ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಜಾಹ್ನವಿ ಹಾಗೂ ಗೃಂಥ್ ನಿಜಕ್ಕೂ ಯಾರು ಗೊತ್ತಾ?? ಗೆಲುವು ಇವರದ್ದೇನಾ??

461

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಕಾರ್ಯಕ್ರಮಗಳು ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ತಮ್ಮ ಪ್ರೇಕ್ಷಕರಿಗಾಗಿ ಪ್ರಸಾರ ಮಾಡುವಲ್ಲಿ ಯಶಸ್ವಿಯಾಗಿವೆ. ಅದಕ್ಕೆ ಉದಾಹರಣೆಯನ್ನು ಅಂತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ಎಂದು ಹೇಳಬಹುದಾಗಿದೆ.

ಈ ಕಾರ್ಯಕ್ರಮ ಅಮ್ಮ ಹಾಗೂ ಮಕ್ಕಳ ಬಾಂಧವ್ಯವನ್ನು ವಿವಿಧ ಮಜಲುಗಳಲ್ಲಿ ಮನರಂಜನಾತ್ಮಕವಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಡುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ಇದು ಫಿನಾಲೆ ಹಂತಕ್ಕೂ ಕೂಡ ಬಂದು ತಲುಪಿದೆ. ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸೃಜನ್ ಲೋಕೇಶ್ ನಟಿ ತಾರಾ ಹಾಗೂ ಅನುಪ್ರಭಾಕರ್ ಅವರು ಕಾಣಿಸಿಕೊಂಡಿದ್ದು ನಿರೂಪಕರಾಗಿ ಕಿರುತೆರೆಯ ಖ್ಯಾತ ನಟಿ ಅನುಪಮಾ ಅವರು ಕಾಣಿಸಿಕೊಂಡಿದ್ದಾರೆ.

4 ತಿಂಗಳುಗಳಿಂದ ಪ್ರಸಾರ ಕಾಣುತ್ತಿದ್ದೆ ನಮ್ಮಮ್ಮ ಸೂಪರ್ಸ್ಟಾರ್ ಕೊನೆಗೂ ಕೂಡಿದ ಫಿನಾಲೆ ಹಂತವನ್ನು ತಲುಪಿದೆ. ನಿರೀಕ್ಷೆಯಂತೆ ಕಾರ್ಯಕ್ರಮವು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದೆ. ಫೈನಲ್ ಚಿತ್ರೀಕರಣ ಇಂದಿನಿಂದ ಆರಂಭವಾಗಿದ್ದು ಮುಂದಿನ ವಾರಾಂತ್ಯದ ಒಳಗಡೆ ಪ್ರಸಾರವಾಗಲಿದೆ. ಎನ್ನುವುದಾಗಿ ತಿಳಿದು ಬಂದಿದೆ. ಇನ್ನು ಫೈನಲಿಗೆ ತೇರ್ಗಡೆಯಾಗಿರುವ ಅಂತಹ ಆರು ಅಮ್ಮ ಮಕ್ಕಳ ಜೋಡಿ ಎಂದರೆ ಅದು ಯಶಸ್ವಿನಿ ಹಾಗೂ ವಂಶಿಕ ಜಾಹ್ನವಿ ಹಾಗೂ ಗ್ರಂತ್ ಸುಪ್ರೀತಾ ಹಾಗೂ ಇಬ್ಬನಿ ವಿಂದ್ಯಾ ಹಾಗೂ ರೋಹಿತ್ ನಂದಿನಿ ಹಾಗೂ ಅದ್ವಿತ್ ಪುನೀತ್ ಹಾಗೂ ಆರ್ಯ. ಇವರಿಷ್ಟು ಅಮ್ಮ ಮಕ್ಕಳ ಜೋಡಿ ವಿಜೇತರ ಸ್ಥಾನಕ್ಕಾಗಿ ಪೈಪೋಟಿ ಮಾಡುತ್ತಿದ್ದಾರೆ.

ಈಗಾಗಲೇ ತೆರೆಮರೆಯ ಹಿಂದೆ ಫೈನಲಿಗೆ ಭರ್ಜರಿ ತಯಾರಿ ನಡೆದಿದ್ದು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಆದರೆ ನಿಮಗೆ ತಿಳಿದಿರಲಿ ಈ ಬಾರಿ ವಿಜೇತರನ್ನು ಆಯ್ಕೆ ಮಾಡುವಂತಹ ಅವಕಾಶ ಜನರ ಕೈಯಲ್ಲಿದೆ. ಹೌದು ಈ ಬಾರಿ ಅತ್ಯಂತ ಹೆಚ್ಚು ವೋಟ್ ಗೆಲ್ಲುವವರು ವಿಜೇತರಾಗಿ ಪ್ರಥಮ ಬಹುಮಾನ ವಾಗಿರುವ 10 ಲಕ್ಷ ರೂಪಾಯಿಗಳನ್ನು ಗೆಲ್ಲಲಿದ್ದಾರೆ. ಈಗಾಗಲೇ ವರದಿಗಳು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸ್ನೇಹಿತರು ಹಾಗೂ ಹಿತೈಷಿಗಳ ಮೂಲಕ ತಮಗೆ ವೋಟ್ ಮಾಡಿ ಗೆಲ್ಲಿಸಿ ಎನ್ನುವುದರ ಕುರಿತಂತೆ ಪ್ರಚಾರ ಮಾಡಲು ಆರಂಭಿಸಿದ್ದಾರೆ. ಈಗಾಗಲೇ ವೋಟಿಂಗ್ ಲೈನ್ ಗಳು ಕೂಡ ಓಪನ್ ಆಗಿವೆ.

ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಹಲವಾರು ಜನರು ತಮಗೆ ಇಷ್ಟವಾಗಿರುವ ಸ್ಪರ್ಧಿಗಳ ಫೋಟೋಗಳನ್ನು ಹಂಚಿಕೊಂಡು ಎಲ್ಲರ ಬಳಿ ಇವರಿಗೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಜಾಹ್ನವಿ ಹಾಗೂ. ಗ್ರಂಥ್ ರವರಿಗೆ ಸಪೋರ್ಟ್ ಮಾಡಲು ಬಂದಿರುವ ವ್ಯಕ್ತಿಯ ಕುರಿತಂತೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ಮೋಹಕ ತಾರೆ ರಮ್ಯಾ ರವರೇ ಸ್ವತಃ ಜಾಹ್ನವಿ ಹಾಗೂ ಗ್ರಂಥ್ ರವರ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೋಟ್ ಮಾಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ದೇಶದಾದ್ಯಂತ ಜನಪ್ರಿಯತೆ ಹೊಂದಿರುವ ರಮ್ಯಾರವರು ಯಾಕೆ ಜಾಹ್ನವಿ ರವರಿಗೆ ಸಪೋರ್ಟ್ ಮಾಡಬೇಕು ಎನ್ನುವುದಾಗಿ ನೀವು ಯೋಚಿಸುತ್ತಿರಬಹುದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜಾಹ್ನವಿ ಅವರು ಹಲವಾರು ವರ್ಷಗಳಿಂದ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಕೆಲಸ ಮಾಡಿದವರು. ಹೀಗಾಗಿ ಅವರು ಸಾಕಷ್ಟು ಸೆಲೆಬ್ರಿಟಿಗಳ ಜೊತೆಗೆ ನಿಕಟ ಸಂಬಂಧವನ್ನು ಕೂಡ ಹೊಂದಿದ್ದಾರೆ. ಹೀಗೆ ಇಂತಹ ಆತ್ಮೀಯ ಸಂಬಂಧವನ್ನು ಹೊಂದಿರುವಂತಹ ಸ್ನೇಹಿತರಲ್ಲಿ ನಟಿ ರಮ್ಯಾ ರವರು ಕೂಡ ಒಬ್ಬರು ಎನ್ನುವುದಾಗಿ ಹೇಳಲಾಗುತ್ತಿದೆ.

ಸಾಮಾನ್ಯವಾಗಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವಂತೆ ರಮ್ಯಾರವರು ಆಗಾಗ ಹೊಸಬರಿಗೆ ಹಾಗೂ ಪ್ರತಿಭಾನ್ವಿತರಿಗೆ ಸಪೋರ್ಟ್ ಮಾಡುವುದನ್ನು ನೋಡಿರುತ್ತೀರಿ. ಈಗ ನಟಿ ರಮ್ಯಾ ಅವರು ತಮ್ಮ ಗೆಳತಿ ಯಾಗಿರುವ ಜಾಹ್ನವಿ ಹಾಗೂ ಗ್ರಂಥ್ ರವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಫಿನಾಲೆ ರಂಗೇರಿದ್ದು ಯಾರು ಗೆಲ್ಲಬಹುದು ಎನ್ನುವ ಕುರಿತಂತೆ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿದೆ. ನಿಮ್ಮ ಪ್ರಕಾರ ಈ ಬಾರಿ ಯಾರು ಗೆಲ್ಲಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.