ಇಂದು ಸಾವಿರಾರು ಕೋಟಿಯ ಒಡೆಯನಾಗಿರುವ ಡಿ ಬಾಸ್, ಅಂದು ತಂದೆ ತೀರಿಕೊಂಡಾದ ಮಾಡಿದ ಸಾಲ ಎಷ್ಟು ಗೊತ್ತೇ??ತಿಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ ಕಣ್ರೀ.

37

ನಮಸ್ಕಾರ ಸ್ನೇಹಿತರೇ ಈ ಪ್ರಪಂಚದಲ್ಲಿ ಇಂದು ಹೇಗಿದ್ದೇವೋ ನಾಳೆ ಯಾವ ಸ್ಥಿತಿಯಲ್ಲಿ ಇರುತ್ತೇವೆ ಎನ್ನುವುದನ್ನು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಶ್ರೀಮಂತರಾಗಿದ್ದರು ನಾಳೆ ದಿನ ಬಡವರಾಗಿ ಕೂಡ ಮಾರ್ಪಾಡಾಗಬಹುದಾಗಿದೆ. ಭಿಕ್ಷೆ ಬೇಡಿಕೊಂಡು ಓಡಾಡುತ್ತಿರುವವರು ಕೂಡ ನಾಳೆ ದಿನ ಕೋಟ್ಯಾಧಿಪತಿ ಕೂಡ ಆಗಬಹುದಾಗಿದೆ. ನಮ್ಮ ಜೀವನ ಎನ್ನುವುದು ಅನಿಶ್ಚಿತತೆಗಳ ಸಾಗರ ಎಂದರೆ ತಪ್ಪಾಗಲಾರದು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ಕಲಾವಿದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಂದೆ ತೂಗುದೀಪ್ ಶ್ರೀನಿವಾಸ್ ರವರು ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಖಳನಾಯಕನಾಗಿ ಕೂಡ ಕಾಣಿಸಿಕೊಂಡವರು. ಆದರೆ ಕೊನೆಯಲ್ಲಿ ಅವರಿಗೆ ಒಂದು ಲೀಟರ್ ಹಾಲು ತರುವಷ್ಟು ಹಣವು ಕೂಡ ಇರಲಿಲ್ಲ ಎನ್ನುವುದು ವಿಷಾದನೀಯ ವಿಚಾರ. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನೀನಾಸಂನಲ್ಲಿ ನಟನೆಯ ತರಬೇತಿ ಕಲಿಯುತ್ತಿದ್ದರು.

ನೀನಾಸಂನಲ್ಲಿ ನಟನೆಯನ್ನು ಕಲಿಯುತ್ತಿದ್ದಾಗ ದರ್ಶನ್ ರವರ ಬಳಿ ಬಿಡುಗಾಸು ಕೂಡ ಇರುತ್ತಿರಲಿಲ್ಲ. ಹೀಗಿದ್ದರೂ ಹೇಗೋ ಜೀವನವನ್ನು ಕಳೆಯುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ದರ್ಶನ ರವರಿಗೆ ತಮ್ಮ ನೆಚ್ಚಿನ ತಂದೆಯ ಮರಣದ ಸುದ್ದಿ ಸಿ’ಡಿಲಿನಂತೆ ಬಂದಪ್ಪಳಿಸುತ್ತದೆ. ನೀನಾಸಂನಿಂದ ತಂದೆಯ ಕೊನೆಯ ಕಾರ್ಯಕ್ಕೆ ಸಾಕ್ಷಿಯಾಗಲು ಮೈಸೂರಿಗೆ ಬರಲು ದರ್ಶನ ರವರ ಬಳಿ ಒಂದು ರೂಪಾಯಿ ಹಣ ಕೂಡ ಇರಲಿಲ್ಲ.

ಈ ಸಂದರ್ಭದಲ್ಲಿ ಅವರಿಗೆ ಸಹಾಯಕ್ಕೆ ಆಗಿದ್ದು ನೀನಾಸಂನಲ್ಲಿ ಅಡುಗೆಯವರಾಗಿದ್ದ ರತ್ನ ಎನ್ನುವವರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಐನೂರು ರೂಪಾಯಿಯನ್ನು ನೀಡಿ ಕಳುಹಿಸುತ್ತಾರೆ. ಆ ಹಣದಿಂದ ಮೈಸೂರಿಗೆ ಬಂದಂತಹ ದರ್ಶನ್ ಅವರು ತಮ್ಮ ತಂದೆಯ ಕೊನೆಯ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಅಷ್ಟೊಂದು ಕಷ್ಟಪಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಕನ್ನಡ ಚಿತ್ರರಂಗದ ಟಾಪ್ ನಾಯಕನಟನಾಗಿ ಮಿಂಚುತ್ತಿದ್ದಾರೆ.

ಆದರೆ ಇನ್ನು ಇಷ್ಟೊಂದು ಸುಖದಸುಪ್ಪತಿಗೆಯಲ್ಲಿ ತೇಲಾಡುತ್ತಿರುವ ದರ್ಶನ್ ಅವರನ್ನು ನೋಡಲು ಅವರ ತಂದೆ ಬದುಕಿಲ್ಲ ಎನ್ನುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರ. ಜೀವನ ಒಂದು ಕೊಟ್ಟರೆ ಇನ್ನೊಂದು ಕಸಿಯುತ್ತದೆ ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳು ಎಂಬುದಾಗಿ ಕರೆಯುತ್ತಾರೆ ಎನ್ನುವುದು ಕೂಡ ನಿಮಗೆ ತಿಳಿದಿದೆ.

ಅಭಿಮಾನಿಗಳಿಗೆ ಸೂಕ್ತವಾದ ಸಲಹೆಗಳನ್ನು ಕೂಡ ಆಗಾಗ ನೀಡುತ್ತಾರೆ. ಕೆಲವೊಮ್ಮೆ ಹೊರಗಿನಿಂದ ಒರಟಾಗಿ ಕಂಡರೂ ಕೂಡ ಅವರ ಮನಸ್ಸು ಎನ್ನುವುದು ಹಾಲಿನಷ್ಟೆ ಪರಿಶುದ್ಧ ಎನ್ನುವುದು ಅವರ ಅಭಿಮಾನಿಗಳಿಗೆ ಹಾಗೂ ಅವರನ್ನು ಪ್ರೀತಿಸುವವರಿಗೆ ತಿಳಿದಿದೆ. ನಿಜಕ್ಕೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ನಡೆದು ಬಂದ ಹಾದಿ ಇಂದಿನ ಯುವ ಜನತೆಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಯಾರೇ ಹೊಸಬರು ಬಂದರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗಕ್ಕೆ ಸ್ವಾಗತಿಸುವಲ್ಲಿ ಮೊದಲಿಗರಾಗಿರುತ್ತಾರೆ.

ಇನ್ನು ಕೇವಲ ಇಷ್ಟು ಮಾತ್ರವಲ್ಲದೆ ಯಾರೇ ಕೂಡ ಕಷ್ಟಕ್ಕೆ ಸಹಾಯ ಕೇಳಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮನೆಯ ಬಳಿಗೆ ಬಂದರೆ ಅವರನ್ನು ಬರಿಗೈಯಲ್ಲಿ ಡಿ-ಬಾಸ್ ರವರು ಇಂದಿಗೂ ಕೂಡ ಹಿಂದೆ ಕಳಿಸಿಲ್ಲ. ಈ ಕಾರಣಕ್ಕಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಲ್ಲರಿಗೂ ಇಷ್ಟವಾಗುತ್ತಾರೆ. ನೀವು ಕೂಡ ದರ್ಶನ್ ಅವರ ಅಭಿಮಾನಿ ಆಗಿದ್ದರೆ ಯಾವ ಕಾರಣಕ್ಕಾಗಿ ನೀವು ದರ್ಶನ್ ರವರ ಅಭಿಮಾನಿ ಆಗಿದ್ದೀರಿ ಅನ್ನುವುದನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.