ವಿಜಯ್ ರಾಘವೇಂದ್ರ ರವರ ಐಷಾರಾಮಿ ಮನೆ ಹೇಗಿದೆ ಗೊತ್ತಾ, ಬೆಲೆ ಎಷ್ಟು ಕೋಟಿ ಗೊತ್ತೇ, ಯಪ್ಪಾ ಇಷ್ಟೊಂದಾ?? ಮೊದಲ ಬಾರಿಗೆ ತೋರಿಸ್ತೇವೆ.
ನಮಸ್ಕಾರ ಸ್ನೇಹಿತರೇ ಬಾಲ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನಟಿಸಿ ನಂತರ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟರಾಗಿ ಕಾಣಿಸಿಕೊಂಡವರು ವಿರಳಾತಿವಿರಳ ಎಂದು ಹೇಳಬಹುದಾಗಿದೆ. ಆದರೆ ಅವರಲ್ಲಿ ವಿಶೇಷವಾಗಿ ನಿಲ್ಲುವವರು ನಮ್ಮ ಚಿನ್ನಾರಿ ಮುತ್ತ ವಿಜಯರಾಘವೇಂದ್ರ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೋಗುತ್ತಿರುವುದು ಕೂಡ ಅವರ ಕುರಿತಂತೆ.
ಸಿನಿಮಾ ಹಿನ್ನೆಲೆ ಹೊಂದಿರುವಂತಹ ಕುಟುಂಬದಿಂದ ಬಂದರೂ ಕೂಡ ಚಿತ್ರರಂಗಕ್ಕೆ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಕಾಲಿಟ್ಟವರು ವಿಜಯ್ ರಾಘವೇಂದ್ರ. ನಿಜಕ್ಕೂ ಕೂಡ ವಿಜಯ್ ರಾಘವೇಂದ್ರ ರವರು ಜೀವನದಲ್ಲಿ ಅನುಭವಿಸಿದಂತಹ ಕಷ್ಟ ಹಾಗೂ ಪರಿಶ್ರಮ ಅವರ ಇಂದಿನ ಯಶಸ್ವಿ ಜೀವನಕ್ಕೆ ಕಾರಣ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ವಿಜಯ್ ರಾಘವೇಂದ್ರ ಅವರು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಆರಂಭದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದರು. ಅದರಲ್ಲೂ ಮಹಿಳಾ ಪ್ರೇಕ್ಷಕರ ನೆಚ್ಚಿನ ನಟನಾಗಿ ವಿಜಯ್ ರಾಘವೇಂದ್ರ ರವರು ಕಾಣಿಸಿಕೊಂಡಿದ್ದರು. ಚಿನ್ನಾರಿ ಮುತ್ತ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಆರಂಭದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡರು ಕೂಡ ಬರಬರುತ್ತಾ ಅವರ ಬೇಡಿಕೆ ಎನ್ನುವುದು ಚಿತ್ರರಂಗದಲ್ಲಿ ಕಡಿಮೆಯಾಯಿತು. ಇದಕ್ಕೆ ಅವರು ಆಯ್ಕೆ ಮಾಡುತ್ತಿದ್ದ ಚಿತ್ರದ ಕಥೆಗಳು ಕೂಡ ಕಾರಣ ಎನ್ನುವುದು ಮುಚ್ಚಿಡುವ ಮಾತೇನಲ್ಲ. ಒಂದು ಲೆಕ್ಕದಲ್ಲಿ ಅವರು ತಮ್ಮ ವೃತ್ತಿಜೀವನವನ್ನು ಸರಿಯಾದ ಮಾರ್ಗ ದಲ್ಲಿ ಕರೆದುಕೊಂಡು ಹೋಗುವುದರಲ್ಲಿ ಎಡವಿದರು ಎನ್ನಬಹುದು.
ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳ ಮೂಲಕ ವಿಜಯ್ ರಾಘವೇಂದ್ರ ರವರು ಸದ್ದು ಮಾಡುತ್ತಿರುವುದು ಕೂಡ ಸಂತೋಷದಾಯಕ ವಿಚಾರ. ಹೌದು ಕೆಲವು ಸಮಯಗಳ ಹಿಂದಷ್ಟೆ ಬಿಡುಗಡೆಯಾಗಿರುವ ಸೀತಾರಾಮ್ ಬಿನೊಯ್ ಹಾಗೂ ಮಾಲ್ಗುಡಿ ಡೇಸ್ ಚಿತ್ರಗಳು ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಕೊಂಚಮಟ್ಟಿಗೆ ಯಶಸ್ವಿ ಆಗಿದೆ ಎಂದರೆ ತಪ್ಪಾಗಲಾರದು. ವಿಮರ್ಶಕರಿಂದಲೂ ಕೂಡ ಈ ಚಿತ್ರಗಳು ಶಹಬಾಸ್ ಗಿರಿಯನ್ನು ಪಡೆದುಕೊಂಡಿವೆ.
ಇನ್ನು ಇವರು ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗು ದೊಡ್ಡಮಟ್ಟದ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಮೂಲಕ ಮತ್ತೊಮ್ಮೆ ಪ್ರಚಲಿತಕ್ಕೆ ಬರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿರೂಪಣೆ ಮಾಡುವಂತಹ ಈ ಕಾರ್ಯಕ್ರಮದ ಮೊದಲ ಸೀಸನ್ ನಲ್ಲಿ ಮೂಲಕ ಮತ್ತೊಮ್ಮೆ ಸುದ್ದಿಗೆ ಬರುತ್ತಾರೆ. ಇದಾದ ನಂತರ ಹಲವಾರು ವಿಶೇಷ ಕಾರ್ಯಕ್ರಮಗಳಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದಂತಹ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಕೂಡ ನಟಿ ಲಕ್ಷ್ಮಿ ಹಾಗೂ ಮುಖ್ಯಮಂತ್ರಿ ಚಂದ್ರು ಮತ್ತು ಟಿ ಸೀತಾರಾಮ್ ರವರ ಜೊತೆಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಈಗ ಜೀ ಕನ್ನಡ ವಾಹಿನಿಯಿಂದ ಹೊರಬಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಮೇಘನರಾಜ್ ರವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು ಕಂಡಂತಹ ದಕ್ಷ ಪೊಲೀಸ್ ಅಧಿಕಾರಿ ಗಳಲ್ಲಿ ಒಬ್ಬರಾಗಿರುವ ಬಿಕೆ ಶಿವರಾಮ್ ರವರ ಪುತ್ರಿಯಾಗಿರುವ ಸ್ಪಂದನ ರವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಈ ದಂಪತಿಗಳಿಗೆ ಒಬ್ಬ ಮಗನಿದ್ದು ಈತನ ಹೆಸರು ಶೌರ್ಯ ರಾಘವೇಂದ್ರ ಎನ್ನುವುದಾಗಿ. ಇತ್ತೀಚಿಗಷ್ಟೇ ವಿಜಯರಾಘವೇಂದ್ರ ರವರು ಭವ್ಯವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವಂತಹ ದೊಡ್ಡ ವಿಚಾರ.
ಈಗ ಸದ್ದು ಮಾಡುತ್ತಿರುವುದು ಈ ಮನೆಯ ಬೆಲೆಯ ವಿಚಾರ. ವಿಜಯ್ ರಾಘವೇಂದ್ರ ಹಾಗೂ ಅವರ ಪತ್ನಿಯ ಸದಭಿರುಚಿಗೆ ತಕ್ಕಂತೆ ಮನೆ ನಿರ್ಮಾಣವಾಗಿದ್ದು ಮನೆಯ ಬೆಲೆ ಬರೋಬ್ಬರಿ 5 ಕೋಟಿ ಎನ್ನಲಾಗುತ್ತಿದೆ. ಇನ್ನು ಮನೆ ಹೇಗಿದೆ ಎನ್ನುವುದಾಗಿ ನೀವು ಕೂಡ ಈ ಭಾವಚಿತ್ರಗಳಲ್ಲಿ ನೋಡಬಹುದಾಗಿದೆ. ನಟ ವಿಜಯ್ ರಾಘವೇಂದ್ರ ಹಾಗೂ ಅವರ ಮನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.