ನಿಮ್ಮ ಜೀವನದಲ್ಲಿ ಸದಾ ಲಕ್ಷ್ಮೀ ಕೃಪಾಕಟಾಕ್ಷ ಇರಬೇಕು ಎಂದರೆ, ಜಸ್ಟ್ ನಿಮ್ಮ ಈ ಗುಣಗಳನ್ನು ಬದಲಾಯಿಸಿ ಸಾಕು. ಏನು ಮಾಡ್ಬೇಕು ಗೊತ್ತೇ??

23

ನಮಸ್ಕಾರ ಸ್ನೇಹಿತರೇ, ಯಶಸ್ಸಿನ ಕೀಲಿಕೈ, ಇದು ಒಬ್ಬ ವ್ಯಕ್ತಿಯ ಯಶಸ್ಸು ಮತ್ತು ಗೌರವವನ್ನು ಹೊಂದಲು ಬಯಸಿದರೆ ಅಥವಾ ಕೆಲವು ವಿಷಯಗಳ ಬಗ್ಗೆ ಕಾಳಜಿವಹಿಸಬೇಕು ಎಂಬುದನ್ನು ತಿಳಿಸುತ್ತದೆ. ಒಂದು ವೇಳೆ ಯಶಸ್ಸು ಸಿಕ್ಕರೂ ಅಥವಾ ಸಿಗುವುದಕ್ಕಿಂತ ಮೊದಲು ಆ ವ್ಯಕ್ತಿ ದುರಹಂಕಾರವನ್ನು ತೋರಿಸಿದರೆ ಅವನ ಮನೆಗೆ ಲಕ್ಷ್ಮೀದೇವಿ ಎಂದಿಗೂ ಬರುವುದಿಲ್ಲ. ಜೀವನದಲ್ಲಿ ಹಲವು ಪ್ರಮುಖ ಪಾತ್ರ ವಹಿಸುತ್ತದೆ ಆದರೆ ಹಣ ಬಂದಾಗ ಅತಿಯಾದ ದುರಂಕಾರ ಪಡುವುದು ತಪ್ಪು. ಹಾಗಾಗಿ ನಿಮ್ಮನ್ನು ಈ ಗುಣಗಳಿದ್ದರೆ ನಿಮಗೆಲ್ಲ ಲಕ್ಷ್ಮಿ ಉಳಿಯಲು ಸಾಧ್ಯವೇ ಇಲ್ಲ.

ಮೊದಲನೆಯದಾಗಿ ಯಾವತ್ತೂ ಅಹಂಕಾರವನ್ನು ತೋರಿಸಬೇಡಿ. ಯಶಸ್ಸು ಸಿಕ್ಕಾಗ ತಾವು ಯಶಸ್ಸಿಗಾಗಿ ಹೋರಾಡಿದ ದಿನಗಳನ್ನು ಮರೆಯಬಾರದು ಯಾಕೆಂದರೆ ಅಹಂಕಾರ ನಮ್ಮನ್ನು ಆವರಿಸಿಕೊಂಡರೆ ನಮ್ಮಿಂದ ದೂರ ಆಗಬಹುದು. ಜೊತೆಗೆ ಲಕ್ಷ್ಮೀದೇವಿ ಯಾವುದೇ ರೀತಿಯಲ್ಲಿಯೂ ನಿಮಗೆ ಸಹಕಾರವನ್ನು ಕೊಡುವುದಿಲ್ಲ. ಅಹಂಕಾರ ನಮ್ಮ ದೊಡ್ಡ ಶತ್ರು ಎಂಬುದನ್ನು. ಭಗವದ್ಗೀತೆಯಲ್ಲಿ ಕೂಡ ಶ್ರೀ ಕೃಷ್ಣ ವಿವರಿಸಿದ್ದಾನೆ.

ಎರಡನೆಯದಾಗಿ ದುರಾಸೆ. ಸಾಧನೆಯನ್ನು ಮಾಡಬೇಕು ಸರಿ ಆದರೆ ಅತಿಯಾಗಿ ಯಾವುದನ್ನಾದರೂ ಬಯಸಿದರೆ ಅದು ದುರಾಸೆ ಅನಿಸಿಕೊಳ್ಳುತ್ತದೆ ದುರಾಸೆ ಪಡುವ ವ್ಯಕ್ತಿ ಸ್ವಾರ್ಥಿ ಆಗುತ್ತಾನೆ. ಸ್ವಾರ್ಥಿ ವ್ಯಕ್ತಿಯ ಬಳಿ ಲಕ್ಷ್ಮಿ ನೆಲೆಸಲು ಸಾಧ್ಯವೇ ಇಲ್ಲ .ಜೊತೆಗೆ ಇಂತಹ ವ್ಯಕ್ತಿಗೆ ಯಾವುದೇ ರೀತಿಯ ಗೌರವ ಸಿಗುವುದಿಲ್ಲ. ಇನ್ನು ಸ್ವಾರ್ಥಿಯಾದ ಮನುಷ್ಯ ತನ್ನ ಸ್ವಂತ ಲಾಭಕ್ಕಾಗಿ ಇಂಥವರನ್ನು ಮೋಸ ಗೊಳಿಸಬಹುದು ಹಾಗಾಗಿ ಸ್ವಾರ್ಥದಿಂದ ಮುಕ್ತವಾಗಿ ಯಾವುದೇ ಕೆಲಸವನ್ನು ಮಾಡಲು ಹೊರಟರೆ ಆ ವ್ಯಕ್ತಿಗೆ ಗೌರವ ಸಿಗುತ್ತದೆ.

ಮುಂದಿನದು ಕೋಪ. ಕೋಪಿಷ್ಟರ ಜೊತೆ ಲಕ್ಷ್ಮಿ ಎಂದಿಗೂ ಇರುವುದಿಲ್ಲ ಎಂದು ಯಶಸ್ಸಿನ ಕೀಲಿಕೈ ಹೇಳುತ್ತದೆ. ಶ್ರೀಕೃಷ್ಣ ಹೇಳುವ ಪ್ರಕಾರ ವ್ಯಕ್ತಿಯ ದೊಡ್ಡ ಶತ್ರು ಎಂದರೆ ಅದು ಕೋಪ. ಕೋಪಗೊಂಡ ವ್ಯಕ್ತಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಪರಿಗಣಿಸುವುದಿಲ್ಲ. ಹಾಗಾಗಿ ಕೋಪಗೊಳ್ಳುವ ವ್ಯಕ್ತಿಯೊಂದಿಗೆ ಲಕ್ಷ್ಮಿಯು ಎಂದಿಗೂ ನೆನೆಸುವುದಿಲ್ಲ.

ಇನ್ನು ಹಣ ನಿಮ್ಮ ಕೈಸೇರಿದಾಗ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಯಾವುದೇ ರೀತಿಯಲ್ಲಿಯೂ ದುರುಪಯೋಗ ಮಾಡಿಕೊಳ್ಳಬಾರದು. ಯಾವಾಗ ಹಣದ ಬೆಲೆ ಗೊತ್ತಿಲ್ಲದೆ ವ್ಯಕ್ತಿ ದುರುಪಯೋಗಪಡಿಸಿಕೊಳ್ಳಲು ಆರಂಭಿಸುತ್ತಾನೆ ಆಗ ಲಕ್ಷ್ಮೀದೇವಿಯು ಕೈಬಿಡುತ್ತಾರೆ. ಇದರಿಂದ ವ್ಯಕ್ತಿ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬಹುದು. ಇನ್ನು ಶ್ರೀಮಂತನಾಗಲು ಲಕ್ಷ್ಮಿಯ ಅನುಗ್ರಹ ಹೇಗೆ ಬೇಕೋ ಹಾಗೆ ದುಷ್ಟ ಬುದ್ಧಿ ಇಟ್ಟುಕೊಂಡರೆ ಅಂತವರಿಗೆ ಲಕ್ಷ್ಮಿ ಎಂದಿಗೂ ಒಲಿಯುವುದಿಲ್ಲ. ಹಾಗಾಗಿ ವ್ಯಕ್ತಿಯು ಯಾವುದೇ ತಪ್ಪುಗಳನ್ನು ಮಾಡದೆ ದುಷ್ಟ ಬುದ್ಧಿಯನ್ನು ಹೊಂದಿರದೇ ಅಹಂಕಾರವನ್ನು ಬಿಟ್ಟು ಸಾಧನೆಯ ದಾರಿ ಹಿಡಿದಾಗ ಮಾತ್ರ ಲಕ್ಷ್ಮಿಯು ಕೈ ಹಿಡಿಯುತ್ತಾಳೆ ಮತ್ತು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ಯುತ್ತಾಳೆ.