ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಕಾಡುತ್ತಿದೆಯೇ?? ಹಾಗಿದ್ದರೆ ಜಸ್ಟ್ ಹೀಗೆ ಮಾಡಿ ಸಾಕು. ಖಂಡಿತಾ ಎಲ್ಲ ಸಮಸ್ಯೆ ಹೋಗುತ್ತದೆ.

180

ನಮಸ್ಕಾರ ಸ್ನೇಹಿತರೇ ಅನೇಕ ಜನರು ನಿತ್ಯ ಜೀವನದಲ್ಲಿ ಹಣದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಹಣ ಸಂಪಾದಿಸಲು ಸಾಧ್ಯವಾಗುತ್ತಿಲ್ಲ ಅಥವಾ ಹೇಗೆ ಹಣ ಸಂಪಾದಿಸುವುದು ಎಂದು ತಿಳಿಯದಿದ್ದಾಗ ಅದರ ಬಗ್ಗೆಯೇ ಚಿಂತಿಸಬೇಡಿ. ಭಯವು ನಿಮ್ಮ ಹಣಗಳಿಕೆಯ ಶಕ್ತಿಯನ್ನು ಕುಂಠಿತಗೊಳಿಸುವುದು ಮಾತ್ರವಲ್ಲದೆ ನಿಮ್ಮ ಸೃಜನಶೀಲತೆಯನ್ನೂ ನಾಶಪಡಿಸುತ್ತದೆ. ಇದು ನಿಮ್ಮಲ್ಲಿ ಇನ್ನಷ್ಟು ಒತ್ತಡವನ್ನುಂಟು ಮಾಡುತ್ತದೆ ಮತ್ತು ನಿಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ನೀವು ಆದಾಯದ ಬಗ್ಗೆ ಹಾಗೂ ಖರ್ಚುಗಳ ಬಗ್ಗೆ ನೀವು ತಿಳಿದಿರಬೇಕು. ನಿಮ್ಮ ಹಣದ ಸಮಸ್ಯೆಯಿಂದ ಹೊರಬರುವವರೆಗೂ ಖರ್ಚು ಕಡಿಮೆ ಮಾಡುವುದು ಅತೀ ಮುಖ್ಯವಾದ ವಿಷಯ. ಹಣವನ್ನು ಹೆಚ್ಚಿಸಲು ಬೇರೆ ಯಾವ ಆದಾಯದ ಮೂಲವಿದೆ ಎನ್ನುವುದನ್ನು ನೀವು ಹುಡುಕುವುದರಲ್ಲಿ ಹೆಚ್ಚು ಸಮಯ ಕಳೆಯಿರಿ. ನಿಮಗೆ ಹಣದ ಸಮಸ್ಯೆ ಇದ್ದಾಗ ಬಹಳ ಜಾಣ್ಮೆಯಿಂದ, ಶಿಸ್ತಿನಿಂದ ಹಣದ ನಿರ್ವಹಣೆ ಮಾಡಬೇಕು. ಇಂಥ ಸಂದರ್ಭದಲ್ಲಿ ಅನಗತ್ಯ ವಸ್ತುಗಳ ಖರೀದಿ ಮಾಡುವುದನ್ನು ಮೊದಲು ಬಿಡಬೇಕು.

ಒಂದು ಆದಾಯ ಬರುತ್ತಿದ್ದರೆ, ಹಣದ ಸಮಸ್ಯೆ ನಿವಾರಣೆಯಾಯಿತು ಅಂದುಕೊಳ್ಳಬೇಡಿ. ಇನ್ನೊಡು ಆದಾಯದ ಮೂಲವನ್ನು ಹುಡುಕಿ. ಇನ್ನು ನಿಮ್ಮಿಂದ ಆದಷ್ಟು ಪ್ರಯತ್ನಪಡಿ, ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಮಾಡಿ. ನೀವು ಈ ಸಮಾಜಕ್ಕೆ ಏನನ್ನಾದರೂ ಕೊಟ್ಟರೆ ಮಾತ್ರ ಅದರಿಂದ ಹಿಂತಿರುಗಿ ಪಡೆಯಲು ಸಾಧ್ಯ. ಇದೇ ಸೃಷ್ಟಿಯ ನಿಯಮ.ಇನ್ನು ಯಾವುದೇ ಸಾಲಗಳಿಲ್ಲದೇ, ಹಣದ ಸಮಸ್ಯೆಗಳಿಂದ ಮುಕ್ತರಾಗುವುದು ಹೇಗೆ ಎಂಬುದರ ಬಗ್ಗೆ ಯೋಚಿಸಿ. ಹೀಗೆ ಮಾಡಿದಾಗ ನೀವು ಸಾಲದಿಂದ ಮುಕ್ತರಾಗಲು ಇನ್ನಷ್ಟು ದುಡಿಯಲು ಮುಂದಾಗುತ್ತೀರಿ.