RRR ಚಿತ್ರದ ಕರ್ನಾಟಕದಲ್ಲಿ ನಡೆದಂತಹ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಹೋದ ಶಿವಣ್ಣ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?? ಯಪ್ಪಾ ಒಂದಕ್ಕೆ ಇಷ್ಟೊಂದಾ??

43

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆರ್ ಆರ್ ಆರ್ ಚಿತ್ರ ಈಗಾಗಲೇ ನಿನ್ನೆಯಿಂದ ಪ್ರದರ್ಶನ ಪ್ರಾರಂಭಿಸಿ ಅದ್ದೂರಿಯಾಗಿ ದೇಶವಿದೇಶಗಳಲ್ಲಿ ದಾಖಲೆಯ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಗಳಿಸುತ್ತಿದೆ. ರಾಜಮೌಳಿ ನಿರ್ದೇಶನದ ಸಿನಿಮಾಗಳು ಎಂದರೆ ಕೇಳಬೇಕೆ ಬಾಕ್ಸಾಫೀಸ್ ನಲ್ಲಿ ಖಂಡಿತವಾಗಿ ನೂರಾರು ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಮೂಲಗಳಿಂದ ತಿಳಿದು ಬಂದಿರುವಂತೆ ಚಿತ್ರ 400ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದೆ.

ಪ್ರತಿಯೊಂದು ಫ್ರೇಮ್ಗಳಲ್ಲಿ ಕೂಡ ಚಿತ್ರದ ಅದ್ದೂರಿತನ ಹಾಗೂ ಶ್ರೀಮಂತಿಕೆಯನ್ನು ವುದು ಎದ್ದುಕಾಣುತ್ತಿದೆ. ಈಗಾಗಲೇ ಮೊದಲ ದಿನವೇ ಬರೋಬ್ಬರಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಆರ್ ಆರ್ ಆರ್ ಚಿತ್ರ ಖಂಡಿತವಾಗಿ ಬಾಹುಬಲಿ ದಾಖಲೆಯನ್ನು ಮುರಿದೇ ಮುರಿಯುತ್ತದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಚಿತ್ರ ಬಿಡುಗಡೆಗೂ ಮುನ್ನವೇ 500 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನುವುದು ಕೂಡ ಮತ್ತೊಂದು ಮೆಚ್ಚ ಬೇಕಾದಂತಹ ವಿಚಾರ. ಒಟ್ಟಾರೆಯಾಗಿ ಭಾರತ ಚಿತ್ರರಂಗದ ಮಾರುಕಟ್ಟೆಯನ್ನು ನೆಕ್ಸ್ಟ್ ಲೆವೆಲ್ಲಿಗೆ ರಾಜಮೌಳಿಯವರು ಕೊಂಡೊಯ್ಯುತ್ತಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ.

ಸದ್ಯಕ್ಕೆ ನಾವು ಮಾತನಾಡಲು ಹೊರಟಿರುವುದು ಆರ್ ಆರ್ ಆರ್ ಚಿತ್ರದ ಬಿಡುಗಡೆಗೂ ಮುನ್ನ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಪಡೆದುಕೊಂಡಿರುವ ಅಂತಹ ಸಂಭಾವನೆ ಈಗ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು ಕನ್ನಡ ಚಿತ್ರರಂಗದಲ್ಲಿ ಲೀಡರ್ ಎಂದೇ ಗುರುತಿಸಿಕೊಂಡಿರುವ ಶಿವಣ್ಣ ಆರ್ ಆರ್ ಆರ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಇದಕ್ಕಾಗಿ ಅವರು ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆದಿರುವುದು ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇನ್ನು ಚಿತ್ರ ಕರ್ನಾಟಕದಲ್ಲಿ ಕೂಡ ಮೊದಲ ದಿನವೇ 14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಕೂಡ ಮತ್ತೊಂದು ವಿಶೇಷ ಸಂಗತಿ ಎಂದು ಹೇಳಬಹುದಾಗಿದೆ. ಚಿತ್ರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.