ಸಿಂಧು ರವರ ಆಟ ಗೊತ್ತು, ಆದರೆ ಡಾನ್ಸ್ ನೋಡಿದ್ದೀರಾ?? ಪಿ ವಿ ಸಿಂಧೂ ರವರು ಕಚ್ಚಾ ಬಾದಾಮ್ ಹಾಡಿಗೆ ಹೇಗೆ ಡಾನ್ಸ್ ಮಾಡಿದ್ದಾರೆ ಗೊತ್ತೇ??

5,856

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ವಿಡಿಯೋ ಪೋಸ್ಟ್ ಮಾಡುವುದು ಜಾಸ್ತಿ ಆಗಿಬಿಟ್ಟಿದೆ. ಕೆಲವೊಂದು ವೈರಲ್ ವಿಡಿಯೋಗಳು ಬಿಡುಗಡೆಯಾದ ನಂತರ ಅವುಗಳನ್ನು ಸೆಲೆಬ್ರಿಟಿಗಳು ಟ್ರೆಂಡ್ ಎನ್ನುವುದಾಗಿ ವಿಡಿಯೋ ಮಾಡಲು ಪ್ರಾರಂಭಿಸುತ್ತಾರೆ. ಇಂತಹ ವೈರಲ್ ವೀಡಿಯೋ ಗಳಿಂದಾಗಿ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆದವರು ಕೂಡ ಇದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಒಂದು ಹಾಡು ದೊಡ್ಡಮಟ್ಟದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ಸದ್ದು ಮಾಡುತ್ತಿದೆ.

ಹೌದು ಬಂಗಾಳದಲ್ಲಿ ಕಡಲೆಕಾಯಿ ಬೀಜಗಳನ್ನು ಮಾರಾಟ ಮಾಡಿಕೊಂಡಿದ್ದ ಭುವನ್ ಎನ್ನುವಾತ ಹಾಡಿದ ಕಚ ಬಾದಾಮ್ ಎನ್ನುವ ಹಾಡು. ಈ ಹಾಡಿಗೆ ಈಗಾಗಲೇ ಎಲ್ಲರೂ ಡ್ಯಾನ್ಸ್ ಮಾಡಿದ್ದಾರೆ. ಈಗ ಈ ಹಾಡಿಗೆ ಡ್ಯಾನ್ಸ್ ಮಾಡುವ ಸರದಿ ನಮ್ಮ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಪಿವಿ ಸಿಂಧು ರವರದ್ದು. ನಿಮಗೆಲ್ಲರಿಗೂ ತಿಳಿದಿರುವಂತೆ ಪಿ ವಿ ಸಿಂಧೂ ರವರು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಎಷ್ಟೆಲ್ಲ ಸಾಧನೆ ಮಾಡಿದ್ದಾರೆ ಎನ್ನುವುದು.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಪಿವಿ ಸಿಂದು ಅವರು ಸಖತ್ ಆಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ನಾವು ಈಗ ಮಾತನಾಡಲು ಹೊರಟಿರುವುದು ಅವರ ಹೊಸ ವೈರಲ್ ಆಗಿರುವ ವಿಡಿಯೋದ ಕುರಿತಂತೆ. ಹೌದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿರುವ ಕಚಾ ಬಾದಾಮ್ ಹಾಡಿಗೆ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಪಿವಿ ಸಿಂಧು ರವರು ಸ್ಟೆಪ್ ಹಾಕಿರುವ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆ ಹಾಗೂ ಮೆಚ್ಚುಗೆಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪಡೆದುಕೊಂಡಿದೆ. ಈ ವಿಡಿಯೋವನ್ನು ನೀವು ಕೂಡ ನೋಡಬಹುದಾಗಿದ್ದು ತಪ್ಪದೇ ಈ ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.