ಬಿಗ್ ನ್ಯೂಸ್: ದಾಖಲೆ ಸೃಷ್ಟಿಮಾಡಿದ ರವಿ ಮಾಮ. ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೆಹಿತರೇ, ವೀಕೆಂಡ್ ಬಂದ್ರೆ ಸಾಕು ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಹಬ್ಬವೇ ನಡೆಯುತ್ತದೆ, ಕಾಮಿಡಿ ಶೋಗಳು, ಗಾಯನ, ಡ್ಯಾನ್ಸ್ ಎಲ್ಲವೂ ಮೈಮನ ತಣಿಸುತ್ತೆ. ಅದರಲ್ಲೂ ಪುಟಾಣಿ ಮಕ್ಕಳು ವೇದಿಕೆ ಹತ್ತಿದ್ರೆ ಸಾಕು, ಸಿಳ್ಳೆ, ಚಪ್ಪಾಳೆಗಳ ಸುರಿಮಳೆ. ನಿಮ್ಮ ಊಹೆ ಸರಿಯಾಗಿದೆ. ನಾವು ಡ್ರಾಮಾ ಜ್ಯೂನಿಯರ್ಸ್ ಶೋ ಬಗ್ಗೆಯೇ ಮಾತನಾಡುತ್ತಿದ್ದೇವೆ.
ಡ್ರಾಮಾ ಜ್ಯೂನಿಯರ್ಸ್ ನ 4ನೇ ಆವೃತ್ತಿ ಈಗಾಗಲೇ ಆರಂಭವಾಗಿದೆ. ಕೇಜಿಸ್ಟಾರ್ ರವಿಚಂದ್ರನ್, ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ಹಾಗೂ ಹಿರಿಯ ನಟಿ ಲಕ್ಷ್ಮಿಯವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಎಂದಿನಂತೆ ಮಾ. ಆನಂದ ಅವರ ಹಾಸ್ಯ ನಿರೂಪಣೆಯೂ ಡ್ರಾಮಾ ಜ್ಯೂನಿಯರ್ಸ್ ನ ಮೆರುಗನ್ನು ಹೆಚ್ಚಿಸಿದೆ.
ಡ್ರಾಮಾ ಜ್ಯೂನಿಯರ್ಸ್ ನ್ನು ಜೀ ಕನ್ನಡ ಆರಂಭ ಮಾಡಿದಾಗಿನಿಂದ ಅದೆಂಥ ಪ್ರತಿಭೆಗಳು ವೇದಿಕೆಯ ಮೆಲೆ ಬಂದು ಹೋಗಿದ್ದರು ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಹಳೆಯ ಕೆಲವು ಸಂಚಿಕೆಗಳ ಎಪಿಸೋಡ್ ಗಳ ತುಣುಕುಗಳನ್ನ ಮಾ. ಆನಂದ್ ತೋರಿಸುತ್ತಿದ್ದಂತೆ ಜಡ್ಜ್ ಗಳೂ ಕೂಡ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

ಹಾಗಂತ ಈ ಬಾರಿ ಸ್ವರ್ಧೆಗಿಳಿದಿರುವ ಮಕ್ಕಳೂ ಕೂಡ ಯಾವುದಕ್ಕೂ ಕಡಿಮೆಯಿಲ್ಲ. ಒಬ್ಬರಿಗಿಂತ ಒಬ್ಬರು ಚುರುಕು. ಈಸಲ ಬಂದಿರುವ ಮಕ್ಕಳು ಮನೆ ಪಾಠ ಹೇಳಿಸಿಕೊಳ್ಳುವುದಕ್ಕಿಂತ ನೇರವಾಗಿ ಸೆಲೆಕ್ಟ್ ಆದವರೇ ಹೆಚ್ಚು. ಅಷ್ಟರ ಮಟ್ಟಿಗೆ ತಮ್ಮ ಪ್ರತಿಭೆಯನ್ನ ತೋರಿಸುತ್ತಿದ್ದಾರೆ. ಇನ್ನು ಈ ವಾರಾಂತ್ಯದ ಎಪಿಸೋಡ್ ನಲ್ಲಿ ಕಲ್ಪನಾ ಪಾತ್ರದಲ್ಲಿ ರಿಧಿ ಸಾಗರ್ ಅಭಿನಯಿಸಿದ್ದರು. ಅವರಂತೆ ರಚಿತಾ ರಾಮ್ ಕೂಡ ನಟಿಸಿ ಕೊನೆಗೆ ಭಾವುಕರಾದರು. ಇಲ್ಲಿ ಮಕ್ಕಳು ನಗುತ್ತಾರೆ, ನಗಿಸುತ್ತಾರೆ, ಅಳುತ್ತಾರೆ ಅಳಿಸುತ್ತಾರೆ. ವೇದಿಕೆಯ ಮುಂಭಾಗದಲ್ಲಿರುವ ತೀರ್ಪುಗಾರರು ಮಾತ್ರವಲ್ಲ ವೀಕ್ಷಕರೂ ಕೂಡ ಮಕ್ಕಳ ಪ್ರತಿಭೆಗೆ ತಲೆಬಾಗುತ್ತಾರೆ.
ಅಂದಹಾಗೆ ಈ ಕಾರ್ಯಕ್ರಮವನ್ನ ಜಡ್ಜ್ ಮಾಡುವುದಕ್ಕೆ ವಿ. ರವಿಚಂದ್ರನ್ ಅವರು ಪದೇಯುವ ಸಂಭಾವನೆ ಎಷ್ಟು ಗೊತ್ತೆ? ಸಾಮಾನ್ಯವಾಗಿ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಸೆಲಿಬ್ರೆಟಿಗಳೇ ತೀರ್ಪುಗಾರರಾಗಿರುವುದರಿಂದ ಅವರ ಸಂಭಾವನೆಯೂ ಹೆಚ್ಚಾಗಿಯೇ ಇರುತ್ತದೆ. ಸದ್ಯ ರವಿಚಂದ್ರನ್ ಅವರು ಒಂದು ಎಪಿಸೋಡ್ ಗೆ 1.3 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಉಳಿದವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.