ಕೊನೆಗೂ ಬಂತು ಫೈನಲ್. ಯಾರಾಗಲಿದ್ದಾರೆ ಗೊತ್ತಾ ಸೂಪರ್ ಸ್ಟಾರ್ ಅಮ್ಮ, ಯಾರು ಗೆಲ್ಲಬಹುದು ಗೊತ್ತೇ??

210

ನಮಸ್ಕಾರ ಸ್ನೇಹಿತರೇ, ನಮ್ಮಮ್ಮ ಸೂಪರ್ ಸ್ಟಾರ್ ಶೋ ಕರ್ನಾಟಕದಲ್ಲಿ ಒದು ಹೊಸ ಅಲೆಯನ್ನೇ ಸೃಷ್ಟಿಸಿದೆ. ಯಾಕಂದ್ರೆ ಹೊಸ ಕಲ್ಪನೆಯೊಂದಿಗೆ ಪ್ರಸಾರವಾದ ಈ ಕಾರ್ಯಕ್ರಮ ಕೇವಲ ರಿಯಾಲಿಟಿ ಶೋ ಮಾತ್ರವಲ್ಲ, ಇದೊಂದು ಭಾವನಾತ್ಮಕ ಶೋ, ಅನುಬಂಧವನ್ನ, ತಾಯಿ ಮಕ್ಕಳ ಸಂಬಂಧವನ್ನ ಅನಾವರಣಗೊಳಿಸುವ ಶೋ ಕೂಡ ಆಗಿತ್ತು. ಇದರಲ್ಲಿ ಬಂತ ತರ್ಲೆ ಮಕ್ಕಳು ಅಮ್ಮಂದಿರನ್ನು ಎಷ್ಟು ಗೋಳೊಯ್ದುಕೊಳ್ಳುತ್ತಾರೆ, ಹಾಗೆಯೇ ಅಮಂದಿರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಕೂಡ ರಿವೀಲ್ ಆಗಿತ್ತು.

ಅಂದಹಾಗೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕರಮ ಕೊನೆಯ ಹಂತವನ್ನ ತಲುಪಿದೆ. ಇನ್ನೇನು ಮುಂದಿನ ವಾರ ಫಿನಾಲೆ ಎಪಿಸೋಡ್ ಗಳು ಪ್ರಸಾರವಾಗಲಿದ್ದು ಈಗಾಗಲೇ ಆರು ಜೋಡಿಗಳು ಫಿನಾಲೇ ಲಿಸ್ಟ್ ಸೇರಿವೆ. ಜಾಹ್ಮವಿ-ಗ್ರಂಥ್, ಸುಪ್ರಿತಾ-ಇಬ್ಬನಿ, ಯಶಸ್ವಿನಿ-ವಂಶಿಕಾ, ನಂದಿನಿ-ಅದ್ವಿತ್, ವಿಂದ್ಯಾ-ರೋಹಿತ್, ಪುನೀತ್-ಆರ್ಯನ್ ಫೈನಲ್ ಗೆ ಆಯ್ಕೆಯಾದ ಜೋಡಿಗಳು.

ಇನ್ನು ವೋಟಿಂಗ್ ಕೂಡ ಆರಭವಾಗಿದ್ದು, ಸ್ಪರ್ಧಿಗಳೂ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮಗೆ ವೋಟ್ ಮಾಡಿ ಅಂತ ಬೇರೆ ಬೇರೆ ರೀತಿಯಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಇದರೊಂದಿಗೆ ನಮ್ಮಮ್ಮ ಸೂಪರ್ ಸ್ಟಾರ್ ಟೈಟಲ್ ನ್ನು ಯಾರು ಗೆಲ್ಲಬಹುದು, ಯಾರು ಗೆಲ್ಲಬೇಕು ಎನ್ನುವ ಲೆಕ್ಕಾಚಾರಗಳೂ ವೀಕ್ಷಕರ ನಡುವೆ ಆರಂಭವಾಗಿದೆ.

ಇದರ ಜೊತೆ ಜೊತೆಯಲ್ಲಿ ಎಲ್ಲಾ ಸ್ಪರ್ಧಿಗಳು ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಫೈನಲ್ ಪರ್ಫಾರ್ಮೆನ್ಸ್ ಕೊಡೋದಕ್ಕೆ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ. ಈಗಾಗಲೇ ಸ್ಪರ್ಧಿಗಳ ಡ್ಯಾನ್ಸ್ ಪ್ರಾಕ್ಟೀಸ್ ಗಳು ಜೋರಾಗಿಯೇ ನಡೆದಿದೆ. ಸೋಮವಾರದಿಂದ ಫಿನಾಲೆಯ ಶೋಟಿಂಗ್ ಆರಂಭವಾಗಲಿದೆ ಅಂತ ಮೂಲಗಳು ತಿಳಿಸಿವೆ. ಇನ್ನು ವೋಟ್ ವಿಷಯಕ್ಕೆ ಸಂಬಂಧಪಟ್ಟಂತೆ ಕಂಟೆಸ್ಟೆಂಟ್ ಗಳ ಪ್ರಮೋಶನ್ ಗೆ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಜಾಹನ್ವಿ-ಗ್ರಂಥ್ ಗೆ ಸೆಲಿಬ್ರೆಟಿಗಳೂ ವಿಶ್ ಮಾಡಿದ್ದು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಜನರಿಂದಲೂ ಪ್ರಮೋಶನ್ ಕಾರ್ಯ ನಡೆಯುತ್ತಿದೆ. ಈ ಆರರಲ್ಲಿ ನಿಮ್ಮ ಫೇವರೇಟ್ ಜೋಡಿ ಯಾವುದು ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ.