ಸಿಹಿ ಸುದ್ದಿ ಕೊಟ್ಟ ಗಟ್ಟಿಮೇಳ ನಟಿ ಅದಿತಿ ಹಾಗೂ ಧೃವ. ಅಭಿಮಾನಿಗಳಿಗೆ ಹಾಗೂ ಧಾರವಾಹಿ ತಂಡಕ್ಕೆ ಸಂತೋಷವೋ ಸಂತೋಷ.

6,166

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ಸರಿಸಮನಾಗಿ ಧಾರವಾಹಿಗಳು ಕೂಡ ಜನಪ್ರಿಯತೆಯನ್ನು ಪಡೆಯುತ್ತಿದ್ದು ನಿಮಗೆ ಈ ಕುರಿತಂತೆ ಚೆನ್ನಾಗಿ ತಿಳಿದಿದೆ. ಇನ್ನು ಅದರಲ್ಲೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರವಾಹಿ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿದ್ದು ಇಂದಿಗೂ ಕೂಡ ರೇಟಿಂಗ್ ವಿಚಾರದಲ್ಲಿ ಸತತವಾಗಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಧಾರವಾಹಿ ಯಿಂದಾಗಿ ಹಲವಾರು ಜನರ ಬದುಕು ಎನ್ನುವುದು ಬದಲಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು.

ಇನ್ನು ಗಟ್ಟಿಮೇಳ ಧಾರವಾಹಿ ವಿಚಾರಕ್ಕೆ ಬಂದರೆ ಈ ಧಾರವಾಹಿಯಿಂದಾಗಿ ಹಲವಾರು ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂಬುದನ್ನು ಕೂಡ ನಾವು ಒಪ್ಪಿಕೊಳ್ಳಲೇಬೇಕು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟ ರಕ್ಷ್ ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ ಪಾತ್ರವನ್ನು ನಿರ್ವಹಿಸಿ ಪ್ರತಿಯೊಬ್ಬ ಕಿರುತೆರೆಯ ವೀಕ್ಷಕರ ನೆಚ್ಚಿನ ವೇದಾಂತ ಆಗಿಯೇ ಮಾರ್ಪಡುತ್ತಾರೆ.

ನಟಿ ಅಮೂಲ್ಯ ರವರು ಕೂಡ ಹಾಗೆ ಗಟ್ಟಿಮೇಳ ಧಾರಾವಾಹಿ ಅವರಿಗೆ ಎಷ್ಟು ಜನಪ್ರಿಯತೆ ತಂದುಕೊಟ್ಟಿತ್ತು ಎಂದರೆ ತೆಲುಗಿನ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಒಂದು ತಿಂಗಳಲ್ಲಿ ಮೊದಲ 15 ದಿನ ಕನ್ನಡದಲ್ಲಿ ನಟಿಸಿದರೆ ಇನ್ನೊಂದು 15 ದಿನ ತೆಲುಗಿನಲ್ಲಿ ನಟಿಸುವಷ್ಟು ಬ್ಯುಸಿಯಾಗಿದ್ದಾರೆ. ಒಟ್ಟಾರೆಯಾಗಿ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದೆ ಗಟ್ಟಿಮೇಳ ಧಾರಾವಾಹಿ ನಟಿಸುವ ಕಲಾವಿದರಿಗೆ ಆರ್ಥಿಕವಾಗಿ ಕೂಡ ಸುರಕ್ಷತೆಯನ್ನು ತಂದುಕೊಟ್ಟಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ನಟಿಸುತ್ತಿರುವ ಎಲ್ಲಾ ಕಲಾವಿದರಿಗೂ ಕೂಡಾ ಬದುಕನ್ನು ಕಟ್ಟಿಕೊಟ್ಟಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ನಟ ವೇದಾಂತ್ ರವರು ಈ ಧಾರಾವಾಹಿಯಿಂದಾಗಿ ನಟನಿಂದ ನಿರ್ಮಾಪಕನಾಗಿ ಕೂಡ ಭಡ್ತಿ ಪಡೆದಿದ್ದಾರೆ. ಹೌದು ಕಳೆದ ವರ್ಷದಿಂದ ಗಟ್ಟಿಮೇಳ ಚಿತ್ರದ ನಿರ್ಮಾಪಕನಾಗಿ ತಮ್ಮ ಪತ್ನಿ ಅನುಷಾ ರವರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ವೇದಾಂತ್ ರವರು ಗಟ್ಟಿಮೇಳ ಧಾರವಾಹಿಯ ನಿರ್ಮಾಪಕರಾದ ನಂತರ ಹಲವಾರು ಬದಲಾವಣೆಗಳು ಕೂಡ ಕಾಣಿಸುತ್ತದೆ. ಈ ಸಂದರ್ಭದಲ್ಲಿ ಮಹಾಮಾರಿ ಕೂಡ ಇದ್ದ ಕಾರಣದಿಂದಾಗಿ ಧಾರವಾಹಿಯ ರೇಟಿಂಗ್ ತುಂಬಾನೇ ಕೆಳಮಟ್ಟದಲ್ಲಿ ಕಾಣಿಸುತ್ತಿತ್ತು. ನಾಲ್ಕನೇ ಹಾಗೂ 5ನೇ ಸ್ಥಾನಗಳಲ್ಲಿ ಗಟ್ಟಿಮೇಳ ಧಾರವಾಹಿಯ ರೇಟಿಂಗ್ ಕುಸಿದಿತ್ತು. ನಂತರ ವೇದಾಂತ್ ರವರು ನಿರ್ಮಾಪಕರಾಗಿ ಧಾರವಾಹಿಯ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಾರೆ ಕೇವಲ ಇಷ್ಟು ಮಾತ್ರವಲ್ಲದೆ ಬಿಟ್ಟುಹೋಗಿದ್ದ ಕೆಲ ಕಲಾವಿದರನ್ನು ಕೂಡ ವಾಪಾಸು ಕರೆಸಿಕೊಳ್ಳುತ್ತಾರೆ. ಈಗ ಧಾರವಾಹಿ ಪ್ರಸಾರವಾಗಿ ನಾಲ್ಕು ವರ್ಷಗಳು ಕಳೆದಿದ್ದರೂ ಕೂಡ ರೇಟಿಂಗ್ ನಲ್ಲಿ ದ್ವಿತೀಯ ಸ್ಥಾನದಲ್ಲಿ ಮಿಂಚುತ್ತಿದೆ. ಮತ್ತೆ ಧಾರವಾಹಿಯ ಜನಪ್ರಿಯತೆ ಮರುಕಳಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ವೇದಾಂತ್ ತಾನು ಧಾರವಾಹಿಯ ನಿರ್ಮಾಪಕರಾದ ಮೇಲಿಂದ ಕೇವಲ ತನ್ನನ್ನೇ ಹೈಲೈಟ್ ಮಾಡಿಕೊಳ್ಳದೆ ಬೇರೆ ಪಾತ್ರಗಳಿಗೂ ಕೂಡ ಪ್ರಮುಖ ನೆಲೆಯನ್ನು ಧಾರವಾಹಿಯಲ್ಲಿ ಇತ್ತೀಚಿನ ದಿನಗಳಲ್ಲಿ ತೋರಿಸುತ್ತಿದ್ದಾರೆ. ಇದು ಕೂಡ ಜನರು ಅವರನ್ನು ಮೆಚ್ಚುವಂತೆ ಮಾಡಿದೆ. ಇನ್ನು ಧಾರವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ ತರಲು ಯೋಚಿಸಿದ್ದಾರೆ. ಈಗಾಗಲೇ ಗಟ್ಟಿಮೇಳ ಧಾರಾವಾಹಿ ವೇದಾಂತ್ ಅಮೂಲ್ಯ ಹಾಗೂ ವಿಕಿ ಮತ್ತು ಆರತಿಯ ಲವ್ ಸ್ಟೋರಿ ನೋಡಿ ಜನರು ಬೋರ್ ಆಗಿರಬಹುದು ಎನ್ನುವ ಕಾರಣಕ್ಕಾಗಿ ಹೊಸ ಲವ್ ಸ್ಟೋರಿಯನ್ನು ತಂದಿದ್ದಾರೆ. ಹೌದು ತಮ್ಮನ ಪಾತ್ರವಾಗಿರುವ ಧ್ರುವ ಹಾಗೂ ಆದಿತ್ಯ ನಡುವಿನ ಪ್ರೀತಿಯ ಸಂಚಿಕೆಗಳನ್ನು ಈಗ ಪ್ರಸಾರ ಮಾಡಲು ಆರಂಭಿಸಿದ್ದಾರೆ.

ಈಗ ವೇದಾಂತ್ ರವರ ಈ ಪ್ಲಾನ್ ಕೂಡ ವರ್ಕೌಟ್ ಆದಂತಿದೆ. ಯಾಕೆಂದರೆ ದ್ರುವ ಹಾಗೂ ಅಧಿತಿ ನಡುವಿನ ಲವ್ ಸ್ಟೋರಿಯನ್ನು ಪ್ರೇಕ್ಷಕರು ಕೂಡ ಎಂಜಾಯ್ ಮಾಡಲು ಆರಂಭಿಸಿದ್ದಾರೆ. ಆದರೆ ಒಂದೇ ಮನೆಯ ಹೆಣ್ಣು ಮಕ್ಕಳನ್ನು ಮೂರು ಸಹೋದರರು ಕೂಡ ಪ್ರೀತಿಸುತ್ತಿರುವುದು ಮದುವೆಯಾಗುತ್ತಿರುವುದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕಾಲ್ ಎಳೆಯುತ್ತಿರುವುದು ಕೂಡ ಕಂಡುಬರುತ್ತಿದೆ. ಒಟ್ಟಾರೆಯಾಗಿ ಈ ಲವ್ ಸ್ಟೋರಿ ಸಂಚಿಕೆಗಳನ್ನು ಈಗ ಪ್ರೇಕ್ಷಕರು ಎಂಜಾಯ್ ಮಾಡಲು ಆರಂಭಿಸಿದ್ದಾರೆ ಇದು ರೇಟಿಂಗ್ ವಿಚಾರದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ವೇದಾಂತ್ ರವರ ಲೆಕ್ಕಾಚಾರವಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.