RRR ಗಾಗಿ ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡುವ ವಿಷಯ ತಿಳಿದಾಗ ಜೂನಿಯರ್ ಎನ್ಟಿಆರ್ ಶಿವಣ್ಣನವರಿಗೆ ಕರೆಮಾಡಿ ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾಗಳು ಬಿಡುಗಡೆ ಆದಾಗಲೆಲ್ಲ ಕ್ಲಾಸ್-ಮಾಸ್ ಹಾಗೂ ಫ್ಯಾಮಿಲಿ ಆಡಿಯನ್ಸ್ ಎಲ್ಲರೂ ಕೂಡ ತಮ್ಮ ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದರು. ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನು ನೋಡಲು ಕೂಡ ಪ್ರತಿಯೊಬ್ಬರು ತಮ್ಮ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಜೇಮ್ಸ್ ಚಿತ್ರ ಪಕ್ಕಾ ಕಮರ್ಷಿಯಲ್ ಸಿನಿಮಾ ವಾಗಿದ್ದರೂ ಕೂಡ ಎಲ್ಲರೂ ನೋಡಿ ಕಣ್ಣೀರು ಹಾಕಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮ ದಿನದಂದು ಬಿಡುಗಡೆಯಾದಂತಹ ಜೇಮ್ಸ್ ಚಿತ್ರ ಇಂದಿನವರೆಗೂ ಕೂಡ ಎಲ್ಲಾ ಸಿನಿಮಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಪ್ರತಿಯೊಂದು ಥಿಯೇಟರ್ಗಳಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಅನ್ನೋ ಜೇಮ್ಸ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಡಿದೆ ಎಂದರೆ ತಪ್ಪಾಗಲಾರದು. ಜೇಮ್ಸ ಚಿತ್ರದ ಬಿಡುಗಡೆಗೂ ಮುನ್ನವೇ ಎಂಟು ದಿನಗಳ ಅಡ್ವಾನ್ಸ್ ಬುಕಿಂಗ್ ಕೂಡ ನಡೆದಿತ್ತು ಎನ್ನುವುದು ಇದರ ಜನಪ್ರಿಯತೆಗೆ ನಾವು ಹೇಳುವಂತಹ ಒಂದು ಜೀವಂತ ಉದಾಹರಣೆಯಾಗಿದೆ.

ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಬಿಡುಗಡೆಯಾದ ಒಂದು ವಾರದ ಅಂತರದಲ್ಲಿ ದಕ್ಷಿಣ ಭಾರತದ ಅತ್ಯಂತ ಬಹುನಿರೀಕ್ಷಿತ ಚಿತ್ರವಾಗಿರುವ ಆರ್ ಆರ್ ಆರ್ ರಾಜ್ಯದಲ್ಲಿ ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿದೆ. ಆರ್ ಆರ್ ಆರ್ ಚಿತ್ರದ ಬಿಡುಗಡೆಗಾಗಿ ರಾಜ್ಯಾದ್ಯಂತ 500ಕ್ಕೂ ಹೆಚ್ಚಿನ ಪರದೆಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಕನ್ನಡಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರವನ್ನು ಕೂಡ ಎತ್ತಂಗಡಿ ಮಾಡುವುದಕ್ಕಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಎಂಬುದಾಗಿ ಕೇಳಿಬರುತ್ತಿವೆ.

ಈ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕೂಡ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಕೂಡ ಹಲವಾರು ಬಾರಿ ವರದಿಯಾಗಿತ್ತು. ಇನ್ನು ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ವಾಣಿಜ್ಯ ಮಂಡಳಿಗೆ ಹೋಗಿ ಈ ಕುರಿತಂತೆ ಚರ್ಚೆ ಮಾಡಿದ್ದಾರೆ ಎಂಬುದಾಗಿ ಕೂಡ ಇತ್ತೀಚಿನ ವರದಿಗಳಲ್ಲಿ ಕೇಳಿಬಂದಿದೆ. ಇತ್ತೀಚಿಗಷ್ಟೇ ಜೇಮ್ಸ್ ಚಿತ್ರತಂಡ ಸಕ್ಸೆಸ್ ಮೀಟ್ ಕೂಡ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಈ ಕುರಿತಂತೆ ಜೂನಿಯರ್ ಎನ್ಟಿಆರ್ ಕರೆಮಾಡಿ ಮಾತನಾಡಿದ್ದನ್ನು ಕೂಡ ಶಿವಣ್ಣ ನೆನಪಿಸಿಕೊಂಡಿದ್ದಾರೆ.
ಮೊದಲಿನಿಂದಲೂ ಕೂಡ ಜೂನಿಯರ್ ಎನ್ಟಿಆರ್ ರವರ ಕುಟುಂಬಕ್ಕೂ ಅಣ್ಣಾವ್ರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪು ಅವರೊಂದಿಗೂ ಕೂಡ ಸಹೋದರತ್ವದ ಸಂಬಂಧವನ್ನು ಜೂನಿಯರ್ ಎನ್ಟಿಆರ್ ಹೊಂದಿದ್ದಾರೆ. ಇನ್ನು ಶಿವಣ್ಣನವರಿಗೆ ಕರೆ ಮಾಡಿರುವ ಜೂನಿಯರ್ ಎನ್ಟಿಆರ್ ಅವರು ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಮಾಧ್ಯಮದವರ ಸುಳ್ಳು ಮಾತುಗಳಿಗೆ ಕಿವಿ ಕೊಡಬೇಡಿ ಜೇಮ್ಸ ಚಿತ್ರಕ್ಕೆ ಆರ್ ಆರ್ ಆರ್ ಚಿತ್ರದಿಂದ ಯಾವುದೇ ತೊಂದರೆ ಆಗುತ್ತೆ ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ಆಶ್ವಾಸನೆ ನೀಡಿದ್ದಾರೆ.

ಇನ್ನು ಕೇವಲ ಜೂನಿಯರ್ ಎನ್ಟಿಆರ್ ಮಾತ್ರವಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಶಿವಣ್ಣನವರಿಗೆ ಕರೆ ಮಾಡಿ ಜಯಂ ಚಿತ್ರದ ಜೊತೆಗೆ ನಾವೆಲ್ಲ ಇದ್ದೇವೆ ಕನ್ನಡ ಚಿತ್ರಕ್ಕೆ ಮೋಸವಾಗದು ನಾವು ಬಿಡುವುದಿಲ್ಲ ಎಂಬುದಾಗಿ ದೈರ್ಯ ಹೇಳಿದ್ದನ್ನು ಕೂಡ ಈ ವೇದಿಕೆಯ ಮೇಲೆ ಶಿವಣ್ಣನವರು ನೆನಪಿಸಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.