಏಳುವುದು, ಯೋಗ ಮಾಡುವುದು, ಮಗನನ್ನು ಎಬ್ಬಿಸಿ ತಯಾರು ಮಾಡಿ ಶಾಲೆಗೆ ಬಿಡುವುದು, ನಂತರ ತನ್ನನ್ನು ನೋಡ ಬಂದ ಜನರನ್ನು ಭೇಟಿಯಾಗುವುದು ಇಂಥವುಗಳನ್ನು ಮಾಡುತ್ತಾರೆ.

ತಾನೇ ಆರಂಭಿಸಿದ ಆನ್‌ಲೈನ್ ವ್ಯವಹಾರವನ್ನೂ ತ್ರಿಶಿಕಾ ನೋಡಿಕೊಳ್ಳುತ್ತಾರೆ. ನಂತರ ಶಾಲೆಯಿಂದ ಬಂದ ಮಗನಿಗೆ ಊಟ ಮಾಡಿಸಿ ನಿದ್ದೆ ಮಾಡಿಸಿ, ಸ್ವಲ್ಪ ಬಿಡುವು ದೊರೆತರೆ ಸಂಜೆ ಗಣ್ಯರನ್ನು ಭೇಟಿಯಾಗುವುದು ಹಾಗೂ ತನ್ನ ವ್ಯವಹಾರದ ಬಗ್ಗೆ ಗಮನಹರಿಸುವುದು ಈ ಚಟುವಟಿಕೆಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಬಂಡಿಪುರ, ನಾಗರಹೊಳೆ ಇತ್ಯಾದಿ ಕಾಡಿನ ಕಡೆ ತಿರುಗಾಟಕ್ಕೆ ಹೋಗುವುದುಂಟು ತ್ರಿಶಿಕಾ ಹಾಗೂ ಅವರ ಮಗ.

ಇನ್ನು ಮೈಸೂರು ರಾಣೀ ಹಾಗೂ ಮಹಾರಾಜರೂ ಕೂಡ ಒತ್ತಡದ ಜೀವನ ನಡೆಸುತ್ತಾರೆ. ಇದಕ್ಕೆ ಕಾರಣ ಅವರು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಗಂಭೀರವಾಗಿ,ಸರಳತೆಯಿಂದ ಇರಬೇಕಾಗುತ್ತದೆ. ಮೈಸೂರು ಮನೆತನಕ್ಕೆ ಯಾವುದೇ ಕಳಂಕಬಾರದ ರೀತಿಯಲ್ಲಿ ಜೀವನ ನಡೆಸಬೇಕಾಗುತ್ತದೆ. ಆದರೆ ನಗರದ ಜನತೆ ಪ್ರೀತಿ, ಈ ಜವಾಬ್ದಾರಿಯನ್ನು ಸುಲಭವಾಗಿಸಿದೆ ಎನ್ನುವುದು ತ್ರಿಶಿಕಾ ಕುಮಾರಿಯವರ ಮಾತುಗಳು.

ರಾಜಸ್ಥಾನದ ದುಂಗರ್‌ಪುರ್ ಅರಮನೆಯಲ್ಲಿ ಹುಟ್ಟಿ ಬೆಳೆದ ತ್ರಿಶಿಕಾಗೆ ಅರಮನೆಗೆ ಪದ್ದತಿ, ರೀತಿ ರಿವಾಜುಗಳು ಹೊಸತೇನಲ್ಲ. ಹಾಗಾಗಿ ಮೈಸೂರಿನಲ್ಲಿಯೂ ಅವರು ಸುಲಭವಾಗಿ ತಮ್ಮ ಜವಾಬ್ದಾರಿಯನ್ನೂ ನಿರ್ವಹಿಸುತ್ತಾ ಖುಷಿಯಾಗಿಯೇ ಇರುತ್ತಾರೆ ಬಾಸ್ಕೆಟ್‌ಬಾಲ್ ಮತ್ತು ಟೆನ್ನಿಸ್ ಆಡೋದು ಚಿಕ್ಕವಯಸ್ಸಿನಿಂದಲೂ ಅವರಿಗೆ ಇಷ್ಟವಂತೆ. ಅಷ್ಟೇ ಅಲ್ಲ, ತ್ರಿಶಿಕಾಕುಮಾರಿಗೆ ಡ್ಯಾನ್ಸ್ ಕೂಡ ಇಷ್ಟ. ಭರತನಾಟ್ಯ ಮತ್ತು ಹೊಸಬಗೆಯ ಜಾಝ್ ಡ್ಯಾನ್ಸ್ ಎರಡನ್ನೂ ಚೆನ್ನಾಗಿ ಬಲ್ಲವರು. ಇನ್ನು ಸಂಜೆ ಅಥವಾ ರಾತ್ರಿ ಬಿಡುವಾಗಿದ್ದರೆ ಕುಟುಂಬಕ್ಕೆ ತಾವೇ ಅಡುಗೆ ಬಡಿಸುತ್ತಾರಂತೆ ರಾಜಕುಮಾರಿ!

ಇನ್ನು ತ್ರಿಶಿಕಾ ಕುಮಾರಿ ಸ್ವ ಉದ್ಯಮವನ್ನು ಹೊಂದಿದ್ದು, ‘ದಿ ಲಿಟಲ್ ಬಂಟಿಂಗ್ಸ್’ ಸ್ಟಾರ್ಟಪ್‌ ಹೊಂದಿದ್ದು, ಇದು ಪುಟ್ಟ ಮಕ್ಕಳ ಬಳಕೆಗಾಗಿ ಇರುವ ಎಕೋ ಫ್ರೆಂಡ್ಲಿ ಉತ್ಪನ್ನಗಳ ಆನ್‌ಲೈನ್ ಮಾರಾಟ ಮಳಿಗೆ. ರಾಸಾಯನಿಕಗಳಿಲ್ಲದ ಉತ್ಪನ್ನಗಳು, ಆಟಿಕೆಗಳು ಈ ಸೈಟ್ ನಲ್ಲಿ ಲಭ್ಯ. ಇದರಿಂದಾಗಿ ಚನ್ನಪಟ್ಟಣದ ಕರಕುಶಲ ಗೊಂಬೆಗಳ ತಯಾರಿಕೆ ಹಾಗೂ ಇತರ ಕರಕುಶಲ ವಸ್ತುಗಳ ತಯಾರಿಕರೊಂದಿಗೆ ತ್ರಿಶಿಕಾ ಕುಮಾರಿ ಸಂಪರ್ಕ ಇಟ್ಟುಕೊಂಡಿದ್ದಾರೆ.

ಅರಮನೆಯ ರಾಣಿಯಾಗಿರುವ ತ್ರಿಶಿಕಾ ಕೋವಿಡ್ ಸಂಕಷ್ಟದ ಸಮಯದಲ್ಲಿ ಅಗತ್ಯವಿದ್ದವರಿಗೆ ಸಹಾಯ ಮಾಡಿ, ರಾಣಿಯ ಜವಾಬ್ದಾರಿಯನ್ನು ಮೆರೆದಿದ್ದಾರೆ. ಇನು ಪತಿ ಯದುವೀರ್ ಅವರ ಬೆಂಬಲದಿಂದ ಮಹಾರಾಣಿ ವಯಕ್ತಿಕ ಜೀವನದಲ್ಲಿ ಹಾಗೂ ಸಾರ್ವಜನಿಕ ಜೀವನ ಎರಡನ್ನೂ ಅತ್ಯಂತ ಜವಾಬ್ದಾರಿಯಿಂದ, ಖುಷಿಯಿಂದ ನಿಭಾಯಿಸುತ್ತಿದ್ದಾರೆ.